ಈಚನಾಳ ಗ್ರಾ,ಪಂ ಫೈಲ್ ಮೂವ್ ಆಗಲು ಐದುಸಾವಿರಬೇಕಂತೆ! ಪಿಡಿಓ ಖಾಜಾಬೇಗಂ ಆಡಿಯೋ ವೈರಲ್!!?
ಕಲ್ಯಾಣ ಕರ್ನಾಟಕ ವಾರ್ತೆ
ಪಿಡಿಓ ಬೇಗಂ ಹೇಳಿದ ಮೇಲೆ ಸುರೇಶನಭೇಟಿಯಾಗಬೇಕು ತಪ್ಪಿದರೆ ಅಯೋಮಯ!!
ಲಿಂಗಸಗೂರು:ತಾಲೂಕಿನ ಈಚನಾಳ ಗ್ರಾಮಪಂಚಾಯ್ತಿಯಲ್ಲಿ ಕೆಲಸವಾಗಬೇಕಾದರೆ ಇಲ್ಲಿಯ ಅಭಿವೃದ್ದಿಯ ಅಧಿಕಾರಿ ಖಾಜಾಬೇಗಂ ಗೆ ಲಂಚಕೊಡಬೇಕಂತೆ ಲಂಚಕೊಡದಿದರೆ ಅವರ ಫೈಲ್ ಮೂವ್ ಆಗುವುದಿಲ್ಲವೆಂದು ಹೇಳಲಾಗುತ್ತಿದ್ದು ಅಂತಹ ಆಡಿಯೋ ಒಂದು ವೈರಲ್ ಆಗಿದ್ದು ಅದು ಕಲ್ಯಾಣ ಕರ್ನಾಟಕ ಪತ್ರಿಕೆಗೆ ದೊರಕಿದೆ
ಈಚನಾಳ ಗ್ರಾಮದ ರೈತ ಲಿಂಗಪ್ಪ ಪೂಜಾರ ಎನ್ನುವವರು ದನದ ಶೆಡ್ ನಿರ್ಮಿಸಲು ನರೇಗಾದಲ್ಲಿ ಫಲಾನುಭವಿಯಾಗಿದ್ದಾರೆ ಇವರು ಸುಮಾರು ಹಣಖರ್ಚುಮಾಡಿ ದನದ ಶೆಡ್ ನಿರ್ಮಾಣ ಮಾಡಿದ್ದು ನರೇಗಾದಿಂದ ಬರಬೇಕಾದ ಹಣದವನ್ನು ನೀಡಲು ಈಗನಾಳ ಗ್ರಾಮಪಂಚಾಯ್ತಿಯ ಅಭಿವೃದ್ದಿ ಅಧಿಕಾರಿ ಖಾಜಾಬೇಗಂ ಎನ್ನುವವರು ಫಲಾನುಭವಿ ಲಿಂಗಪ್ಪ ಪೂಜಾರಿಗೆ ಕರೆಮಾಡಿ ನೀ ಗ್ರಾಮಪಂಚಾಯ್ತಿಗೆ ಬನ್ನಿ ಎನ್ನುತ್ತಾರೆ ಏನು ಕೆಲಸ ಮೆಡಂ ಎಂದರೆ ಬೇಗನೇ ಬನ್ನಿ ಕೆಲಸ ಇದೆ ಎನ್ನುತ್ತಾರೆ
ನಂತರದಲ್ಲಿ ಫಲಾನುಭವಿ ಗ್ರಾಮಪಂಚಾಯ್ತಿಗೆ ತೆರಳಿದಾಗ ನಿಮ್ಮ ಫೈಲ್ ಎಲ್ಲಾ ರೆಡಿಯಾಗಿದೆ ಅದನ್ನು ಮೂವ್ ಮಾಡಲು ಐದುಸಾವಿರ ಹಣಕೊಡು ಎಂದು ಓಪನ್ ಆಗಿಯೆ ಕೇಳುತ್ತಾರೆ ನಮಗೆ ಲಂಚದ ರೂಪದಲ್ಲಿ ಹಣಕೊಡುತ್ತಿರುವುದು ನೀ ಒಬ್ಬನೆ ಅಲ್ಲ ಯಾರು ಯಾರು ಫಲಾಭವಿ ಇದ್ದಾರೆಯೊ ಅವರೆಲ್ಲರನ್ನು ಕರೆಸಿ ಹಣಪಡೆಯುತಿದ್ದೇನೆ ಎಲ್ಲರಂತೆ ನೀನು ನನಗೆ ಐದುಸಾವಿರ ಕೊಡಬೇಕೆಂದು ಬೇಡಿಕೆ ಇಡುತ್ತಾಳೆ
ಸದ್ಯದ ಫೈಲ್ ನಲ್ಲಿ ಹಣ ಕಡಿಮೆ ಬಂದಿದೆ ಮೇಡಂ ಇನ್ನು ಹೆಚ್ಚಿಗೆ ಬರಬೇಕಾಗಿತ್ತು ಎಂದು ಫಲಾನುಭವಿ ಕೇಳಿದರೆ ನಾನಿದ್ದೇನೆ ಹೆಚ್ಚಿಗೆ ಮಾಡಿಕೊಡುತ್ತೇನೆ ಎನ್ನುವ ಭರವಸೆಯನ್ನು ನೀಡುತ್ತಾಳೆ
ಸದರಿ ಗ್ರಾಮಪಂಚಾಯ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲಾರದವರ ಖಾತೆಗಳಿಗೂ ಹಣ ಹಾಕಲಾಗಿದೆ ಬೇರೆ ಊರಿನಲ್ಲಿರುವವರ ಖಾತೆಗಳಿಗೂ ಹಣ ಹಾಕಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತವೆ
ಇಲ್ಲಿ ತಾನೆ ನೇರವಾಗಿ ಲಂಚದ ಹಣ ತೆಗೆದುಕೊಳ್ಳುವುದಿಲ್ಲವಂತೆ ಅಭಿವೃದ್ದಿ ಅಧಿಕಾರಿ ಮೆಡಂ ಹೇಳಿದ ಮೇಲೆ ಫಲಾನುಭವಿ ಸುರೇಶ ಎನ್ನುವ ಕಂಪ್ಯೂಟರ್ ಆಪರೇಟರನ್ನು ಭೇಟಿಯಾಗಬೇಕಂತೆ ಅಲ್ಲಿಗೆ ಆವರ ಫೈಲ್ ಮೂವ್ ಆದಂತೆ
ಕ್ರಮಯಾವಾಗ?ಈಚನಾಳ ಗ್ರಾಮಪಂಚಾಯ್ತಿ ಪಿಡಿಓ ಖಾಜಾಬೇಗಂ ಓಪನ್ ಆಗಿ ಫಲಾನುಭವಿಗಳಿಗೆ ಲಂಚಕ್ಕೆ ಬೇಡಿಕೆ ಇಟ್ಟರು ಸಹಿತ ಇದುವರೆಗೂ ಅವರ ಮೇಲೆ ಕ್ರಮಯಾಕೆ ಜರುಗಿಸಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ ಇನ್ನು ಮುಂದಾದರು ಸಂಬಂಧಿಸಿದ ಅಧಿಕಾರಿಗಳು ಕ್ರಮಜರುಗಿಸಬಹುದೆ ಕಾದುನೋಡೋಣ!!?