ನಕಲಿನೋಟ್ ಜಾಲದಲ್ಲಿ ಪಟ್ಟಣದ ದುರಗಪ್ಪ ಪೂಜಾರಿ ಭಾಗಿ,ಪೊಲೀಸ್ ವಶಕ್ಕೆ

Laxman Bariker
ನಕಲಿನೋಟ್ ಜಾಲದಲ್ಲಿ ಪಟ್ಟಣದ ದುರಗಪ್ಪ ಪೂಜಾರಿ ಭಾಗಿ,ಪೊಲೀಸ್ ವಶಕ್ಕೆ
Oplus_131072
WhatsApp Group Join Now
Telegram Group Join Now

ಫಾಲೊ ಅಪ್ ಸುದ್ದಿ
ನಕಲಿನೋಟ ಜಾಲದಲ್ಲಿ ಪಟ್ಟಣದ ದುರಗಪ್ಪ ಪೂಜಾರಿ ಭಾಗಿ,ಪೊಲೀಸ್ ವಶಕ್ಕೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಜನರ ಸಂಕಷ್ಟಗಳನ್ನು ಪರಿಹರಿಸುತ್ತೇನೆಂದು ಬೊಗಳೆ ಬಿಡುತ್ತಾ ಹಲವಾರು ಅಮಾಯಕರಿಂದ ಹಣಕೀಳುತಿದ್ದ ಪಟ್ಟಣದ ನಕಲಿ ಸ್ವಾಮೀಜಿ ದುರಗಪ್ಪ ಪೂಜಾರಿ ಎನ್ನುವಾತ ನಕಲಿನೋಟ ಚಲಾವಣೆ ಜಾಲದಲ್ಲಿ ಸಿಲುಕಿ ವಿಜಯಪುರದ ಪೊಲೀಸ್ ಬಂಧಿಸಿ ವಿಚಾರಣೆ ನಡೆಸಿರುವ ಮಾಹಿತಿ ದೊರಕಿದೆ
ಪಟ್ಟಣದ ಕಲಬುರ್ಗಿ ರಸ್ತೆಯ ಜನತಾಕಾಲೋನಿ ಮನೆಯೊಂದರಲ್ಲಿ ವಾಸವಾಗಿದ್ದು ಜನರ ಸಂಕಷ್ಟಗಳಿಗೆ ಪರಿಹಾರ ಮಾಡಿಕೊಡುತ್ತೇನೆಂದು ಹಲವಾರು ಅಮಾಯಕರಿಂದ ಹಣ ಕೀಳುತ್ತಾ ಮಹಿಳೆಯರಿಗೆ ವಂಚಿಸುತ್ತಾ ಹಲವಾರು ಮಹಿಳೆಯರಿಗೆ ನಿಮ್ಮ ಮರ್ಮಾಂಗದಲ್ಲಿ ನಿಂಬೆಹಣ್ಣು ಅಥವ ವನಸ್ಪತಿ ಗಿಡದ ಎಲೆಗಳನ್ನು ಇಡಬೇಕು ಎಂದು ಹೇಳುತ್ತಾ ಮರುಳು ಮಾಡುತ್ತಿದ್ದ ಎನ್ನುವ ಮಾತುಗಳು ಕೇಳಿಬರುತ್ತಿದ್ದವು ಹೀಗೆ ಜನರ ಸಂಕಷ್ಟ ಪರಿಹರಿಸುತ್ತೇನೆಂದು ಬೊಗಳೆ ಬಿಡುವ ಈತ ಇದೀಗ ನಕಲಿನೋಟಿನ ದೊಡ್ಡ ಜಾಲದಲ್ಲಿ ಸಿಲುಕಿಕೊಂಡಿದ್ದು ಆತನನ್ನು ವಿಜಯಪುರದ ಪೊಲೀಸ್ ಬಂದು ಆತನಿರುವ ಮನೆಯ ಮೇಲೆ ದಾಳಿ ನಡೆಸಿ ಮನೆಯಲ್ಲಿ ನಕಲಿನೋಟು ದೊರಕಿದ್ದು ಅವುಗಳೊಂದಿಗೆ ಫೋಟೊ ತೆಗೆದುಕೊಂಡು ಆತನನ್ನು ವಶಕ್ಕೆ ಪಡೆದು ವಿಜಯಪುರಕ್ಕೆ ಕರೆದುಕೊಂಡುಹೋಗಿ ವಿಚಾರಣೆ ನಡೆಸುತ್ತಿರುವ ಬಗೆಗೆ ತಿಳಿದುಬಂದಿದೆ
