ಜಿಲ್ಲಾರೇಷ್ಮೆ ಕೃಷಿ ಅಧಿಕಾರಿ ಗ್ರಾಮೀಣಪ್ರದೇಶಗಳಿಗೆ ಭೇಟಿನೀಡಿ ರೈತರಿಗೆ ಪ್ರೋತ್ಸಾಹಿಸುತ್ತಿರುವ ರಾಜೇಂದ್ರಕುಮಾರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ರೇಷ್ಮೆ ಇಲಾಖೆಯ ಜಿಲ್ಲಾಧಿಕಾರಿಯಾಗಿದ್ದರು ಗ್ರಾಮೀಣ ಪ್ರದೇಶಗಳಿಗೆ ಭೇಟಿನೀಡಿ ರೈತರಿಗೆ ಪ್ರೋತ್ಸಾಹಿಸುತ್ತಿರುವ ಉತ್ಸಾಹಿ ಅಧಿಕಾರಿ ರಾಜೇಂದ್ರಕುಮಾರ ಇಲಾಖೆಯ ಪ್ರಯೋಜನಗಳನ್ನು ರೈತರಿಗೆ ತಿಳಿಸಿ ರೇಷ್ಮೆಕೃಷಿ ಹೆಚ್ಚಳಕ್ಕೆ ಸತತವಾಗಿ ಪ್ರಯತ್ನಿಸುತ್ತಿರುವ ಪ್ರಾಮಾಣಿಕ ಅಧಿಕಾರಿ ರಾಜೇಂದ್ರಕುಮಾರ
ಅವರು ಲಿಂಗಸಗೂರು ಹಾಗೂ ಮಸ್ಕಿ ಕ್ಷೇತ್ರದ ಮೆದಕಿನಾಳ,ಮೆದಕಿನಾಳ ತಾಂಡ,ಕಡದರಾಳ, ಭೂಪುರ ಸೇರಿದಂತೆ ಹಲವಾರು ಗ್ರಾಮಗಳಿಗೆ ತೆರಳಿ ರೇಷ್ಮೆ ಬೆಳೆಯ ಲಾಭಗಳ ಬಗೆಗೆ ರೈತರಿಗೆ ಮನವರಿಕೆ ಮಾಡುತ್ತಾ ಇದೊಂದು ಲಾಭದಾಯಕವಾದ ಬೆಳೆಯಾಗಿದ್ದು ವರ್ಷದಲ್ಲಿ ಹಲವಾರು ಬೆಳೆ ತೆಗೆಯಬಹುದು ಸರಕಾರದಿಂದ ಹಲವಾರು ಸವಲತ್ತುಗಳಿದ್ದು ಅವುಗಳನ್ನು ರೈತರಿಗೆ ತಲುಪಿಸಲಾಗುತ್ತದೆ ಈ ಹಿಂದೆ ರೇಷ್ಮೆ ಬೆಳೆಗಾರರಾಗಿದ್ದ ಕೆಲವರು ರೇಷ್ಮೆಯನ್ನು ಕೈಬಿಟ್ಟಿದ್ದರು ಅಂತಹ ರೈತರನ್ನು ಒಗ್ಗೂಡಿಸಿ ಮನವರಿಕೆ ಮಾಡುವುದರ ಮೂಲಕ ಪ್ರೇರೇಪಿಸಿದರು
ಲಿಂಗಸಗೂರು ಹಾಗೂ ಮಸ್ಕಿ ಕ್ಷೇತ್ರ ಸೇರಿದಂತೆ ಸುಮಾರು ೩೬೦ ಹೆಕ್ಟರ್ ಪ್ರದೇಶದಲ್ಲಿ ರೇಷ್ಮೆ ಬೆಳೆಕ್ಷೇತ್ರವಿದ್ದು ಅದನ್ನು ಇನ್ನು ಹೆಚ್ಚು ವಿಸ್ತಿರುಸವ ಕೆಲಸ ಮಾಡಬೇಕಾಗಿದೆ ಎಂದು ತಾವು ಜಿಲ್ಲಾ ರೇಷ್ಮೆ ಅಧಿಕಾರಿಯಾದರು ಖುರ್ಚಿ ಹಿಡಿದು ಕೂಡದೆ ರೈತರ ಹೊಲಗಳಿಗೆ ಭೇಟಿ ನಿಡುತ್ತಿದ್ದಾರೆ ಜಿಲ್ಲೆಯಲ್ಲಿ ರೇಷ್ಮೆಯನ್ನು ಹೆಚ್ಚಿಸುತ್ತೇನೆಂಬ ಭರವಸೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ
ಹೊಸ ಹಿಪ್ಪುನೇರಳೆ ತೋಟಗಳಿಗೆ ಭೇಟಿ ನೀಡುವುದು ಬೆಳೆಯಬಗೆಗೆ ಮಾಹಿತಿ ನೀಡುವುದು,ನಿರ್ಮಾನ ಹಂತದಲ್ಲಿರುವ ರೇಷ್ಮೆಹುಳು ಸಾಕಾಣಿಕೆ ಮನೆ, ತಾತ್ಕಾಲಿಕ ರೇಷ್ಮೆ ಹುಳುಮನೆ, ಇತ್ಯಾದಿಗಳಿಗೆ ಭೇಟಿ ನೀಡಿದರು ಅಲ್ಲದೆ ವಿವದ ಹಂತದಲ್ಲಿರುವ ಹಿಪ್ಪುನೇರಳೆ ನರ್ಸರಿಗೆ ಭೇಟಿ ನೀಡಿ ಬಿತ್ತನೆಯ ಕಡ್ಡಿಗಳನ್ನು ವೀಕ್ಷಿಸಿದರು
ರಾಜ್ಯ ವಲಯದಿಂದ ರೈತರಿಗೆ ಯಾವ ಯಾವ ಸಹಾಯ ಧನಗಳು ಬರುತ್ತವೆ ಎಂಬುದನ್ನು ಮಾಹಿತಿ ನೀಡಿದರು ಸುಮಾರು ಎರಡು ವರ್ಷಗಳಿಂದ ರೇಷ್ಮೆ ಕೃಷಿ ಸಲಕರಣೆಗಳು ವಿತರಣೆಯಾಗಿರಲಿಲ್ಲ ಈ ಸಲ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತದೆ ಎಂಬ ಭರವಸೆಯನ್ನು ನೀಡಿದರು ತಮ್ಮ ಅವಧಿಯಲ್ಲಿ ಇನ್ನು ಹೆಚ್ಚಿನ ರೈತರಿಗೆ ರೇಷ್ಮೆ ಕೃಷಿಯನ್ನು ಮಾಡಲು ಪ್ರೋತ್ಸಾಹಿಸಲಾಗುವುದು ಎಂಬ ಗುರಿಯೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಜಿಲ್ಲಾ ರೇಷ್ಮೆ ಕೃಷಿ ಉಪನಿರ್ದೇಕರಾದ ರಾಜೇಂದ್ರಕುಮಾರರವರು