ರೋಡಲಬಂಡ:ಎಸ್ ಬಿ ಐ ಖಾತೆಯಲ್ಲಿ ಲಕ್ಷ ಲಕ್ಷ ಹಣ ಜಮೆ!!? ಡ್ರಾ ಆಗಲ್ಲ!! ಮ್ಯಾನೇಜರಗೆ ಕೇಳಿದರೆ ಹಣ ಇಲ್ಲ ಉತ್ತರ, ಏನಿದರ ಮಹಿಮೆ!!?

Laxman Bariker
ರೋಡಲಬಂಡ:ಎಸ್ ಬಿ ಐ ಖಾತೆಯಲ್ಲಿ ಲಕ್ಷ ಲಕ್ಷ ಹಣ ಜಮೆ!!? ಡ್ರಾ ಆಗಲ್ಲ!! ಮ್ಯಾನೇಜರಗೆ ಕೇಳಿದರೆ ಹಣ ಇಲ್ಲ ಉತ್ತರ, ಏನಿದರ ಮಹಿಮೆ!!?
Oplus_131072
WhatsApp Group Join Now
Telegram Group Join Now

ರೋಡಲಬಂಡ:ಎಸ್ ಬಿ ಐ ಖಾತೆಯಲ್ಲಿ ಲಕ್ಷ ಲಕ್ಷ ಹಣ ಜಮೆ!!?
ಡ್ರಾ ಆಗಲ್ಲ!! ಮ್ಯಾನೇಜರಗೆ ಕೇಳಿದರೆ ಹಣ ಇಲ್ಲ ಉತ್ತರ, ಏನಿದರ ಮಹಿಮೆ!!?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ರೋಡಲಬಂಡ(ಯುಕೆಪಿ) ಎಸ್ ಬಿ ಐ ಬ್ಯಾಂಕಿನಲ್ಲಿ ಖಾತೆಯೊಮದರಲ್ಲಿ ಆಗಾಗ್ಗೆ ಲಕ್ಷಾಂತರ ಹಣ ಜಮೆಯಾಗುತ್ತದೆ ನೋಡಲು ಮೆಸೇಜು ಕಾಣಿಸುತ್ತದೆ ಆದರೆ ಡ್ರಾ ಮಾತ್ರ ಆಗುವುದಿಲ್ಲ ಏನಿದರ ಮಹಿಮೆ ಎಂಬುದು ಸ್ವತಃ ಖಾತೆದಾರನಿಗೆ ಅಚ್ಚರಿಯಾಗಿ ಕಂಡು ಬರುತ್ತಿದೆ
ಹೌದು ತಾಲೂಕಿನ ರೋಡಲಬಂಡ (ಯುಕೆಪಿ) ಎಸ್ ಬಿ ಐ ಬ್ಯಾಂಕಿನಲ್ಲಿ ಇಂತಹದೊಂದು ಘಟನೆ ನಡೆಯುತಿದ್ದು ಬ್ಯಾಂಕ್ ವ್ಯಾಪ್ತಿಯ ತೊರಲಬೆಂಚಿ ಗ್ರಾಮದ ವ್ಯಕ್ತಿಯೋರ್ವನ ಎಸ್,ಬಿ ಐ ಬ್ಯಾಂಕಿನ ಖಾತೆಗೆ ೨೦೧೬-೧೭ನೇ ಸಾಲಿನಲ್ಲಿ ೨,೯೨೦೦೦ ಸಾವಿರ ಜಮೆಯಾಗಿವೆ ಅವುಗಳನ್ನು ಡ್ರಾ ಮಾಡಲು ಹೋದರೆ ಹಣ ಮಾತ್ರ ಡ್ರಾ ಆಗಿಲ್ಲ ವಿಷಯವನ್ನು ಬ್ಯಾಂಕ್ ಮ್ಯಾನೇಜರ ಗಮನಕ್ಕೆ ತರುತ್ತಲೆ ಖಾತೆಯಲ್ಲಿ ಯಾವುದೆ ಹಣ ಇರುವುದಿಲ್ಲವೆಂದು ಹಣ ಡಿಲಿಟ್ ಮಾಡಲಾಗಿದೆ ಎನ್ನುತ್ತಾರೆ
