ವೀರಶೈವ ಪದ ತೆಗೆದು ಹಾಕುವ ಹೇಳಿಕೆಗೆ ರಂಭಾಪುರಿ – ಕೇದಾರ ಜಗದ್ಗುರುಗಳ ವಿರೋಧ

Laxman Bariker
ವೀರಶೈವ ಪದ ತೆಗೆದು ಹಾಕುವ ಹೇಳಿಕೆಗೆ ರಂಭಾಪುರಿ – ಕೇದಾರ ಜಗದ್ಗುರುಗಳ ವಿರೋಧ
WhatsApp Group Join Now
Telegram Group Join Now

ವೀರಶೈವ ಪದ ತೆಗೆದು ಹಾಕುವ ಹೇಳಿಕೆಗೆ ರಂಭಾಪುರಿ – ಕೇದಾರ ಜಗದ್ಗುರುಗಳ ವಿರೋಧ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರು ಮಾರ್ಚಂ೪4
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ವೀರಶೈವ ಪದವನ್ನು ತೆಗೆದುಹಾಕಿ ಕೇವಲ ಲಿಂಗಾಯತ ಮಹಾಸಭಾ ಎಂದು ಉಳಿಸಬೇಕೆಂಬ ಬಸವಾಭಿಮಾನಿಗಳ ಹೇಳಿಕೆಯನ್ನು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹಾಗೂ ಕೇದಾರ ಜಗದ್ಗುರು ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ದೇವರಭೂಪುರ ಬೃಹನ್ಮಠದಲ್ಲಿ ಮಂಗಳವಾರ ಸಾಯಂಕಾಲ ಜಂಟಿ ಸುದ್ದಿಗೋಷ್ಠಿಯಲ್ಲಿ ಉಭಯ ಜಗದ್ಗುರುಗಳು ಮಾತನಾಡಿ, ಇತ್ತಿಚಿಗೆ ಬೆಂಗಳೂರಲ್ಲಿ ವಚನದರ್ಶನ ಕೃತಿ ಬಿಡುಗಡೆ ಸಭೆಯಲ್ಲಿ ಸಾಹಿತಿ ಗೋರೂರು ಚನ್ನಬಸಪ್ಪ ಮತ್ತು ಎಸ್.ವಿ ಜಾಮದಾರ ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಕೆಲ ವರ್ಷಗಳಲ್ಲಿ ವೀರಶೈವ ಎಂಬ ಪದವನ್ನು ತೆಗೆದು ಲಿಂಗಾಯತ ಎಂಬುದನ್ನು ಒಂದೇ ಉಳಿಸಿ ಎಂದು ಹೇಳಿಕೆ ನೀಡಿದ್ದಾರೆ. ಮತ್ತು ಕರ್ನಾಟಕದ ಶರಣರ ಭಾವಚಿತ್ರ ಅಳವಡಿಕೆಯಲ್ಲೂ ಪಂಚಾಚಾರ್ಯರ ಭಾವಚಿತ್ರ ಹಾಕಲು ವಿರೋಧ ವ್ಯಕ್ತಪಡಿಸಿರುವುದು ಖಂಡಿನಿಯ ವಿಚಾರವಾಗಿದೆ. ಈಹಿಂದೆ ಹಾನಗಲ್ಲ ಕುಮಾರ ಸ್ವಾಮಿಗಳು ಸ್ಥಾಪಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಅವರು ಬರೆದ ಹತ್ತು ನಿಯಮಗಳ ಮೊದಲ ಅಧಿವೇಶನದಲ್ಲಿ ಗುರುಸ್ಥಲಕ್ಕಾಗಲಿ ಮತ್ತು ವಿರಕ್ತರಿಗಾಗಲಿ ಬಹಳ ಸಮಂಜಸವಾದ ವಿಚಾರಗಳನ್ನು ಪ್ರಸ್ತಾವನೆ ಮಾಡಿರುವುದನ್ನು ಪಂಚಪೀಠಗಳು ಮಾನ್ಯ ಮಾಡಿವೆ. ಆದರೆ ಅದರಲ್ಲೇ ಇರುವ ವಿಭಿನ್ನ ಭಾವನೆ ಹೊಂದಿದ ಬೆರಳೆಣಿಕೆಯಷ್ಟು ಸ್ವಾಮೀಜಿಗಳು, ಕೆಲ ನಾಸ್ತಿಕ ಪ್ರವೃತ್ತಿಯ ಗಣ್ಣರು ಹಾನಗಲ್ಲ ಕುಮಾರಸ್ವಾಮಿಗಳಿಗೆ ಗೌರವ ನೀಡದೆ ಟೀಕೆ ಟಿಪ್ಪಣೆಯಲ್ಲಿ ತೊಡಗಿದ್ದಾರೆಂದರು.
ಅದೇ ಸಮಾರಂಭದಲ್ಲಿ ಭಾಗವಹಿಸಿದ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರು ಕೂಡಾ ಅವರ ಮಾತುಗಳನ್ನು ಕಟುವಾಗಿ ವಿರೋಧಿಸಿ ಪಂಚಾಚಾರ್ಯರ ಮತ್ತು ಬಸವಾದಿ ಶರಣರ ಭಾವಚಿತ್ರ ಅಳವಡಿಸಬೇಕೆಂಬ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ವೀರಶೈವ ಲಿಂಗಾಯತ ಎರಡನ್ನೂ ಸಮಾನವಾಗಿ ಮುನ್ನಡೆಸಿಕೊಂಡು ಹೋಗುತ್ತೇವೆ ಹೊರತು ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ. ಮಹಾಸಭಾ ರಾಷ್ಟಿçÃಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಕೂಡ ವೀರಶೈವ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೆಯೂ ಇಂತಹ ಗೊಂದಲ ಸೃಷ್ಟಿಯಾದಾಗ ಭೀಮಣ್ಣ ಖಂಡ್ರೆ ಅವರು ಕೂಡ ಅಖಿಲ ಭಾರತ ವೀರಶೈವ ಮಹಾಸಭಾ ಜತೆಗೆ ಲಿಂಗಾಯತ ಪದ ಸೇರಿ ನಾವೆಲ್ಲ ಒಂದೇ ಎಂಬ ವಿಶಾಲ ಮನೋಭಾವ ತಳೆದಿದ್ದರು ಎಂಬುದನ್ನು ಯಾರು ಮರೆಯಬಾರದು ಎಂದು ಜಂಟಿಯಾಗಿ ಪ್ರತಿಪಾದಿಸಿದರು.
ರಂಭಾಪುರಿ ಜಗದ್ಗುರುಗಳು ಮಾತನಾಡಿ ವೀರಶೈವ ಎಂಬುದು ಧರ್ಮವಾಚಕವಾಗಿದ್ದು, ಸೈದ್ದಾಂತಿಕ ನೆಲೆಗಟ್ಟು, ಸಮಗ್ರತೆ ಮತ್ತು ಭಾವೈಕ್ಯತೆ ಹೊಂದಿದೆ. ಬಸವಾದಿ ಶಿವಶರಣರು ಕೂಡ ವೀರಶೈವ ಧರ್ಮದ ಶಾಸ್ತç ಸಿದ್ಧಾಂತವನ್ನು ಒಪ್ಪಿಕೊಂಡಿದ್ದಾರೆ. ಆದರೆ ಬಸವಣ್ಣನ ಆದರ್ಶ ಪರಿಪಾಲಿಸದ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಮತ್ತು ಸಮಾಜ ಒಡೆವ ಕೃತ್ಯಕ್ಕಾಗಿ ಮುಂದಾಗಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವಿರೋಧಿಸಿ ಪರ್ಯಾಯ ಸಂಘಟನೆ ರಚಸಿಕೊಂಡು ಮಹಾಸಭಾ ವಿರುದ್ಧ ಮಾತನಾಡುವ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಸರ್ಕಾರದಿಂದ ಶೈಕ್ಷಣಿಕ ಸವಲತ್ತಿಗಾಗಿ ನಾವೆಲ್ಲರೂ ಹೋರಾಟ ಮಾಡೋಣ. ಆದರೆ ವೀರಶೈವ ಪದ ತೆಗೆದು ಕೇವಲ ಲಿಂಗಾಯತ ಮಾತ್ರ ಉಳಿಯಬೇಕೆಂಬ ಹೇಳಿಕೆ ಬಸವಾದಿ ಶಿವಶರಣರಿಗೆ ಸಂದ ಗೌರವವಲ್ಲ ಎಂದು ಹೇಳಿದರು.
ಕೇದಾರ ಜಗದ್ಗುರುಗಳು ಮಾತನಾಡಿ ಅನಾದಿ ಕಾಲದಿಂದ ಪರಮಾತ್ಮನ ಪಂಚಮುಖಗಳಿಂದ ವೇದ ಆಗಮ ಉಪನಿಷತ್ ಪ್ರಮಾಣದಿಂದ ಪಂಚಪೀಠಗಳು ಸ್ಥಾಪನೆಗೊಂಡಿವೆ. ೨೦೦೩ರಲ್ಲಿ ಗೋರೂರು ಚನ್ನಬಸವಪ್ಪನವರು ರಚಿಸಿದ ಅಪೂರ್ವ ಸಂಗಮ ಗ್ರಂಥದಲ್ಲಿ ವೀರಶೈವವೆಂಬ ಪದ ಬಳಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸದ ಪುಟಗಳಲ್ಲಿ ವೀರಶೈವ ಪದ ಬಳಕೆಯಲ್ಲಿದೆ. ಆದರೆ ಮರ‍್ನಾಲ್ಕು ವರ್ಷದಲ್ಲಿ ವೀರಶೈವ ಪದ ಇರಬಾರದು ಎಂಬ ಹೇಳಿಕೆ ಹಾಸ್ಯಾಸ್ಪದವಾಗಿದೆ. ಬಸವಣ್ಣ, ಅಲ್ಲಮಪ್ರಭುಗಳು ಸೇರಿ ಶರಣರು ತಮ್ಮ ವಚನಗಳಲ್ಲಿ ವೀರಶೈವ ಪದ ಬಳಸಿದ್ದಾರೆ. ಆದರೆ ಲಿಂಗಾಯತ ಪದಕ್ಕೆ ಯಾವುದೇ ಆಧಾರವಿಲ್ಲ. ಯಾವ ಆಧಾರದ ಮೇಲೆ ಇಂತಹ ಹೇಳಿಕೆ ನೀಡಿದ್ದಾರೆಂಬುದು ಸ್ಪಷ್ಟಪಡಿಸಬೇಕಿದೆ ಎಂದರು.
ದೇವರಭೂಪುರ ಬೃಹನ್ಮಠದ ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ನಾವದಗಿ ರಾಜೇಂದ್ರ ಒಡೆಯರ ಶಿವಾಚಾರ್ಯರು, ದೇವದುರ್ಗ ಕಪಿಲಸಿದ್ಧ ಶಿವಾಚಾರ್ಯರು, ಕವಿತಾಳ ಕಲ್ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಶರಣಯ್ಯ ತಾತ ಹುನಕುಂಟಿ ಇದ್ದರು.

 

WhatsApp Group Join Now
Telegram Group Join Now
Share This Article