ಜಾವೂರ:ನಾರಾಯಣಪುರ ಬಲದಂಡೆ ನಾಲೆಗೆ ಕಾಲುಜಾರಿ ಬಿದ್ದ ಬಾಲಕ,ಅಗ್ನಿಶಾಮಕ ದಳದಿಂದ ಹುಡುಕಾಟ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲ್ಲೂಕಿನ ರೋಡಲಬಂಡ-ಜಾವೂರ ಹತ್ತಿರ ದ ನಾರಾಯಣ ಪುರ ಬಲದಂಡೆ ನಾಲೆಯಲಿ ಬಾಲಕ ಕಾಲುಜಾರಿ ಬಿದ್ದ ಘಟನೆ ಜರುಗಿದ್ದು ಅಗ್ನಿ ಶಾಮಕದಳ ಹುಡುಕಾಟ ನಡೆಸಿದರ

ಬುಧವಾರ ಬೆಳಗ್ಗೆ ಬಾಲಕ ದಶರಥ ತಂದೆ ರಮೇಶ ಜವಳಗೇರಾ ವ9 ಎನ್ನುವ ಬಾಲಕ ಜಾವೂರ ಹತ್ತಿರ ದ ಬಹಿರ್ದೇಶಗೆ ಹೋಗಿ ನಾಲೆಯಲಿ ಕೈಕಾಲು ತೊಳೆಯಲು ನಾಲೆಗೆ ಇಳಿದಾಗ ಕಾಲುಜಾರಿ ಬಿದ್ದಿದ್ದಾನೆಂದು ಹೇಳಲಾಗುತಿದ್ದು ನಾಲೆಯಲಿ ಮುಳುಗಿದ ಬಾಲಕನ ಶವದ ಹುಡುಕಾಟವನ್ನು ಅಗ್ನಿಶಾಮಕ ದಳದಿಂದ ನಡೆದಿದೆ
ಮೂಲತಃ ಬಾಲಕನ ಊರು ಸಿಂಧನೂರು ತಾಲೂಕಿನ ಜವಳಗೇರಾ ಎಂದು ಹೇಳಲಾಗುತಿದ್ದು ಕೆಲವೆ ದಿನದ ಹಿಂದೆ ಬಾಲಕನ ತಂದೆ ಮೃತಪಟ್ಟಿದ್ದು ತಾಯಿಯ ತವರುಮನೆಯಾದ ಜಾವೂರಗೆ ಬಂದಿದ್ದರೆಂದು ಹೇಳಲಾಗುತಿದ್ದು ಇಂದು ಬೆಳಗ್ಗೆ ಬಾಲಕ ಕಾಲುಜಾರಿ ನಾಲೆಗೆ ಬಿದ್ದ ಸುದ್ದಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ
ಘಟನೆ ನಡೆದ ಸ್ಥಳದಲಿ ಸಾಕಷ್ಟು ಜನಸೇರಿದ್ದು ಕಂಡುಬಂತು