ಏನಿದು ಪ್ರಕರಣ:ವಿಜಯಪುರದಲ್ಲಿ ವ್ಯಕ್ತಿಯೋರ್ವ ಹಾಲಿನ ಅಂಗಡಿಗೆ ಬಂದು ನಕಲಿನೋಟು ಚಲಾವಣೆ ಮಾಡುತ್ತಿದ್ದನಂತೆ ಅದನ್ನು ಗಮನಿಸಿದ ಅಂಗಡಿ ಮಾಲೀಕರು ವ್ಯಕ್ತಿ ನಕಲಿನೋಟು ಚಲಾವಣೆ ಮಾಡುವಾಗ ಬೇರೆನೋಟು ಕೊಡು ಎಂದಿದ್ದಾರೆ ಆತ ಪುನಃ ಅಂತಹುದೆ ನಕಲಿನೋಟು ಕೊಟ್ಟಾಗ ಅನುಮಾನ ಬಂದು ಸದರಿ ವ್ಯಕ್ತಿಯನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ ಅವನ ಹತ್ತಿರ ಸುಮಾರು ಎರಡುವರೆಸಾವಿರ ನಕಲಿ ನೋಟು ದೊರಕಿವೆ ಆತನಿಗೆ ಯಾರುಕೊಟ್ಟಿದ್ದಾರೆ ಎಂದು ಜಾಡು ಹಿಡಿದಾಗ ಸಿಕ್ಕಿಬಿದ್ದವನೆ ಲಿಂಗಸಗೂರು ಪಟ್ಟಣದ ನಕಲಿಸ್ವಾಮಿ ದುರಗಪ್ಪ ಪೂಜಾರಿ ಈತನಲ್ಲಿಗೆ ಬಂದ ವಿಜಯಪುರದ ವ್ಯಕ್ತಿಗೆ ಒಂದುವರೆ ಲಕ್ಷ ನಕಲಿನೋಟು ಕೊಟ್ಟಿರುವುದಾಗಿ ಹೇಳಲಾಗುತ್ತಿದೆ ಲಿಂಗಸಗೂರಿಗೆ ಆಗಮಿಸಿದ ಪೊಲೀಸ್ ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈತನಲ್ಲಿ ಸುಮಾರು ಹತ್ತುಸಾವಿರ ನಕಲಿನೋಟು ದೊರಕಿವೆ ಎಂದು ಹೇಳಲಾಗುತ್ತಿದೆ ಹಾಗೆಯೆ ಈತನನ್ನು ವಿಚಾರಿಸಿದಾಗ ಮಹಲಿಂಗಪುರದ ಕಿರಣ ಎನ್ನುವಾತ ದುರಗಪ್ಪನಿಗೆ ನಕಲಿನೋಟು ನೀಡಿರುವದಾಗಿ ತಿಳಿದುಬಂದಿದೆ ಅಲ್ಲದೆ ವಿಜಯಪುರದ ಹತ್ತಿರದ ಕೊಲ್ಲಾರ ವ್ಯಕ್ತಿ ಹೀಗೆ ನಾಲ್ಕುಜನರನ್ನು ವಶಕ್ಕೆ ಪಡೆದ ವಿಜಯಪುರದ ಪೊಲೀಸ್ ವಿಚಾರಣೆ ನಡೆಸುತ್ತಿರುವುದಾಗಿ ಮಾಹಿತಿ ದೊರಕಿದೆ ಅಲ್ಲದೆ ಸದರಿ ದುರಗಪ್ಪ ಪೂಜಾರಿಯ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸ್ ಅದರಲ್ಲಿ ನೋಡಿದಾಗ ಹಲವಾರು ಮಹಿಳೆಯರ ನಗ್ನಚಿತ್ರಗಳು ಇರುದಾಗಿ ಹೇಳಲಾಗುತ್ತಿದೆ ಹಾಗಾದರೆ ಈತನ ಮೇಲೆ ತನಿಖೆ ನಡೆದರೆ ಮಹಿಳೆಯರ ಬಗೆಗೆ ಯಾವಕೃತ್ಯ ನಡೆಸುತ್ತಿದ್ದರು ಎಂಬುದು ಬಯಲಾಗಲಿದೆ
ಒಟ್ಟಾರೆಯಾಗಿ ನಾನು ಪವಾಡಪುರುಷ ಎಂದು ಹೇಳುತ್ತಾ ಜನರಿಗೆ ಮಂಕುಬೂದಿ ಎರಚಿ ಹಣಪಡೆಯುತಿದ್ದ ದುರಗಪ್ಪ ಪೂಜಾರಿ ಮೂಲತಃ ತಾಲೂಕಿನ ಗೋನವಾಟ್ಲ ಗ್ರಾಮದವನಾಗಿದ್ದು ಸುಮಾರು ವರ್ಷಗಲಿಂದ ಲಿಂಗಸಗೂರಿನಲ್ಲಿಯೆ ವಾಸವಾಗಿದ್ದು ಜನರಿಗೆ ಮಾಟ ಮಂತ್ರ ಎಂದು ಹೇಳುತ್ತಲೆ ನಂಬಿಸುವ ಕೆಲಸ ಹವ್ಯಹತವಾಗಿ ಮಾಡುತ್ತಿರುವದಾಗಿ ತಿಳಿದುಬಂದಿದೆ ಸದ್ಯ ವಿಜಯಪುರದಲ್ಲಿ ಬಂಧಿಯಾಗಿದ್ದಾನೆ

WhatsApp Group Join Now
Telegram Group Join Now
Share This Article