ಪಿಒಪಿ ಅಬ್ಬರದಲಿ ಮಣ್ಣಿನ ಗಣಪಕೂಡಿಸಿ ಪರಿಸರ ಜಾಗೃತಿಗೆ ನಾಂದಿ

Laxman Bariker
ಪಿಒಪಿ ಅಬ್ಬರದಲಿ ಮಣ್ಣಿನ ಗಣಪಕೂಡಿಸಿ ಪರಿಸರ ಜಾಗೃತಿಗೆ ನಾಂದಿ
WhatsApp Group Join Now
Telegram Group Join Now

ಪಿಒಪಿ ಅಬ್ಬರದಲಿ ಮಣ್ಣಿನ ಗಣಪಕೂಡಿಸಿ ಪರಿಸರ ಜಾಗೃತಿಗೆ ನಾಂದಿ
೫ವರ್ಷದಿಂದ ಮಣ್ಣಿನ ಗಣಪ ಪ್ರತಿಷ್ಠಾಪನೆ,ಪರಿಸರ ಸ್ನೇಹಿ ಪ್ರಶಸ್ತಿ ಪಡೆದ ಸಂಘ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಿಒಪಿ ಗಣೇಶಮೂರ್ತಿಗಳನ್ನು ಮಾರಾಟ ಹಾಗೂ ಪ್ರತಿಷ್ಠಾಪನೆಗೆ ಸರಕಾರದ ನಿಯಮ ನಿರ್ಬಂಧವಿದ್ದರು ಗಾಳಿಗೆ ತೂರಿ ಪಿಒಪಿ ಪರಿಸರ ಮಾರಕ ಗಣೇಶಗಳ ನಡುವೆ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಕೂಡಿಸಿ ಪರಿಸರ ಜಾಗೃತಿಗೆ ನಾಂದಿ ಹಾಡಿದ ಘಟನೆ ಪಟ್ಟಣದಲ್ಲಿ ಜರುಗಿದೆ


ಪಟ್ಟಣದ ರಾಯಚೂರು ರಸ್ತೆಯಲಿರುವ ಲಕ್ಷ್ಮೀ ಯುವಕ ಸಂಘದಿಂದ ಅಂತಹ ಪರಿಸರ ಸ್ನೇಹಿ ಗಣೇಶನನ್ನು ಕೂಡಿಸುವ ಕೆಲಸ ನಡೆದಿದ್ದು ಸತತ ಐದನೆ ವರ್ಷವು ಮಣ್ಣಿನ ಗಣೇಶನನ್ನು ಕೂಡಿಸಿ ಸಐ ಎನಿಸಿಕೊಂಡಿದ್ದಾರೆ
ಪಿಒಪಿ ಗಣೇಶ ಮೂರ್ತಿಗಳನ್ನು ಕೂಡಿಸಬಾರದು ಮತ್ತು ಮಾರಾಟ ಮಾಡಬಾರದು ಎಂದು ಸರಕಾರದ ಕಟ್ಟುನಿಟ್ಟಾದ ನಿಯಮವಿದ್ದರು ಅಂತಹ ನಿಯಮಗಳನ್ನು ಗಆಳಿಗೆ ತೂರಿ ಎಲ್ಲೆಡೆ ಪಿಒಪಿ ಗಣೇಶಗಳನ್ನು ಅತಿ ಹೆಚ್ಚುಹಣ ನೀಡಿ ತರುವುದು ನಿರಂತರವಾಗಿ ನಡೆಯುತ್ತಾ ಬಂದಿದೆ ಪಿಒಪಿ ಪರಿಸರಕ್ಕೆ ಮಾರಕ ಅದಕ್ಕೆ ಬಳಸಿದ ಬಣ್ಣವು ಹಾನಿಕಾರಕ ಅದಕ್ಕಾಗಿ ಪರಸರಕ್ಕೆ ಹಾನಿಮಾಡುವ ಪಿಒಪಿ ಗಣೇಶ ಮೂರ್ತಿಗಳನ್ನು ಕೂಡಿಸಬಾರದು ಎಂದು ಆದೇಶವಿದ್ದರು ಸಹಿತ ಅದನ್ನು ಮರೆತು ಲಕ್ಷಾಂತರ ಹಣ ಖರ್ಚು ಮಾಡುವುದು ಒಂದೆಡೆಯಾದರೆ ನಿಯಮವನ್ನು ಹಾಗೂ ಪರಿಸರದ ಬಗೆಗೆ ಕಾಳಜಿವಹಿಸಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಕೂಡಿಸಿ ಪರಿಸರ ಪ್ರೇಮ ಮೆರೆಯುವವರು ಇದ್ದಾರೆ ಅಂತಹ ಮಣ್ಣಿನ ಗಣಪತಿಯನ್ನು ಪಟ್ಟಣದ ಲಕ್ಷ್ಮೀ ಯುವಕ ಸಂಘ ಪ್ರತಿಷ್ಠಾಪನೆ ಮಾಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದೆ

ಗಣೇಶಮೂರ್ತಿಯನ್ನು ಮಣ್ಣಿನಿಂದ ಮಾಡಿದರೆ ಅದಕ್ಕೆ ಬಳಸುವ ವಸ್ತುಗಳೆಂದರೆ ಬಾಳೆ ಎಲೆಗಳಿಂದ ಅಲಂಕಾರ ಮಾಡುವುದು ಹೂವು ಎಲೆಗಳ ಬಳಕೆಯಿಂದ ಶೃಂಗಾರ ಮಾಡುವುದರಲ್ಲಿಯು ಜಾಣತನ ಮೆರೆದಿದಾರೆ
ಪ್ರತಿವರ್ಷ ಬೆಳಗಾವಿಯ ಗೋಕಾಕದಿಂದ ಕಡಿಮೆ ಹಣದಲ್ಲಿ ಸುಂದರವಾದ ಮಣ್ಣಿನ ಮೂರ್ತಿಯನ್ನು ತರಲಾಗುತ್ತಿದ್ದು ಗಣೇಶನಿಗೆ ಬಳಸಿದ ಮಣ್ಣಿನಲ್ಲಿ ಹೂವು ಹಣ್ಣು ಗಿಡಮರ ಇತ್ಯಾದಿ ಬೀಗಳನ್ನು ಹಾಕಿ ಮೂರ್ತಿಯನ್ನು ರಚನೆ ಮಾಡಿರುತ್ತಾರೆ ಅಲ್ಲದೆ ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಅಂತಹ ಮಣ್ಣು ಫಲವತ್ತಾಗಿದ್ದು ಅದನ್ನು ಭೂಮಿಗೆ ಹಾಕುವುದರಿಂದ ಪರಿಸರಕ್ಕೆ ಪ್ರೇರಕವಾಗುತ್ತದೆ ಅದರಲ್ಲಿರುವ ಬೀಜಗಳಿಂದ ಹೂವು ಹಣ್ಣು ಗಿಡಮರಗಳು ಬೆಳೆಯಲು ಅನುಕೂಲವಾಗುತ್ತದೆ ಅಲ್ಲದೆ ಮನೆಯ ಮುಂದೆ ಹಾಕಿರುವ ಗಿಡಬಳ್ಳಿಗಳಿಗೂ ಬಳಸಿಕೊಳ್ಳಬಹುದು ಎಂದು ಸಂಘದವರ ಅನಿಸಿಕೆಯಾಗಿದೆ
೨೦೨೦-೨೧ನೇ ಸಾಲಿನಲ್ಲಿ ಮಣ್ಣಿನ ಗಣೇಶ ಕೂಡಿಸಿರುವುದಕ್ಕೆ ಸ್ಥಳಿಯ ಪುರಸಭೆಯಿಮದ ಪರಿಸರ ಪ್ರೇಮಿ ಗಣೇಶ ಎನ್ನುವ ಪ್ರಶಸ್ತಿಯು ದೊರಕಿದೆ ಎಂದು ಯುವಕರು ಹೇಳುತ್ತಾರೆ ಇಂತಹ ಪರಿಸರಸ್ನೇಹಿಯಾಗಿ ನಡೆಯುತ್ತಿರುವ ಯುವಕರ ತಂಡಕಕ್ಕೆ ಶುಭವಾಗಲಿ ಎಂದು ಹಾರೈಸೋಣ ಅಲ್ಲವೇ?
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಬಸ್ಟಾಳ, ತಿಮ್ಮಾರಡ್ಡಿ, ಗೋಪಾಲ್, ರಾಜಶೇಖರ ಶಿವಂಗಿ, ಕಿರಣ ಪಲ್ಲೇದ ಶಿವರಾಜ ಸಜ್ಜನ್ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article