ಜೂನ್ ಅಂತ್ಯದೊಳಗೆ ೭ನೇ ವೇತನ ಜಾರಿಯಾಗದಿದ್ದರೆ ಹೋರಾಟಕ್ಕೆ ಸಿದ್ದ-ಷಡಕ್ಷರಿ

Laxman Bariker
ಜೂನ್ ಅಂತ್ಯದೊಳಗೆ ೭ನೇ ವೇತನ ಜಾರಿಯಾಗದಿದ್ದರೆ ಹೋರಾಟಕ್ಕೆ ಸಿದ್ದ-ಷಡಕ್ಷರಿ
WhatsApp Group Join Now
Telegram Group Join Now

ಲಿಂಗಸೂಗೂರನಲ್ಲಿ ಜಿಲ್ಲಾ ಮಟ್ಟದ ನೌಕರರ ಸಮ್ಮೇಳನ::
ಜೂನ್ ಅಂತ್ಯದೊಳಗೆ ೭ನೇ ವೇತನ ಜಾರಿಯಾಗದಿದ್ದರೆ ಹೋರಾಟಕ್ಕೆ ಸಿದ್ದ-ಷಡಕ್ಷರಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ: ಕಾಂಗ್ರೆಸ್ ಸರಕಾರ ಆಶ್ವಾಸನೆ ಕೊಟ್ಟಂತೆ ೭ನೇ ವೇತನ ಆಯೋಗದ ಜಾರಿ ಹಾಗೂ ಓಪಿಎಸ್ ಜಾರಿ ಮಾಡಬೇಕಾಗಿದ್ದು ಜೂನ್ ಅಂತ್ಯದೊಳಗೆ ೭ನೇ ವೇತನ ಜಾರಿಯಾಗದಿದ್ದರೆ ಪುನಃ ಹೋರಾಟಕ್ಕೆ ಸಿದ್ದ ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿಯವರು ಹೇಳಿದರು


