ಹಟ್ಟಿಯಲ್ಲಿ ನಿಲ್ಲದ ಮಟ್ಕಾ ಹಾವಳಿ ಕ್ರಮಕ್ಕೆ ಐಜಿಪಿಗೆ ಮನವಿ

Laxman Bariker
WhatsApp Group Join Now
Telegram Group Join Now

ಹಟ್ಟಿಯಲ್ಲಿ ನಿಲ್ಲದ ಮಟ್ಕಾ ಹಾವಳಿ ಕ್ರಮಕ್ಕೆ ಐಜಿಪಿಗೆ ಮನವಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಹಟ್ಟಿಯಲ್ಲಿ ಮಟ್ಕಾದಂಧೆ ನಿರಂತರವಾಗಿ ನಡೆಯುತ್ತಿದ್ದು ಇದರಲ್ಲಿ ಪೊಲೀಸ್ ಶಾಮಿಲಾಗಿದ್ದಾರೆಂದು ಆರೋಪಿಸಿ ಪಟ್ಟಣದ ಸಮಾಜಸೇವಕರಾದ ಇಸ್ಮಾಯಿಲ್ ಪಾಷಾ ಹಾಗೂ ಚನ್ನಬಸವಕೋಠಾ ಐಜಿಪಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದಾರೆ
ಹಟ್ಟಿಯಲ್ಲಿ ಮಟ್ಕಾ ಎಂಬುದು ಬಹಳ ಜನರನ್ನು ಹೈರಾಣ ಮಾಡಿದ್ದು ಹಲವಾರು ಕುಟುಂಬಗಳು ತೊಂದರೆಯಲ್ಲಿವೆ ಆದರು ಯಾರ ಹೆದರಿಕೆ ಇಲ್ಲದೆ ನಿರ್ಭಯವಾಗಿ ಮಟ್ಕಾ ನಡೆಯುತ್ತಿದೆ ಇದಕ್ಕೆ ಮುಖ್ಯ ಕಾರಣ ಇದರಲ್ಲಿ ಪೊಲೀಸರು ನೇರವಾಗಿ ಕೈಜೋಡಿಸುತ್ತಾರೆ ಎಂದು ಆರೋಪಿಸಲಾಗಿದೆ
ಹಟ್ಟಿಯಲ್ಲಿ ಮಟ್ಕಾ ನಡೆಯುತಿದ್ದು ಮಟ್ಕಾ ದಂಧೆಕೋರರಲ್ಲಿ ಯಾರು ಹಪ್ತಾ ವಸೂಲಿ ಹಣ ಕೊಡುವುದಿಲ್ಲ ಅವರ ವಿರುದ್ದ ಮೇಲಿಂದ ಮೇಲೆ ಪ್ರಕರಣಗಳನ್ನು ದಾಖಲಿಸಿ ಹಿಂಸೆ ನೀಡುತ್ತಾರೆ ಹಪ್ತಾ ರೂಪದಲ್ಲಿ ಹಣ ನೀಡುವವರಿಗೆ ಮಟ್ಕಾ ದಂಧೆ ಮುಂದುವರೆಸಲು ಸಹಕಾರ ನೀಡುತ್ತಿದ್ದಾರೆ ಪೊಲಿಸರು ತಮ್ಮ ಫೋನ್ ಫೆ ಗಳಿಗೆ ಹಣ ಹಾಕಿಸಿಕೊಂಡಿರುವ ದಾಖಲಿಗಳಿವೆ ಕೆಲವರು ಹತ್ತು ಸಾವಿರ ಹದಿನೈದು ಸಾವಿರ ಇಪ್ಪತ್ತು ಸಾವಿರ ಇಪ್ಪತ್ತೆöÊದು ಸಾವಿರ ಹೀಗೆ ಹಣ ಹಾಕಿಸಿಕೊಂಡಿದಾರೆ ಹಣ ಹಾಕಿದವರಿಗೆ ಯಾವುದೆ ಕಿರಿಕುಳ ನಿಡುವುದಿಲ್ಲ ಹಣ ನಿಡದವರಿಗೆ ಮೇಲಿಂದ ಮೇಲೆ ಹಿಂಸೆ ನಿಡುವುದು ಇಲ್ಲಿರುವ ಪೊಲೀಸ ಖೈಯಾಲಿಯಾಗಿದೆ ಎಂದು ಆರೋಪಿಸುತ್ತಾರೆ ಅಲ್ಲದೆ ಯಾವ ಯಾವ ಪೊಲೀಸ್ ಯಾವ ದಿನಾಂಕದAದು ಎಷ್ಟು ಎಷ್ಟು ಹಣ ಹಾಕಿಸಿಕೊಂಡಿದ್ದಾರೆAದು ದಾಖಲೆ ಸಹಿತ ಐಜಿಪಿಯವರಿಗೆ ಮನವಿ ಸಲ್ಲಿಸಿದ್ದಾರೆ
ಪೊಲೀಸ್ ಇನ್ಸಪೆಕ್ಟರ್ ಪಿಐ ಹೊಸಕೇರಪ್ಪ, ಸಿಪಿಸಿಗಳಾಗಿರುವ ನಾರಾಯಣ ಹುಚ್ಚರಡ್ಡಿ ಬಸವರಾಜ ವಿಜಯ ಶರಣಬಸವ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿಲಾಗಿದೆ
ಐಜಿಪಿಯವರು ಸೂಕ್ತಕ್ರಮ ಜರುಗಿಸಬಹುದೆ ಎಂಬುದು ಸಮಾಜಸೇವಕರ ಒತ್ತಾಯವಾಗಿದೆ

WhatsApp Group Join Now
Telegram Group Join Now
Share This Article