ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ವೀರನಗೌಡ ಪಾಟೀಲ್ ಲೆಕ್ಕಿಹಾಳ ಅಧಿಕಾರ ಸ್ವೀಕಾರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಹಲವು ದಿನಗಳಿಂದ ಬಹುಮಿರೀಕ್ಷೆಯಲ್ಲಿದ್ದ ರಾಯಚೂರು ಜಿಲ್ಲಾ ಅಧ್ಯಕ್ಷರ ಆಯ್ಕೆ ನಡೆದು ಶಾಸಕ ಮಾನಪ್ಪ ವಜ್ಜಲರ ಬೆಂಬಲಿತ ವೀರನಗೌಡ ಪಾಟೀಲ್ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರಿ ಸ್ವೀಕಾರ ಮಾಡಿದರು
ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಮೂವರು ಪೈಪೋಟಿಯಲ್ಲಿದ್ದು ಕೊನೆಯಲ್ಲಿ ಶಾಸಕ ಮಾನಪ್ಪ ವಜ್ಜಲ್ ಹಾಗೂ ಶಿವರಾಜ ಪಾಟೀಲ್ ಬೆಂಬಲಿತ ವೀರನಗೌಡ ಪಾಟೀಲರಿಗೆ ಅಧ್ಯಕ್ಷಸ್ಥಾನ ಒದಲಿದುಬಂದಿದ್ದು ಸೋಮವಾರ ರಾಯಚೂರಿನಲ್ಲಿ ಹಿಂದಿನ ಅಧ್ಯಕ್ಷರಿಂದ ಧ್ವಜವನ್ನು ಸ್ವೀಕರಿಸುವ ಮೂಲಕ ಅಧಿಕಾರ ಸ್ವೀಕರಿಸಿದರು
ನಂತರ ಲಿಂಗಸಗೂರ ಪಟ್ಟಣಕ್ಕೆ ಆಗಮಿಸಿದ ನೂತನ ಅಧ್ಯಕ್ಷರಿಗೆ ಬಸ್ ನಿಲ್ದಾಣ ವೃತ್ತದಲ್ಲಿ ಪಟಾಕಿ ಸಿಡಿಸಿ ಸ್ವಾಗತಿಸಲಾಯಿತು ದೊಡ್ಡ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಚುನಾವಣಾ ನಿರೀಕ್ಷಕರಾದ ಬಸವರಾಜ ಮತ್ತಿಮಡು, ಶಾಸಕ ಮಾನಪ್ಪ ವಜ್ಜಲ್,ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ಮಾಜಿ ಸಂಸದರಾದ ಬಿವಿನಾಯಕ, ಎ ಪಾಪಾರೆಡ್ಡಿ, ಪ್ರತಾಪಗೌಡ ಪಾಟೀಲ್, ಅಮರನಾಥ ಪಾಟೀಲ್, ಗಂಗಾಧರನಾಯಕ, ಬಸನಗೌಡ ಬ್ಯಾಗವಾಟ, ಕೆ ಕರಿಯಪ್ಪ ಲಿಂಗಸಗೂರು ಮಂಡಲ ಅಧ್ಯಕ್ಷರಾದ ಅಯ್ಯಪ್ಪ ವಕೀಲ ಮಾಳೂರು, ಮುದಗಲ್ ಮಂಡಲ ಅಧ್ಯಕ್ಷರಾದ ಹುಲ್ಲೇಶ ಸಾಹುಕಾರ ನಾಗರತ್ನ ಸಕ್ತಿ, ಜ್ಯೋತಿ ಸುಂಕದ,ಲಿAಗಸೂರು ಮುದಗಲ್ ಪಕ್ಷದ ಮುಖಂಡರು ಅಭಿಮಾನಿಗಳು ಸೇರಿದಂತೆ ಇದ್ದರು