ಪುರಸಭೆ ಸಾಮಾನ್ಯಸಭೆ::
ಸದಸ್ಯರ ಗಮನಕ್ಕೆ ಇಲ್ಲದೆ ಬಿಲ್ ಪಾಸ್, ಪ್ರಶ್ನೆಗಳ ಸುರಿಮಳೆ, ಸಮಜಾಯಿಸಿದ ಅಧ್ಯಕ್ಷರು,
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪುರಸಭೆಯ ಸದಸ್ಯರ ಗಮನಕ್ಕೆ ಇಲ್ಲದಂತೆ ಹಲವಾರು ಕಾಮಗಾರಿಯ ಬಿಲ್ ಗಳನ್ನು ಮಾಡಿದ್ದು ನಮಗೆ ತಿಳಿಸದೆ ಬಿಲ್ ಮಾಡಿದ್ದು ನೋಡಿದರೆ ಕಾಮಗಾರಿಯಲ್ಲಿ ಸಾಕಷ್ಟು ಗೋಲ್ ಮಾಲ್ ನಡೆದಿದೆ ಎಂದು ಹಲವಾರು ಸದಸ್ಯರು ಒಕ್ಕೋರಲಿನಿಂದ ಪ್ರಶ್ನೆಗಳ ಸುರಿಮಳೆಗೈದರು ಅಧ್ಯಕ್ಷ ಬಾಬುರಡ್ಡಿ ಮುನ್ನೂರರವರು ವೃಥಾ ಆರೋಪ ಸರಿಯಲ್ಲವೆಂದು ಸಮಜಾಯಿಸಿದ ಘಟನೆ ನಡೆಯಿತು
ಪಟ್ಟಣದ ಪುರಸಭೆಯ ಕಾರ್ಯಾಲಯದ ಸಭಾಂಗಣದಲ್ಲಿ ಜರುಗಿಸಿ ಸಾಮಾನ್ಯಸಭೆಯಲ್ಲಿ ಪಿರಸಭೆ ವ್ಯಾಪ್ತಿಯ ಸಮಸ್ಯೆಗಳ ಕುರಿತು ಚರ್ಚೆನಡೆದಾಗ ವಾರ್ಡಿನಲ್ಲಿ ಹೊಸಬಲ್ಬ ಹಾಕುವಾಗ ಆಯಾ ವಾರ್ಡಿನ ಸದಸ್ಯರ ಗಮನಕ್ಕೆ ತಂದಿಲ್ಲ, ಟೆಂಡರ ಕರೆಯದೆ ಬಲ್ಬ ಖರೀದಿ ಮಾಡಲಾಗಿದೆ ಆದರೆ ಯಾವುದೆ ವಾರ್ಡಿನಲ್ಲಿಯು ದೀಪಗಳು ಸರಿಯಾಗಿ ಹಾಕಲಾಗಿಲ್ಲ ಲಕ್ಷಾಂತರ ಹಣದ ಬಲ್ಬಗಳ ಖರೀದಿ ಮಾಡಿದ್ದರು ಅವುಗಳನ್ನು ಎಲ್ಲಾಕಡೆ ಹಾಕಲಾಗಿಲ್ಲ ಖರೀದಿಯಲ್ಲಿ ಯಾವ ನಿಯಮ ಪಾಲಿಸಿದ್ದೀರಿ ಎಂ,ಡಿ ರಫೀ ಸೇರಿದಂತೆ ಹಲವಾರು ಸದಸ್ಯರು ಪ್ರಶ್ನೆ ಮಾಡಿದರು, ಸಂತೆಕಟ್ಟೆ,ಯಾದವಾಡ ಆಸ್ಪತ್ರೆ ಹತ್ತಿರ ಹಾಗೂ ಅಂಬೇಡ್ಕರ ಭವನದ ಹತ್ತಿರ ಮರಮ್ ಹಾಕಲಾಗಿದೆ ಎಂದು ಲಕ್ಷಾಂತರಹಣ ಖರ್ಚು ಹಾಕಲಾಗಿದೆ ಮರಮ್ ಹಾಕುವಾಗ ಆಯಾ ವಾರ್ಡಿನ ಗಮನಕ್ಕೂ ಇಲ್ಲದೆ ಲಕ್ಷಾಂತರ ಹಣ ಖರ್ಚು ಮಾಡಲಾಗಿದೆ ಅದಕ್ಕೆ ಲೆಕ್ಕಕೊಡಿ ಎಂದಾಗ ನಿಮಗೆ ಎಲ್ಲಾ ದಾಖಲೆಯನ್ನು ತೋರಿಸಲಾಗುವುದು ಎಂದು ಅಧ್ಯಕ್ಷರಾದ ಬಾಬುರಡ್ಡಿಯವರು ಸಮಜಾಯಿಸಿ ನೀಡಿದರು ಸುಮ್ಮನಾಗದ ಸದಸ್ಯರು ಎಷ್ಟು ಮರಮ್ ಖರೀದಿ ಮಾಡಿದ್ದೀರಿ ಎಂ,ಬಿ ಬುಕ್ ನಲ್ಲಿ ಏನು ದಾಖಲಿಸಿದ್ದೀರಿ ಎಷ್ಟು ಕ್ಯೂಬಿಕ್ ಮರಮ್ ಹಾಕಲಾಗಿದೆ ದಾಖಲೆ ನೀಡಿ ಆಯಾ ಸ್ಥಳಗಳಿಗೆ ಹೋಗೋಣ ಅಲ್ಲಿ ನಿಮ್ಮ ಲೆಕ್ಕದಂತೆ ಮರಮ್ ಹಾಕಲಾಗಿದೆಯಾ ಎಂದು ನಮಗೆ ಮಾಹಿತಿ ನೀಡಿ ಮಾಹಿತಿ ಕೇಳಿದರೆ ಸರಿಯಾದ ಮಾಹಿತಿ ಸಿಗುತ್ತಿಲ್ಲವೆಂದು ಪ್ರಶ್ನೆಗಳ ಸುರಿಮಳೆಗೆ ಒಂದೆ ಉತ್ತರ ನಿಮಗೆ ದಾಖಲೆ ನೀಡಲಾಗುತ್ತದೆ ಎಂದು ಅಧ್ಯಕ್ಷರ ನುಡಿ
