ಪಿಒಪಿ ಗಣೇಶಮೂರ್ತಿ ಭರ್ಜರಿ ತಯಾರಿ, ವ್ಯಾಪಾರ ಬಲುಜೋರು,ತಡೆಯುವವರು ಯಾರು?

Laxman Bariker
ಪಿಒಪಿ ಗಣೇಶಮೂರ್ತಿ ಭರ್ಜರಿ ತಯಾರಿ, ವ್ಯಾಪಾರ ಬಲುಜೋರು,ತಡೆಯುವವರು ಯಾರು?
WhatsApp Group Join Now
Telegram Group Join Now

ಪಿಒಪಿ ಗಣೇಶಮೂರ್ತಿ ಭರ್ಜರಿ ತಯಾರಿ, ವ್ಯಾಪಾರ ಬಲುಜೋರು,ತಡೆಯುವವರು ಯಾರು?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಿಒಪಿ ಗಣೇಶ ಮೂರ್ತಿಗಳನ್ನು ತಯಾರು ಮಾಡಬಾರದು,ಮಾರಾಟ ಮಾಡಬಾರದು ಎಂದು ಸರಕಾರದ ಕಟ್ಟುನಿಟ್ಟಿನ ನಿಯಮವಿದ್ದರು ಪಟ್ಟಣದ ಹೊರವಲಯದಲ್ಲಿ ಭರ್ಜರಿಯಾಗಿ ತಯಾರಿ ಹಾಗೂ ಮಾರಾಟ ಮಾಡಲಾಗುತ್ತಿದ್ದು ತಡೆಯುವವರು ಯಾರು ಎನ್ನುವಂತಾಗಿದೆ

oplus_0

ಪಟ್ಟಣದ ಹೊರವಲಯದ ಕಲಬುರ್ಗಿ ರಸ್ತೆಯ ಮಾತೆಮಾಣಿಕೇಶ್ವರಿ ದೇವಸ್ಥಾನದ ಹತ್ತಿರ ಬೃಹತ್ ಗಾತ್ರದ ಪಿಒಪಿ ಗಣೇಶಮೂರ್ತಿಗಳನ್ನು ತಯಾರು ಮಾಡುತ್ತಿದ್ದು ಯಾವುದೆ ಅಡ್ಡಿ ಆತಂಕವಿಲ್ಲದೆ ನಡೆದಿದ್ದು ಸರಕಾರ ನಿಯಮ ಕೇವಲ ಆದೇಶಗಳಿಗೆ ಸೀಮಿತವಾಯಿತೆ ಎನ್ನುವ ಪ್ರಶ್ನೆಗಳು ಸುರುವಾಗಿವೆ

oplus_0

ಒಂದಿಷ್ಟು ಅಧಿಕಾರಿಗಳಿಗೆ ಕೇಳಿದವರಿಗೆ ತೋರಿಸಲು ಮಣ್ಣಿನವುಗಳನ್ನು ಒಂದೆಡೆ ಇಟ್ಟಿದ್ದು ಉಳಿದಂತೆ ಪಿಒಪಿ ಗಣೇಗ ಮೂರ್ತಿಗಳನ್ನು ತಯಾರು ಮಾಡಲಾಗುತ್ತದೆ
ಗಣೇಶಮೂರ್ತಿಗಳನ್ನು ತಯಾರು ಮಾಡುವವರು ಮಣ್ಣಿನಿಂದ ಗಣೇಶಮೂರ್ತಿಗಳನ್ನು ಮಾಡಬೇಕು ಪಿಒಪಿ ಬಳಸಬಾರದು ಅಲ್ಲದೆ ರಾಸಾಯನಿಕ ಬಣ್ಣಗಳನ್ನು ಬಳಸಬಾರದು ಎಂದು ಸರಕಾರದ ಆದೇಶವಿದ್ದು ಜಿಲ್ಲಾಧಿಕಾರಿಯವರು ಈ ಬಗೆಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ ಆದರೆ ತಾಲೂಕಿನಲ್ಲಿ ಪಿಒಪಿ ಗೆ ತಡೆ ಇಲ್ಲದೆ ಮೂರ್ತಿಗಳ ತಯಾರಿ ನಡೆದಿದೆ ಎಂದು ಪರಿಸರ ಪ್ರೇಮಿಗಳು ದೂರುತ್ತಾರೆ
ಗಣೇಶ ಹಬ್ಬವು ಹತ್ತಿರ ಬಂದಿರುವುದರಿAದ ಖರೀದಿಯು ಬಲು ಜೋರಾಗಿ ನಡೆದಿದ್ದು ಅಧಿಕಾರಿಗಳು ಬರುವ ಮುನ್ನವೇ ಮಾರಾಟ ಮಾಡಬೇಕೆಂಬ ತರಾತುರಿಯಲ್ಲಿ ವ್ಯಾಪಾರಿಗಳು ಇದ್ದಾರೆ
ಹಬ್ಬದ ಮುನ್ನಾದಿನ ಪಟ್ಟಣದಲ್ಲಿ ಬೇರೆಬೇರೆ ಕಡೆಗಳಿಂದ ಪಿಒಪಿ ಗಣೇಶಮೂರ್ತಿಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕ್ರಮವಹಿಸಿದರೆ ಪರಿಸರದ ಹಾನಿ ತಪ್ಪೀತು
ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಿ ಪಿಒಪಿ ಮೂರ್ತಿಗಳ ತಯಾರಿಕೆಗೆ ನಿರ್ಬಂಧವಿಧಿಸಬಹುದೆ ಕಾದುನೋಡಬೇಕಾಗಿದೆ

WhatsApp Group Join Now
Telegram Group Join Now
Share This Article