ಪುನಃ ಫೆಬ್ರವರಿ೨೦೨೫ರಂದು ಸದರಿ ಖಾತೆಗೆ೪೦೦೦೦೫ ರೂ ಹಣ ಜಮೆಯಾಗಿದೆ ಅದರ ವಿವರಗಳು ಫೋನ್ ಮೂಲಕ ಚೆಕ್ ಮಾಡಿದರೆ ಹಣ ಜಮೆ ತೋರಿಸುತ್ತಿದೆ ಆದರೆ ಆದರೆ ಪುನಃ ಮೊದಲಿನಂತೆ ಡ್ರಾ ಮಾಡಲು ಹೋದರೆ ಡ್ರಾ ಆಗಿಲ್ಲ ಸದರಿ ವಿಷಯವನ್ನು ಫೋನ್ ಮೂಲಕ ಬ್ಯಾಂಕ್ ಮ್ಯಾನೇಜರ ಗಮನಕ್ಕೆ ತಂದರೆ ಕೂಡಲೆ ಖಾತೆಯಲ್ಲಿ ಬಂದ್ ಮಾಡಲಾಗಿದೆ ಎಂದು ಒಮ್ಮೆ ಉತ್ತರಿಸಿದರೆ ಹಣ ಇಲ್ಲ ಎಂದು ಎರಡನೆ ಸಲ ಹೇಳಿದ್ದಾರೆ
ಸದರಿಯವರು ತಮ್ಮ ಖಾತೆಯನ್ನು ಸರಿಯಾಗಿ ಲೇವಾದೇವಿ ಮಾಡದೆ ಹಾಗೆ ಬಿಟ್ಟಿರುವುದರಿಂದ ಖಾತೆ ಬಮದ್ ಆಗಿತ್ತು ನಂತರದಲ್ಲಿ ಆನ್ ಮಾಡಿಸಿದ್ದಾರೆ ಎಟಿಎಂ ಪಡೆದಿದ್ದಾರೆ ಆದರೂ ಕಣ್ಣಿಗೆ ಜಮೆಯಾದ ಹಣ ಕಂಡರೂ ಕೈಗೆ ಬಾರದಂತಾಗಿದ್ದು ಇದಾವ ಲೀಲೆ ಎನ್ನುವಂತಾಗಿದೆ
ಸದರಿ ವ್ಯಕ್ತಿ ರೈತನಾಗಿದ್ದು ಆಗಾಗ ಬೆಳೆವಿಮೆ ಇತ್ಯಾದಿ ತುಂಬಿದ್ದಾನೆ ಅಂತಹ ಪರಿಹಾರದ ಹಣ ಏನಾದರು ಬಂದಿರಬಹುದೆ ಎನ್ನುವುದು ಗ್ರಾಹಕನ ಪ್ರಶ್ನೆಯಾಗಿದೆ ಆದರೆ ಮ್ಯಾನೇಜರ್ ಮಾತ್ರ ಯಾವುದೆ ಹಣ ಇಲ್ಲ ಎನ್ನುತ್ತಾನೆ ಗ್ರಾಹಕನಿಗೆ ಗೊತ್ತಿಲ್ಲದಂತೆ ಯಾವುದಾದರು ಅನಾಮದೇಯದ ವ್ಯವಹಾರ ಇವರ ಖಾತೆಯಿಂದ ನಡೆಯುತ್ತಿದೆಯಾ ಎನ್ನುವ ಅನುಮಾನವನ್ನು ಗ್ರಾಹಕ ವ್ಯಕ್ತಪಡಿಸುತ್ತಾನೆ
ವಿಷಯ ತಿಳಿಯುತ್ತಲೆ ರೋಡಲಬಂಡ ಎಸ್ ಬಿ ಐ ಶಾಖೆಯ ಮ್ಯಾನೇಜರರವರಿಗೆ ನಾಲ್ಕಾರು ಸಲ ಕರೆ ಮಾಡಿದರು ಅವರು ಯಾವುದೆ ಕಾರಣಕ್ಕೂ ಕರೆ ಸ್ವೀಕರಿಸಲಿಲ್ಲ ಹಾಗಾದರೆ ಗ್ರಾಹಕನ ಖಾತೆಯಲ್ಲಿ ಜಮೆಯಾದ ಹಣ ಯಾವುದು? ಜಮೆಯಾದ ಹಣ ಹೋದದ್ದಾದರು ಎಲ್ಲಿಗೆ? ಎನ್ನುವ ಪ್ರಶ್ನೆಗಳಿಗೆ ಬ್ಯಾಂಕಿನವರೇ ಉತ್ತರಿಸಬೇಕಾಗಿದೆ

WhatsApp Group Join Now
Telegram Group Join Now
Share This Article