ಹಟ್ಟಿ:ರಸ್ತೆಯಲ್ಲಿ ಬಿದ್ದಿರುವ ಶಂಕಿತ ಸ್ಪೋಟಕ ವಸ್ತು , ಪೊಲೀಸ್ ತನಿಖೆ ಚುರುಕು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲ್ಲೂಕಿನ ಹಟ್ಟಿ ಕಂಪನಿಯ ಹತ್ತಿರ ರಸ್ತೆಯಲ್ಲಿ ಸ್ಪೋಟಕ ವಸ್ತುಗಳು ಎಂದು ಹೇಳಲಾಗುತ್ತಿರುವ ವಸ್ತುಗಳು ಕಂಡು ಬಂದಿದ್ದು ಪೊಲೀಸ್ ತನಿಖೆ ನಡೆಸಿರುವ ಘಟನೆ ಜರುಗಿದೆ

ಶುಕ್ರವಾರ ಬೆಳಗ್ಗೆ ಎಂಟುಗಂಟೆಯ ಸಮಯ ದಲ್ಲಿ ಲಿಂಗಸಗೂರು ಮಾರ್ಗವಾಗಿ ಹಟ್ಟಿ ಗೆ ವ್ಯಕ್ತಿಯೋರ್ವ ಪಲ್ಸರ್ ಬೈಕ್ ನಲ್ಲಿ ಹೋಗುವಾಗ ಶಂಕಿತ ಸ್ಪೋಟಕ ವಸ್ತುಗಳು ಬೈಕ್ ನಿಂದ ಜಾರಿ ಬಿದ್ದಿವೆ ಎಂದು ಹೇಳಲಾಗುತಿದ್ದು ಬೈಕ್ ಸವಾರ ಎಲ್ಮೇಟ್ ಹಾಕಿರುವುದರಿಂದ ಆತನ ಗುರುತು ಪತ್ತೆಯಾಗಿಲ್ಲ ಎನ್ನಲಾಗುತ್ತದೆ
ಸ್ಪೋಟಕ ವಸ್ತುಗಳು ಎಂದು ಹೇಳುತ್ತಿರುವ ವಸ್ತುಗಳು ಹಟ್ಟಿ ಕಂಪನಿಯ ಮುಖ್ಯ ಪ್ರವೇಶ ದ್ಯಾರದ ಮುಂದಿನ ರಸ್ತೆಯಲಿ ಬಿದ್ದಿವೆ ಕಂಪನಿಯ ಮುಂದೆ ಭದ್ರತೆಯವರು ಇರುತ್ತಾರೆಂದು ಬೈಕ್ ನವನು ಹಾಗೆ ಸಾಗಿದನೊ ಅಥವಾ ಉದ್ದೇಶಪೂರ್ವಕವಾಗಿ ಬೀಳಿಸಿದ್ದಾನೊ ತಿಳಿಯದು
ಸ್ಪೋಟಕ ವಸ್ತುಗಳನ್ನು ಯಾವ ಕಾರಣದಿಂದ ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತಿತ್ತು ಮತ್ತು ಯಾಕೆ ಸಾಗಿಸಲಾಗುತಿತ್ತು ಎಂಬುದು ತಿಳಿದುಬಂದಿಲ್ಲ ಪೊಲೀಸ್ ತನಿಖೆ ನಡೆಸುತಿದ್ದು ತದ ನಂತರ ಮಾಹಿತಿ ತಿಳಿಯಲಿದೆ