ಪಟ್ಟಣದಲ್ಲಿ ಕಸವಿಲೆವಾರಿ ಸರಿಯಾಗಿ ನಡೆಯುತ್ತಿಲ್ಲ,ಬಲ್ಬಗಳನ್ನು ಹಾಕದೆ ವಆರ್ಡುಗಳು ಕತ್ತಲೆಯಲ್ಲಿವೆ ಏನು ಮಾಡುತ್ತೀದ್ದೀರಿ ಜನ ನಮಗೆ ಕೇಳುತ್ತಿದ್ದಾರೆ ಅದಕ್ಕೆ ಏನಂತ ಉತ್ತರಕೊಡೋಣವೆಂದು ಹಲವಾರು ಸದಸ್ಯರು ಬೇಸರ ವ್ಯಕ್ತಪಡಿಸಿದರು
ಹುಲಿಗುಡ್ಡ ಸಿವಾರದಲ್ಲಿ ಅಕ್ರಮ ಖಾತಾನಕಲು ಕ್ರಮಕ್ಕೆ ರಫೀ ಒತ್ತಾಯ:ಪುರಸಭೆ ವ್ಯಾಪ್ತಿಯ ಹುಲಿಗುಡ್ಡ ಶಿವಾರದಲ್ಲಿ೦೯-೩೨ ಎಕರೆ ಜಮೀನು ಇದರಲ್ಲಿ ಅಕ್ರಮವಾಗಿ ಖಾತಾನಕಲು ನೀಡಲಾಗಿದ್ದು ಇದರ ಹಿಂದೆ ಕಾಣದ ಕೈಗಳ ಕೈವಾಡವಿದ್ದು ನಿಯಮ ಮೀರಿ ಖಾತಾನಕಲು ಮಾಡಲಾಗಿದ್ದು ಅದನ್ನು ತಡೆಯಬೇಕೆಂದು ಎಂ,ಡಿ ರಫಿ ಪ್ರಶ್ನೆ ಮಾಡಿದಾಗ ಅಧ್ಯಕ್ಷ ಬಾಬುರಡ್ಡಿಯವರು ಮಾತನಾಡಿ ಇದು ಸಾಮಾನ್ಯಸಭೆಯಲ್ಲಿ ಬರುವ ವಿಷಯವಲ್ಲ ಇದನ್ನು ತಾವು ಮುಖ್ಯಾಧಿಕಾರಿಯವರೊಂದಿಗೆ ಮಾತನಾಡಿ ಇಲ್ಲಿ ಚರ್ಚಿಸಬೇಕು ಎಂದು ಹೇಳಿದರು
ಕರಹೆಚ್ಚಳ,ಪಾಸ್ಟಿಕ್ ನಿಷೇಧ, ಕೆರೆಗೆ ಬೋಟಿಂಗ್ ವ್ಯವಸ್ಥೆ ಜಮಾಖರ್ಚು ಅನುಮೋದನೆ,ಜಾಹೀರಾತು ಟೆಂಡರ್ ಕರೆಯುವುದು ಸೇರಿದಂತೆ ಹಲವಾರು ವಿಷಯಗಳ ಚರ್ಚೆನಡೆದವು
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷೆ ಶರಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷರಾದ ದೊಡ್ಡನಗೌಡ ಪಾಟೀಲ್, ಮುಖ್ಯಾಧಿಕಾರಿ ರವಿ ಸಿರಗುಪ್ಪಿ, ಯಮನಪ್ಪಗೌಡ ಮೇಟಿ(ಮುತ್ತುಮೇಟಿ) ಸೋಮನಾಥ ಪಾಟೀಲ್, ಪ್ರಮೋದ ಕುಲಕರ್ಣಿ,ಮಂಜುಳಾ,ಗದ್ದೆಮ್ಮ, ಕುಪ್ಪಮ್ಮ ಬಸವರಾಜ,ರವೂಫ್, ಯಮನಪ್ಪ ದೇಗುಲಮರಡಿ, ಶರಣಪ್ಪ ಕೆಂಗೆರಿ, ಶಶಿಕಲಾ, ಸಂತೋಷ ಶರಣಯ್ಯ ವಿಶ್ವನಾಥ ಆನ್ವರಿ ಸೇರಿದಂತೆ ಇದ್ದರು ವ್ಯವಸ್ಥಾಪಕ ಹನಮಂತನಾಯಕ ಸ್ವಾಗತಿಸಿ ನಿರ್ವಹಿಸಿದರು