ಅವರು ಪಟ್ಟಣದ ಶಂಕರರಡ್ಡಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸರಕಾರಿ ನೌಕರರ ರಾಯಚೂರ ಜಿಲ್ಲಾ ಮಟ್ಟದ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ
ಕರ್ನಾಟಕ ರಾಜ್ಯದಲ್ಲಿ ಜನಸಂಖ್ಯೆ ೬.೫ ಕೋಟಿ ಇದ್ದು ಅದರ ಪ್ರಕಾರ ಸರಕಾರಿ ನೌಕರರ ನೇಮಕವಾಗಿಲ್ಲಾ ಶೇ೪೦% ಹುದ್ದೆಗಳು ಖಾಲಿದ್ದರು ಅಭಿವೃದ್ದಿಯಲ್ಲಿ ರಾಜ್ಯ ದೇಶದಲ್ಲಿ ಐದನೆ ಸ್ಥಾನ ಹೊಂದಿದೆ ಎಂದರು
ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ನೌಕರರು ಹಗಲು ರಾತ್ರಿ ಶ್ರಮಿಸಿ ಜನಕಲ್ಯಾಣಕ್ಕೆ ಮುಂದಾಗಿದ್ದು ನೌಕರರು ಪ್ರವಾಹ ಹಾಗೂ ಬರ ಇತರೆ ಸಮಯದಲ್ಲಿ ನೌಕರರು ತಮ್ಮ ವೇತನ ನೀಡಿರುವರು ಅಲ್ಲದೆ ಸರಕಾರದ ಎಲ್ಲಾ ಕಾರ್ಯಕ್ರಮಗಳನ್ನು ತಪ್ಪದೆ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಯಲ್ಲಿ ೬೦ಸಾವಿರ ಹುದ್ದೆಗಳು ಖಾಲಿ ಇವೆ. ಶಾಲಾ ಕಾಲೇಜುಗಳಲ್ಲಿ ಮೂಲಸೌಕರ್ಯ ಕೊರತೆ ಹಾಗೂ ಶೌಚಾಲಯಗಳು ಇಲ್ಲಾ ಸರಕಾರ ಹುದ್ದೆಗಳ ನೇಮಕಾತಿ ಮಾಡದೆ ಹೊರಗುತ್ತಿಗೆ ಏಜನ್ಸಿ ಮುಖಾಂತ ಪದವಿಧರರಿಗೆ ಕೆವಲ ೧೦-೧೫ ಸಾವಿರರೂ ನೀಡಲಾಗುತ್ತದೆ ನೌಕರರಿಗೆ ಕಾಲಕಾಲಕ್ಕೆ ಸೂಕ್ತ ಪರಿಹಾರ ನೀಡಬೇಕು ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದರು.
ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರಕಾರಿ ನೌಕರರು ಶಾಸಕಾಂಗ ಕಾರ್ಯಂಗ ನ್ಯಾಯಾಂಗ ಸಮಾನ ಕೆಲಸ ಮಾಡಬೇಕು ರಾಜ್ಯದ ಅಭಿವೃದ್ದಿಯಲ್ಲಿ ಸರಕಾರಿ ನೌಕರರ ಪಾತ್ರ ಮುಖ್ಯವಾಗಿದೆ ನೌಕರರು ಆತ್ಮಸಾಕ್ಷಿಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಬಡವರ ಸಾರ್ವಜನಿಕ ಸಹಕಾರ ಪಡೆಯಬೇಕೆಂದು ಹೇಳಿದರು.
ತಾ,ಪಂ ಇ,ಓ ಅಮರೇಶ  ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ನಿವೃತ್ತ ನೌಕರರ ಭೀಮಣ್ಣ ನಾಯಕ ಮಾತನಾಡಿದರು.
ಬಿಇಓ ಹುಂಬಣ್ಣ ರಾಠೋಡ. ಶರಣಪ್ಪ ಬಿ ಸಾಹುಕಾರ ಶ್ರೀನಿವಾಸ ತಿಮ್ಮೆಗೌಡ, ಮಲ್ಲಯ್ಯ ಮುರಾರಿ. ಎಚ್ ನಾಗಮ್ಮ, ಚಂದ್ರಶೇಖರ ರಡ್ಡಿ ಅಮರೇಶಪ್ಪ ಹೂನೂರ ಎಂವಿ ವೀರಭದ್ರಪ್ಪ. ಶಂಕರಗೌಡ,ಅಮರಪ್ಪಸಾಲಿ, ಚಂದ್ರಶೇಖರ ಹಿರೇಮಠ ಮಹಾದೇವಪ್ಪಗೌಡ ಬಾಲಸ್ವಾಮಿ ಮಸ್ಕಿ ಜಮದಗ್ನಿ.ಶ್ರೀಶೈಲ ಪ್ಪ
ಸಹಾಯಕ ನಿರ್ದೆಶಕ ಸಹಕಾರ ಇಲಾಖೆ ಚಂದ್ರಶೇಖರ ಕುಂಬಾರ ಉಪನ್ಯಾಸ ನೀಡಿದರುನಿವೃತ್ತ ನೌಕರರಿಗೆ ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳಿಗೆ ಹೊಸಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು
ಸ್ವಾಗತ ತಾಲೂಕು ನೌಕರರಸಂಘ ಅಧ್ಯಕ್ಷ ಹಾಜಿ ಬಾಬು ಕಲ್ಯಾಣಿ ಮಾಡಿದರು ಪ್ರಾಸ್ತಾವಿಕ ಮಹಾಂತೇಶ ಬಿರಾದರ ನಿರೂಪಣೆ ಚಿದನಂದ ಹಾಗೂ ಸಂಗಡಿಗರು ನಿರ್ವಹಿಸಿದರು,

WhatsApp Group Join Now
Telegram Group Join Now
Share This Article