ಪ್ರಾಚ್ಯವಸ್ತುಗಳ ರಕ್ಷಣೆ ಮುಂದಿನ ಪೀಳಿಗೆಗೆ ಅನುಕೂಲ-ಶಿಂಧೆ ಅವಿನಾಶ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಪ್ರಾಚ್ಯವಸ್ತುಗಳು ನಮ್ಮ ನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಸಾರುತ್ತಿದ್ದು ಅಂತಹ ಪಳಿಯುಳಿಕೆಗಳು ವಿನಾಶದ ಅಂಚಿನಲ್ಲಿದ್ದು ಅವುಗಳನ್ನು ರಕ್ಷಣೆ ಮಾಡುವುದರಿಂದ ಮುಂದಿನ ಪೀಳಿಗೆ ಇತಿಹಾಸ ಅರಿಯಲು ಸಹಾಯಕವಾಗುತ್ತದೆ ಎಂದು ಸಹಾಯಕ ಆಯುಕ್ತರಾಗಿದ್ದ ಶಿಂಧೆ ಅವಿನಾಶರವರು ಹೇಳಿದರು
ಅವರು ಪಟ್ಟಣದ ಸಹಾಯಕ ಆಯುಕ್ತರ ಕಛೇರಿ ಹತ್ತಿರದ ಕೊಠಡಿಯೊಂದರಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡುತ್ತಾ ನಮ್ಮ ನಾಡಿನ ಇತಿಹಾಸವನ್ನು ಗುರುತಿಸಲು ಹಿಂದಿನ ಪಳುಯುಳಿಕೆ ನಮಗೆ ಮುಖ್ಯವಾದ ಆಧಾರವಾಗಿದ್ದು ಅಂತಹ ಪಳಿಯುಳಿಕೆಗಳು ವಿನಾಶದ ಅಂಚಿನಲ್ಲಿವೆ ಅಂತಹ ನಶಿಸುತ್ತಿರುವ ಪಳಿಯುಳಿಕೆ ಇತಿಹಾಸದ ಆಕರಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೋಡಲು ಸಿಗುವಂತೆ ಮಾಡುವುದು ಉತ್ತಮ ಕೆಲಸವಾಗಿದೆ ಅಂತಹ ಕೆಲಸವನ್ನು ಚಾರಣ ಬಳಗ ಮಾಡುತ್ತಿದ್ದು ಉತ್ತಮವಾಗಿ ನಡೆಯಲಿ ಎಂದು ಹಾರೈಸಿದರು
ಪಟ್ಟಣದ ಚಾರಣ ಬಳಗವು ತಾಲೂಕಿನಲ್ಲಿ ವಿನಾಶದ ಅಂಚಿನಲ್ಲಿರುವ ಇತಿಹಾಸದ ಕುರುಹುಗಳನ್ನು ಹುಡುಕಿ ತಂದು ಒಂದೆಡೆ ಸಂಗ್ರಹಿಸುವ ಕೆಲಸಕ್ಕೆ ಕೈಹಾಕಿದೆ ಅಂತಹ ಕೆಲಸಕ್ಕೆ ಸ್ಪಮದಿಸಿದ ಹಿಂದಿನ ಸಹಾಯಕ ಆಯುಕ್ತರಾದ ಶಿಂಧೆ ಅವಿನಾಶರವರು ಎಸಿ ಕಛೇರಿಯ ಪಕ್ಕದಲ್ಲಿರುವ ಕೊಠಡಿಯೊಂದನ್ನು ನೀಡಿ ಅದರಲ್ಲಿ ಸಂಗ್ರಹ ಮಾಡಲು ಅವಕಾಶ ನೀಡಿದ್ದರು ಪ್ರಾರಂಭವಾಗುವ ಮುನ್ನವೇ ಅವರಿಗೆ ವರ್ಗವಾಯಿತು ಚಾರಣ ಬಳಗವು ಪುನಃ ಅವರನ್ನು ಕರೆಯಿಸಿ ಅವರಿಂದಲೆ ಪ್ರಾಚ್ಯವಸ್ತು ಸಂಗ್ರಹಾಲಯವನ್ನು ಉದ್ಘಾಟನೆ ಮಾಡಿಸಿದರು ನಂತರ ಚಾರಣ ಬಳಗ ಸಹಾಯಕ ಆಯುಕ್ತರಿಗೆ ಸನ್ಮಾನವನ್ನು ಮಾಡಲಾಯಿತು
ಸದರಿ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಆದಿ ಮಾನವನ ಶಿಲಾಕೊಡಲಿಗಳು ಮಣಿಗಳು ಗಡಿಗೆಯ ತುಣುಕುಗಳು, ನಂತರದ ಕಾಲದ ಮೂರ್ತಿಗಳು ಶಾಸನಗಳು ಸೇರಿದಂತೆ ವಿವಿಧ ಪರಿಕರಗಳನ್ನು ಸಂಗ್ರಹ ಮಾಡಲಾಗಿದೆ ಈ ತಂಡ ಪ್ರತಿ ರವಿವಾರ ಸಂಗ್ರಹ ಕಾರ್ಯ ಮಾಡುತ್ತಿದೆ ಎಂದು ಚಾರಣ ಬಳಗದ ರಾಜೇಶನಾಯಕ ಹೇಳುತ್ತಾರೆ
ಈ ಸಂದರ್ಭದಲ್ಲಿ ರಾಜೇಶನಾಯಕ, ಅಶೋಕನಾಯಕ, ಬಸವರಾಜ ಆನ್ವರಿ, ಸಿದ್ದಾರೂಢ,ಅಮಜಯನಾಐಕ ಶಿವಂಗಿ, ಬಸವರಾಜ ಬೈಲಗುಡ್ಡ,ವೆಂಕೋಬ, ಸಿದ್ದುಸರ್ಜಾಪುರ, ಚಂದ್ರು ಕರಡಕಲ್ ಸೇರಿದಂತೆ ಇದ್ದರು