ಹಿರಿಯ ರಾಜಕಾರಣಿ ಬಯ್ಯಾಪುರ ಸಿ,ಎಂ ಸ್ಥಾನಕ್ಕೆ ಪ್ರಯತ್ನಿಸಲಿ- ಇಟಗಿ

Laxman Bariker
ಹಿರಿಯ ರಾಜಕಾರಣಿ ಬಯ್ಯಾಪುರ ಸಿ,ಎಂ ಸ್ಥಾನಕ್ಕೆ ಪ್ರಯತ್ನಿಸಲಿ- ಇಟಗಿ
WhatsApp Group Join Now
Telegram Group Join Now

ಪದಗ್ರಹಣ ಹಾಗೂ ಕಾಂಗ್ರೆಸ್ ಪಕ್ಷದ ಸಮಾವೇಶ ಕಾರ್ಯಕ್ರಮ:೨ತಿಂಗಳಲ್ಲಿ ತಾ,ಪಂ ಜಿ,ಪಂ ಚುನಾವಣೆ ಬರಲಿವೆ!!
ಹಿರಿಯ ರಾಜಕಾರಣಿ ಬಯ್ಯಾಪುರ ಸಿ,ಎಂ ಸ್ಥಾನಕ್ಕೆ ಪ್ರಯತ್ನಿಸಲಿ- ಇಟಗಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಸುಮಾರು ಮರ‍್ನಾಲ್ಕು ದಶಕಗಳಿಂದ ರಾಜಕಾರಣ ಮಾಡುತ್ತಾ ಬಂದಿರುವ ಹಿರಿಯ ರಾಜಕಾರಣಿ ಅಮರೇಗೌಡ ಪಾಟೀಲ್ ಬಯ್ಯಾಪುರ ಸಿ,ಎಂ ಸ್ಥಾನದ ಅರ್ಹತೆ ಇದ್ದು ಅವರು ಯಾಕೆ ಪ್ರಯತ್ನಿಸಬಾರದು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಬಸವರಾಜ ಪಾಟೀಲ್ ಇಟಗಿಯವರು ಹೇಳಿದರು


ಅವರು ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದವತಿಯಿಮದ ಏರ್ಪಡಿಸಿದ ನಗರಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಮುಖಂಡರ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಅಮರೇಗೌಡರು ತಳಮಟ್ಟದಿಂದ ಬೆಳೆದುಬಂದವರು ಅವರಿಗೆ ಸಾಕಷ್ಟು ಅನುಭವವಿದ್ದು ಅವರು ಮುಖ್ಯಮಂತ್ರಿ ಸ್ಥಾನದ ಅರ್ಹತೆಯುಳ್ಳವರಿದ್ದಾರೆ ಎಂದರು
ಅಲ್ಲದೆ ಕಾಂಗ್ರೆಸ್ ಪಕ್ಷವು ಜನರ ಸಏವೆಗಾಗಿ ಬೆಳೆದುಬಂದ ಪಕ್ಷವಾಗಿದೆ ಭರ್ಗೆಯವರ ಪ್ರಯತ್ನದಿಂದಾಗಿ ಈ ಭಾಗಕ್ಕೆ ೩೭೧ ಜೆ ದೊರಕಿದ್ದು ಈ ಭಾಗದ ವಿದ್ಯಾರ್ಥಿಗಳಿ ಮೆಡಿಕಲ್ ಇಂಜನಿಯರಿAಗ್ ಸ್ಥಾನಗಳು ಹೆಚ್ಚುಹೆಚ್ಚು ಲಭಿಸುತ್ತಿವೆ ಜಿಲ್ಲೆಯಲ್ಲಿ ವಿವಿಧ ವಿಎಸ್ ಎಸ್ ಎನ್ ಹಾಗೂ ಪಿಎಲ್ಡಿ ಸೇರಿ ವಿವಿಧ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲುವಾಗಿದ್ದು ಇನ್ನೆರಡು ತಿಂಗಳಿನಲ್ಲಿ ಬರಲಿರುವ ತಾ,ಪಂ ಹಾಗೂ ಜಿ,ಪಂ ಚುನಾವಣೆಗಳಿಗೆ ಸಜ್ಜಾಗಿ ಎಂದು ಹೇಳಿದರು
ನಂತರ ಪಕ್ಷದ ಕಾರ್ಯಾಧ್ಯಕ್ಷರಾದ ಎ ವಸಂತಕುಮಾರ ಮಾತನಾಡುತ್ತಾ ಪ್ರಾಮಾಣಿಕವಾಗಿ ದುಡಿದವರಿಗೆ ಪಕ್ಷ ಆದ್ಯತೆ ನಿಡುತ್ತದೆ ಪಕ್ಷದಲ್ಲಿ ಎಲ್ಲಾ ಏರಿಳಿತಗಳನ್ನು ಸಹಿಸಿಕೊಂಡು ಒಗ್ಗಟ್ಟಾಗಿ ಮುನ್ನಡೆಯಬೇಕು ಒಡಕು ಒಳ್ಳೆಯದಲ್ಲಿ ಇಷ್ಟರಲ್ಲಿಯೆ ತಾ,ಪಂ ಜಿ,ಪಂ ಚುನಾವಣೆಗಳು ಬರಲಿವೆ ಸರಕಾರ ಜಾರಿಗೆ ತಂದ ಗ್ಯಾರಂಟಿಗಳು ಪಕ್ಷಕ್ಕೆ ಬಲವನ್ನು ನೀಡಿದ್ದು ಮುಂಬರುವ ಚುನಾವಣೆಯಲ್ಲಿಯು ಒಗ್ಗಟ್ಟಾಗಿ ಗೆಲ್ಲುವ ಯತ್ನ ಮಾಡಬೇಕು ಎಂದು ಹೇಳಿದರು
ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವೆ ಇರುವ ರಾಯಚೂರು ಜಿಲ್ಲೆಯಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕೃಷಿಗೆ ಉತ್ತೇಜನ ದೊರೆಯಬೇಕು ಹಾಗೆಯೆಯ ಇಲ್ಲಿ ಅಪಾರವಾದ ನೈಸರ್ಗಿಕ ಸಂಪತ್ತು ಇರುವುದರಿಂದ ಅದರ ಬಳಕೆ ಮಾಡಿಕೊಂಡು ತಲಾದಾಯ ಹೆಚ್ಚಿಸಬೇಕಗಿದೆ ಆಂಧ್ರ ನೀರಿನ ಸದುಪಯೋಗ ಪಡೆದಷ್ಟು ನಾವು ಪಡೆದುಕೊಂಡಿಲ್ಲ ಅಂತಹ ಪ್ರಯತ್ನಗಳ ನಡೆಯಬೇಕಾಗಿದೆ ಮಲ್ಲಿಕಾರ್ಜುನ ಖರ್ಗೆಯವರ ಪ್ರಯತ್ನದಿಂದ೩೭೧ ಜೆ ಜಾರಿಯಾಗಿದ್ದು ಈ ಭಾಗಕ್ಕೆ ಹೆಚ್ಚು ಅನುಕೂಲವಾಗಿದೆ ಎಂದರು ರಾಯಚೂರು ಕೊಪ್ಪಳ ಕ್ಷೇತ್ರದ ಎಂ ಎಲ್ ಸಿ ಶರಣಗೌಡ ಪಾಟಿಲ್ ಬಯ್ಯಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು
ಶಾಸಕ ಬಸನಗೌಡ ತುರುವಿಹಾಳ,ನಯೋಪ್ರಾ ನೂತನ ಅಧ್ಯಕ್ಷ ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ,ಡಿಜಿ ಗುರಿಕಾರ ಸೇರಿದಂತೆ ಹಲವರು ಮಾತನಾಡಿದರು
ಈ ಸಂದರ್ಭದಲ್ಲಿ ಗುಂಡಪ್ಪನಾಯಕ,ರಜಾಕ ಉಸ್ತಾದ, ಅಸ್ಲಂಪಾಶಾ, ಅನಿಸ್ ಪಾಷಾ, ಅಮರೇಶ ದಣಿ ನಾಡಗೌಡ, ಮಲ್ಲಿಕಾರ್ಜುನ ಯದ್ದಲದೊಡ್ಡಿ, ಆದೇಶನಾಯಕ, ಆದಪ್ಪ ಮನಗೂಳಿ, ಜಂಬನಗೌಡ ಕಾಚಾಪುರ ಸೇರಿದಂತೆ ಹಿರಿ ಕಿರಿಯ ಮುಖಂಡರು ಇದ್ದ

