ಗುರುಪೂರ್ಣಿಮಾ ನಿಮಿತ್ಯ ಸತ್ಯನಾರಾಯಣಪೂಜೆ::
ಸತ್ಯನಾರಾಯಣಪೂಜೆ ಮಾಡುವುದರಿಂದ ಸಕಲರಿಗೂ ಒಳಿತಾಗುತ್ತದೆ- ಹನಮಯ್ಯ ತಾತ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕಷ್ಟಕಾಲ ಸಂದರ್ಭದಲ್ಲಿ ನಾವು ಸತ್ಯನಾರಾಯಣಪೂಜೆ ಮಾಡಿಸುತ್ತಾ ಬಂದಿದ್ದು ನಮಗೆ ಒಳಿತಾಗುತ್ತಾ ಬಂದಿದ್ದು ಇದರಿಂದ ಸಕಲರಿಗೂ ಒಳಿತಾಗುತ್ತದೆ ಎಂದು ಹನಮಯ್ಯ ತಾತ ಹೇಳಿದರು
ಅವರು ತಾಲೂಕಿನ ಗುಂತಗೋಳ ಗ್ರಾಮದ ತಮ್ಮ ಮಠದಲ್ಲಿ ಗುರುಪೂರ್ಣಿಮಾ ನಿಮಿತ್ಯವಾಗಿ ಏರ್ಪಡಿಸಿದ ಸತ್ಯನಾರಾಯಣಪೂಜೆಯಲ್ಲಿ ಪಾಲ್ಗೊಂಡು ನಂತರ ಮಾತನಾಡುತ್ತಾ ನಮಗೆ ಯಾವಾಗ ಯಾವಾಗ ಹಣಕಾಸು ಇತ್ಯಾದಿ ಸಮಸ್ಯೆಗಳು ಉದ್ಭವಿಸಿವೆಯೋ ಅಂತಹ ಸಂದರ್ಭದಲ್ಲಿ ಸತ್ಯನಾರಾಯಣಪೂಜೆ ಮಾಡಿಸುತ್ತಾ ಬಂದಿದ್ದು ಪೂಜೆಯಿಂದ ನಮಗೆ ಒಳಿತಾಗುತ್ತಾ ಬಂದಿದೆ ಅಲ್ಲದೆ ಪೂಜೆಯಲ್ಲಿ ಪಾಲ್ಗೊಂಡ ಭಕ್ತರಿಗೂ ಒಳಿತಾಗಿದೆ ಎಂದು ಅವರು ಹೇಳಿದರು
ಅಲ್ಲದೆ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಿದ ಅರ್ಚಕ ಗೋಪಾಲಕೃಷ್ಣ ಮಾತನಾಡಿ ಸತ್ಯನಾರಾಯಣಪೂಜೆ ಎನುವುದು ಇದು ನಿನ್ನೆ ಮೊನ್ನೆಯದಲ್ಲ ಅನಾದಿ ಕಾಲದಿಂದ ಆಚರಿಸುತ್ತಾ ಬರಲಾಗಿದೆ ನಮ್ಮ ಋಷಿ ಮುನಿಗಳು ಸಹಿತ ಸತ್ಯನಾರಾಯಣಪೂಜೆ ಮಾಡಿದ್ದಾರೆ ಇದರಿಂದ ಒಳಿತಾಗುತ್ತದೆ ಎಂದು ಹೇಳಿದರು
ಈ ಪೂಜಾ ಕಾರ್ಯಕ್ರಮದಲ್ಲಿ ತಾಲೂಕಿನ ಭಕ್ತರಲ್ಲದೆ ಮಾನ್ವಿ,ಸುರುಪುರ ತಾಲೂಕಿನಿಂದಲೂ ಹೊರಜಿಲ್ಲೆಯಿಂದಲೂ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂತು ನಂತರದಲ್ಲಿ ಎಲ್ಲರಿಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು