ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

Laxman Bariker
WhatsApp Group Join Now
Telegram Group Join Now

ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 187 ಕೋಟಿ ರೂ. ಅಕ್ರಮದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಕಲ್ಯಾಣ ಕರ್ನಾಟಕ ವಾರ್ತೆ

ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಅಕ್ರಮ ಹಣ ವರ್ಗಾ ವಣೆ ಕುರಿತು ತನಿಖೆ ಚುರುಕುಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಾಲ್ಮೀಕಿ ಸಮುದಾಯದವತಿಯಿಂದ ಪ್ರತಿಭಟನೆ ನಡೆಸಿತು. ಸೋಮವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಜಮಾವಣೆಗೊಂಡ ಪ್ರತಿಭಟನಾ ಕಾರರು ನಿಗಮದ ಭ್ರಷ್ಟಚಾರದ ವಿರುದ್ಧ ಆಕ್ರೋಶ ಹೊರಹಾಕಿದರು.
‘ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ತಡೆಯಬೇಕು. ಬೆಂಗಳೂರು ಹೃದಯ ಭಾಗದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಬೇಕು. ಸಮುದಾಯದ ನಿವೇಶನ ರಹಿತ ಕುಟುಂಬಗಳಿಗೆ ಶೀಘ್ರ ನಿವೇಶನ ಒದಗಿಸಬೇಕು. ದೇವನಹಳ್ಳಿಯಲ್ಲಿ ವಾಲ್ಮೀಕಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ರಾಯಚೂರು ಕೃಷಿ ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ಮರು ನಾಮಕರಣ
ಮಾಡಬೇಕು. ಕಲ್ಯಾಣ ಕರ್ನಾಟಕದ ಎಸ್ಟಿ ಹಾಸ್ಟೆಲ್‌ಗಳನ್ನು ಸುಧಾರಿಸಿ, ಅಗತ್ಯವಿರುವ ಕಡೆ ಹೊಸ ಹಾಸ್ಟೆಲ್‌ಗಳ ನಿರ್ಮಾಣ ಮಾಡಬೇಕು,” ಪ್ರತಿಭಟನಾಕಾರರು ಆಗ್ರಹಿಸಿದರು. ಎಂದು

“ಸರಕಾರದ ಅಡಿ ಬರುವ ಎಲ್ಲ
ಸಹಕಾರ ಸಂಸ್ಥೆಗಳಲ್ಲಿ ಎಸ್ಟಿ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಡಬೇಕು. ಗೋಮಾಳ ದಲ್ಲಿ ಕೃಷಿ ನಡೆಸುತ್ತಿರುವವರಿಗೆ ಸಾಗುವಳಿ ಪತ್ರ ಶೀಘ್ರ ನೀಡಬೇಕು. ಬೆಂಗಳೂರು ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಲು ಸೂಕ್ತ ನಿರ್ದೇಶನ ನೀಡಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು,” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನೈಜ ನಾಯಕ ಬೇಡರ ಪಡೆ ರಾಜ್ಯದ್ಯಕ್ಷರು ಸುಜಾತನಾಗರಾಜ್,
ರಾಜ್ಯಾಧ್ಯಕ್ಷ ಕರಿಯಪ್ಪ ರವಿಚಂದ್ರ,ರಾಯಚೂರು ಗೊಲಪಲ್ಲಿ ಮಠದ ವರದದಾನೇಶ್ವರ ಸ್ವಾಮೀಜಿ, ಮಹಾಸಭಾ ಯುವಘಟಕದ ರಾಜ್ಯಾಧ್ಯಕ್ಷರಾದ ತುಳಸಿರಾಮ್,
ಗಾಣದಹುಣಸೆ ನಾಗರಾಜ್, ಲಕ್ಷ್ಮಿಸಾಗರ ರಾಜಣ್ಣ,ವಿಯಲಕ್ಷ್ಮಿ ಉಳೆನೂರು ರಂಗಸ್ವಾಮಿ, ಅಜಯ್,ಈರೇಶ್ ಲಿಂಗಪ್ಪನಾಯಕ,
ಮಂಜುನಾಥ್,ಲೋಹಿತ್ ಹನುಮೇಶ್ ಗುಜ್ಜಲ್, ಹಲಗಲಿ ವೀರಣ್ಣ ವಿಶ್ವಾರಾಧ್ಯ ದೊರೆ, ನರಸಪ್ಪ ನಾಯಕ ಮಾರಣ್ಣ ಪಾಳೆಗಾರ್ ಮಲ್ಲಿಕಾರ್ಜುನ್ ಬಟಗಿ,ವೆಂಕಟೇಶ್ ಇತರರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ

WhatsApp Group Join Now
Telegram Group Join Now
Share This Article