ಜ್ಯೋತಿ ಸುಂಕದ ರಕ್ಷಾ ಸಮಿತಿಗೆ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಬಿಜೆಪಿ ಪಕ್ಷದ ಮಹಿಳಾ ಘಟಕದ ಮುಖಂಡರಾದ ಜ್ಯೋತಿ ಸುಂಕದರವರನ್ನು ಸಾರ್ವಜನಿಕ ಆಸ್ಪತ್ರೆಯ ರಕ್ಷಾ ಸಮಿತಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು ಅವರ ಆಯ್ಕೆಗೆ ಕಾರಣರಾದ ಶಾಸಕ ಮಾನಪ್ಪ ವಜ್ಜಲರನ್ನು ಸನ್ಮಾನಿಸಲಾಯಿತು
ಡಾ ಜ್ಯೋತಿ ಸುಂಕದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ಉತ್ತಮ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು ಅವರ ಸೇವೆಯನ್ನು ಗುರುತಿಸಿ ಅವರನ್ನು ತಾಲೂಕಾ ಸಾರ್ವಜನಿಕ ಆಸ್ಪತ್ರೆ ಆಯುಷ್ ಘಟಕ(ಆರ್ಯುವೇದ) ರಕ್ಷಾ ಸಮಿತಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದ್ದು ಸದರಿ ಸಮಿತಿಗೆ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ರೋಗಿಗಳ ಹಿತಕಾಪಾಡುವಂತೆ ಸೂಚಿಸಲಾಗಿದೆ
ಸದರಿ ಸಮಿತಿಗೆ ಶಾಸಕ ಮಾನಪ್ಪ ವಜ್ಜಲ್ ಅಧ್ಯಕ್ಷರಾಗಿದ್ದು ಶಿಕ್ಷಣ,ಅರಣ್ಯ, ಸಿಡಿಪಿಓ ಸೇರಿದಂತೆ ಇಲಾಖೆ ಅಧಿಕಾರಿಗಳು ಸದಸ್ಯರಾಗಿದ್ದಾರೆ ಮಂಜುನಾಥ ಬಸವರಾಜ ಹಾಗೂ ಜ್ಯೋತಿ ಸುಂಕದ ಅಧಿಕಾರೇತರ ಸದಸ್ಯರಾಗಿದ್ದಾರೆ
ಸನ್ಮಾನ:ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾಗುತ್ತಿರುವಂತೆ ಜ್ಯೋತಿ ಸುಂಕದ ಶಾಸಕ ಮಾನಪ್ಪ ವಜ್ಜಲರ ನಿವಾಸಕ್ಕೆ ತೆರಳಿ ಶಾಸಕರಿಗೆ ಶಾಲುಹಾರ ಹಾಕಿ ಸಿಹಿಹಂಚಿ ಸನ್ಮಾನಿಸಿದರು
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ಕರಿಯಪ್ಪ ವಜ್ಜಲ್ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಮಂಡಲ ಅಧ್ಯಕ್ಷರಾದ ಅಯ್ಯಪ್ಪ ವಕೀಲ ಮಾಳೂರು, ಮುದಕಪ್ಪನಾಯಕ ಹುಲ್ಲೆಶ ಸಾಹುಕಾರ, ಈಶ್ವರ ಎಂ ವಜ್ಜಲ್, ಜಗನ್ನಾಥ ಕುಲಕರ್ಣಿ ಪಕ್ಷದ ಎಲ್ಲಾ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