ಮೀಸಲಾತಿ ಬದಲಾವಣೆಯಾದರೆ ಕ್ಷೇತ್ರಕ್ಕೆ ಮರಳಿ ಬರುವೆ-ಬಯ್ಯಾಪುರ
ಲಿಂಗಸಗೂರು:ಮೀಸಲಾತಿ ಬದಲಾವಣೆಯಾದರೆ ಕ್ಷೇತ್ರಕ್ಕೆ ಮರಳಿ ಬರಬಹುದು ಬದಲಾವಣೆ ಜಗದ ನಿಯಮವಾಗಿದೆ ಎಂದು ಪರೋಕ್ಷವಾಗಿ ಕ್ಷೇತ್ರಕ್ಕೆ ಬರುವ ವಿಚಾರವನ್ನು ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು
ಅವರು ಪಟ್ಟಣದ ನಡೆದ ಪಕ್ಷದೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷವು ಸರ್ವರಿಗೂ ಸಮಪಾಲು ಎನ್ನುವಂತಹ ಪಕ್ಷವಾಗಿದೆ ಹಲವಾರು ಹಿಂದುಳಿದವರಿಗೆ ಅವಕಾಶ ನಿಡುತ್ತಾ ಬಂದಿದ್ದೇವೆ ಭೂಪನಗೌಡರು ಪ್ರಾರಂಭದಲ್ಲಿ ನಮ್ಮ ಪರವಾಗಿ ಕೆಲಸ ಮಾಡಿರಲಿಲ್ಲ ಆದರು ಅವರನ್ನು ನಯೋಪ್ರಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ ದುಡಿದವರಿಗೆ ಪಕ್ಷ ಗುರುತಿಸುತ್ತದೆ ಮುಂಬರುವ ಜಿ,ಪಂ ಹಾಗೂ ತಾ,ಪಂ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ
ಸವಾಲ್ ಗೆ ಜವಾಬ ನಡೆಯಲಿ ನಾವು ಸಿದ್ದ:ಇತ್ತೀಚೆಗೆ ಮಾಧ್ಯಮದ ಮೂಲಕ ಕೆಲವೊಬ್ಬರು ಪ್ರಶ್ನೆ ಮಾಡುತ್ತಿದ್ದಾರೆ ನಾವು ಪಕ್ಷಕ್ಕಾಗಿ ಏನು ಮಾಡಿದ್ದೇವೆ ಎನ್ನುವುದನ್ನು ಚರ್ಚಿಸಲು ಸವಾಲ್ ಜವಾಬ್ ವೇದಿಕಗೆ ನಾವು ತಯಾರು ಇದ್ದೇವೆಂದು ಅಮರೇಗೌಡ ಪಾಟೀಲ್ ಬಯ್ಯಾಪುರ ಸವಾಲ್ ಹಾಕಿದರು

WhatsApp Group Join Now
Telegram Group Join Now
Share This Article