ಭಾರಿಮಳೆಗೆ ಸೇತೆವೆಮೇಲೆ ಹರಿದ ನೀರು, ಎಚ್ಚೆತ್ತ ನಿವಾಸಿಗಳು ತಪ್ಪಿದ ಅನಾಹುತ, ಸಿಡಿಲುಬಡಿತ ಉಪಕರಣಹಾನಿ, ರಸ್ತೆ ಗೆ ಉರುಳಿದ ಮರ,ಸಂಚಾರಕ್ಕೆ ತೊಂದರೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು::ರವಿವಾರ ರಾತ್ರಿ ಸುರಿದ ಭಾರಿ ಮಳೆಗೆ ಪಟ್ಟದ ಮುಖ್ಯಹಳ್ಳ ತುಂಬಿ ಸೇತುವೆಮೇಲೆ ಹರಿದಿದ್ದು ಮನೆಗೆ ಅಪಾಯವಾಗುವುದನು ಅರಿತ ನಿವಾಸಿಗಳು 112ಗೆ ಕರೆಮಾಡಿ ಅನಾಹುತ ತಪ್ಪಿಸಿದ ಘಟನೆ ಪಟ್ಟಣದಲಿ ಜರುಗಿದೆ
ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಪಟ್ಟಣದಲಿ ಹರಿಯುವ ಮುಖ್ಯಹಳ್ಳ ತುಂಬಿ ಬಸ್ ನಿಲ್ದಾಣದ ಹಿಂದೆ ಹಳ್ಳಕ್ಕೆ ಕಟ್ಟಿರುವ ತಡೆಗೋಡೆ ಕುಸಿತವಾಗಿ ವಿದ್ಯುತ್ ಕಂಬ ಹಾಗೂ ಮನೆಗೆ ಹಾನಿಯಾಗು ಅಪಾಯವನ್ನು ಅರಿತ ನಿವಾಸಿಗಳು ಕೂಡಲೆ 112ಗೆ ಕರೆಮಾಡಿ ಪೊಲೀಸ್,ಅಗ್ನಿಶಾಮಕದಳ,ಹಾಗೂ ಜೆಸ್ಕಾಂರವರನ್ನು ಕರೆಯಿಸಿ ಬ್ರಿಜ್ ಮೇಲಿನ ತಡೆಗೋಡೆ ತೆರವುಗೊಳಿಸಿ ನೀರುಹೋಗಲು ಅನುಕೂಲ ಮಾಡಿದ್ದರಿಂದ ಮನೆಗೆ ಹಾಗೂ ವಿದ್ಯುತ್ ಕಂಬಕ್ಕೆ ಆಗುವ ಅಪಾಯವನ್ನು ತಪ್ಪಿಸಿದ್ದು ನಿವಾಸಿಗಳು ರಾತ್ರಿಯಲ್ಲ ಭಯದಲ್ಲಿಯೆ ಕಾಲಕಳೆದಿದ್ದಾರೆ
ಹಳೆಯ ಕೋರ್ಟಮಾರ್ಗದಲಿ ಮಳೆಗೆ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಸಂಚಾರಕ್ಕೆ ತೊಂದರೆ ಯಾಗಿದ್ದು ಮರವನ್ನು ತೆರವುಗೊಳಿಸುವ ಕಾರ್ಯನಡೆದಿದೆ
ಸಿಡಿಲುಬಡಿತ ವಿದ್ಯುತ್ ಉಪಕರಣ ಹಾನಿ:18ನೇ ವಾರ್ಡಿನ ಮನೆಯೊಂದರ ಮೇಲೆ ಹಾಕಿರುವ ಡಿಶ್ ಗೆ ಸಿಡಿಲು ಬಡಿತ ಉಂಟಾಗಿದೆ ಎಂದು ಹೇಳಲಾಗಿದ್ದು ಗೋಡೆಗೆ ಕುಳಿಯಾಗಿದ್ದು ಮನೆಯಲಿರುವ ವಿದ್ಯುತ್ ಉಪಕರಣ ಗಳಿಗೆ ಹಾನಿಯಾಗಿದೆ
ಎಪಿಎಂಸಿಗೆ ಬಂದಿರುವ ಮಾಲು ನೀರುಪಾಲು: ಎಪಿಎಂಸಿಗೆ ಮಾರಾಟಕ್ಕೆ ತಂದಿರುವ ರೈತರ ಮಾಲು ಸೂರ್ಯಕಾಂತಿ ಸೇರಿದಂತೆ ವಿವಿಧ ಮಾಲು ಮಳೆಯಿಂದ ಹಾನಿಯಾಗಿದೆ ಎನ್ನಲಾಗುತ್ತಿದೆ
ಪಟ್ಟಣದ ವಿವಿದೆಡೆ ಕೆರೆಯಂತಾದ ರಸ್ತೆಗಳು:ಡಿವೈಎಸ್ಪಿ ಆಫೀಸ್ ಎದುರುಗಡೆ ರಸ್ತೆಯ ಮೇಲೆ ಭಾರಿಪ್ರಮಾಣದ ನೀರು ಸಂಗ್ರಹವಾಗಿ ಓಡಾಟಕ್ಕೆ ತೊಂದರೆ ಯಾಗಿತ್ತು,ಅಗ್ನಿಶಾಮಕದ ಆಫೀಸ್ ಮುಂದೆಯು ಅಪಾರಪ್ರಮಾಣದ ನೀರು ಸಂಗ್ರಹವಾದ ದೃಶ್ಯ ಕಂಡು ಬಂತು
ಸರಕಾರಿ ಪದವಿ ಕಾಲೇಜು ಮುಂದೆ ಹರಿಯುವ ಹಳ್ಳದಲ್ಲಿಯು ಅಪಾರ ಪ್ರಮಾಣದ ನೀರು ಹರಿದುಬಂದು ಪ್ಲಾಟಗಳಲಿ ನೀರು ಸಂಗ್ರಹವಾದದ್ದು ಕಂಡು ಬಂತು
ಈಚನಾಳದ ಹತ್ತಿರ ತುಂಬಿಹರಿದ ಹಳ್ಳ ಸಂಚಾರಕ್ಕೆ ತೊಂದರೆ: ತಾಲ್ಲೂಕಿನ ಈಚನಾಳ ಗ್ರಾಮದ ಹತ್ತಿರ ನೀರಲಕೇರಿ -ಈಚನಾಳ ರಸ್ತೆಯ ಲಿರು ಹಳ್ಳ ತುಂಬಿಬಂದು ಶಾಲಾಮಕ್ಕಳು ಹೊಲದಲಿರುವ ನಿವಾಸಿಗಳಿಗೆ ಸಂಚಾರಕ್ಕೆ ತೊಂದರೆ ಯಾಯಿತು ಎಂದು ಗ್ರಾಮದ ಆನಂದ ಕುಂಬಾರ ಹೇಳುತ್ತಾರೆ
ತಾಲ್ಲೂಕಿನ ವಿವಿಡೆಯಲ್ಲಿ ಮನೆಗಳಿಗೆ ಹಾನಿಯಾಗಿದೆ ಜಾನುವಾರು ಜೀವಕಳೆದುಕೊಂಡಿವೆ ಎಂದುಹೇಳಲಾಗುತಿದ್ದು ಮಧ್ಯಾಹ್ನದ ವರೆಗೆ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಕಂದಾಯ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