ಅಜಾತ ಶತೃ,,ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೇಜಿಯವರಿಗೆ
ಲಿಂಗಸಗೂರು:ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಜೀ ಯವರಿಗೆ 83 ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು…
ಅಜಾತ ಶತೃ.ಸೋಲಿಲ್ಲದ ಸರದಾರ. ವಿಧಾನಸಭೆ ರಾಜ್ಯಸಭೆ ಮತ್ತು ಸಂಸತ್ತಿನಲ್ಲಿ ಮೂರು ಕಡೆ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸಿದ ಮತ್ತು ರಾಜ್ಯ ಸಚಿವನಾಗಿ ಗೃಹ ಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಪ್ರಸ್ತುತ ಕೇಂದ್ರದಲ್ಲಿ ಎಐಸಿಸಿ ಅಧ್ಯಕ್ಷರಾಗಿ ಹಾಗೂ ವಿರೋಧ ಪಕ್ಷದ ನಾಯಕನಾಗಿ ಕಾರ್ಯಭಾರ ಮಾಡುತ್ತಿದ್ದಾರೆ. ಇಂಥ ಒಬ್ಬ ಧೀಮಂತ ನಾಯಕನ ಹುಟ್ಟು ಕೂಡ ರೋಚಕವಾಗಿರುತ್ತದೆ 1942 ಜುಲೈ 21ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಡವಟ್ಟಿ ಗ್ರಾಮದಲ್ಲಿ ಜನಿಸಿ ಬಾಲಕನಿರುವಾಗಲೇ ತನ್ನ ಕಣ್ಣು ಮುಂದೆ ಪಾಲಕರನ್ನೆಲ್ಲ ಕಳೆದುಕೊಂಡು ಸುಟ್ಟು ಬೂದಿಯಾಗದನ್ನ ಕಂಡಿದ್ದಾರೆ.ತಂದೆ ಮಾಪಣ್ಣ ಒಬ್ಬರೇ ಪಾಲಕ ಪೋಷಕ ತಂದೆಯಾಗಿ ಅವರು ಮಲ್ಲಿಕಾರ್ಜುನ ಖರ್ಗೆಜಿಯವರ ಜೀವನದುದ್ದಕ್ಕೂ ಜೊತೆಯಾಗಿ ನಿಲ್ಲುತ್ತಾರೆ.ಮಗನ ಶಾಲಾ-ಕಾಲೇಜು ಮತ್ತು ಬದುಕಿನ ಬಂಡಿ ಸಾಗಿಸುತ್ತಾ ಮಗ ಓದಿ ವಕೀಲನಾದ ಸಂದರ್ಭದಲ್ಲಿ ತಂದೆ ಮರಣ ಹೊಂದುತ್ತಾರೆ .ಅಲ್ಲಿಂದ ವೈಯಕ್ತಿಕ ಹೋರಾಟದ ಜೀವನ ಮಾನ್ಯ ಮಲ್ಲಿಕಾರ್ಜುನ ಖಗೆ೯ಅವರ ಜೀವನದಲ್ಲಿ ನಡೆಯುತ್ತದೆ .ವಕೀಲ ವೃತ್ತಿ ಮಾಡುತ್ತಿದ್ದ ಸಮಯ ಮಾನ್ಯ ಶ್ರೀಮತಿ ದಿ.ಇಂದಿರಾಗಾಂಧಿಜೀ ಅವರ ಜೊತೆ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಪ್ರಪ್ರಥಮ ಶಾಸಕನಾಗಿ ಆಯ್ಕೆಯಾಗಿ ಗುರುಮಠಕಲ್ ಕ್ಷೇತ್ರದಿಂದ ಚಿತ್ತಾಪುರ ಕ್ಷೇತ್ರದಿಂದ 9 ಸಾರಿ ಶಾಸಕನಾಗಿ ಆಯ್ಕೆಯಾಗುತ್ತಾರೆ .ರಾಜ್ಯದಲ್ಲಿ ಹಲವಾರು ಮಂತ್ರಿ ಗೃಹ ಮಂತ್ರಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದ ಕೀರ್ತಿ ಡಾಕ್ಟರ್ ಮಲ್ಲಿಕಾರ್ಜುನ್ ಖರ್ಗೆ ಜೀ ಅವರಿಗೆ ಸಲ್ಲುತ್ತದೆ. ತದನಂತರ ಕೇಂದ್ರದಲ್ಲಿ ಸಂಸತ್ತು ಚುನಾವಣೆಗೆ ಎರಡು ಸಾರಿ ಆಯ್ಕೆಯಾಗಿ ರೈಲ್ವೆ ಸಚಿವರಾಗಿ ಕಾರ್ಮಿಕ ಸಚಿವರಾಗಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯಭಾರ ಮಾಡಿ ಸೈ ಅನಿಸಿಕೊಳ್ಳುತ್ತಾರೆ.ಮಾನ್ಯ ಸೋನಿಯಾಗಾಂಧಿ ಮತ್ತು ಮಾನ್ಯ ಶ್ರೀ ರಾಹುಲ್ ಗಾಂಧಿಜೀ ಅವರ ಮಾಗ೯ದಶ೯ನದಲ್ಲಿ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾಗಿ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕನಾಗಿ ನೇಮಕವಾದರು .ಮತ್ತು ಕೇರಳ ರಾಜ್ಯದ ಸಂಸದ ಶಶಿ ತರೂರ್ ಅವರ ವಿರುದ್ಧ ಬಾರಿ ಬಹುಮತದಿಂದ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ .ಕಟ್ಟಾ ಕಾಂಗ್ರೆಸ್ಸಿಗನಾದ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆಜಿ ಅವರು ಗಾಂಧಿ ಕುಟುಂಬದಲ್ಲಿ ಅತಿ ವಿನಯ ಬುದ್ಧಿವಂತಿಕೆ ಅವರ ವಿಶ್ವಾಸ ಗಳಿಕೆಯಲ್ಲಿ ಪ್ರಮುಖ ವಿಶೇಷ ವ್ಯಕ್ತಿಯಾಗುತ್ತಾರೆ.ಸಾಕಷ್ಟು ದಾಖಲೆಯ ಕೆಲಸ ಮಾಡಿದ್ದಾರೆ.371ಜೆ ತಂದು ಕಲ್ಯಾಣ ಕರ್ನಾಟಕ ಜನತೆಗೆ ಕಲ್ಪ ವೃಕ್ಷ ಆಗಿದ್ದಾರೆ.ಈ ದಿನ 21. 7 .2024 83 ವಸಂತಗಳನ್ನ ಪೂರೈಸಿದ್ದಾರೆ.ಅವರು ಮೊನ್ನೆ ನಡೆದ ಸಂಸದ ಚುನಾವಣೆ ಸಮಯದಲ್ಲಿ ದಣಿವರಿಯದ ನಾಯಕನಾಗಿ ಹೊರಹೊಮ್ಮಿದ್ದಾರೆ.ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಜೀ ಯವರು ಮುಖ್ಯ ಮಂತ್ರಿ ಆಗಬೇಕು ಎನ್ನುವ ನೋವು ಇದೆ.ಆರೋಗ್ಯ.ಆಯುಸ್ಸು ಇನ್ನೂ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರರು ಕರುಣಿಸಲಿ ಎಂದು ಶುಭಾಶಯ ಕೋರುವವರು
ಸಂಜೀವಪ್ಪ ಛಲವಾದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ರಾಯಚೂರ