ರಕ್ಷಿತ ಅರಣ್ಯ ಭೂಮಿ ರೈತರಿಗೆ ಪಟ್ಟಾ ತಹಸೀಲ್ದಾರಆದೇಶ ರದ್ದು,ಲಿಂಗಸಗೂರಿನಲಿ ಕ್ರಮ ಯಾವಾಗ?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮಸ್ಕಿ ತಹಸೀಲ್ದಾರ ಸುಧಾಅರಮನೆ ಎಂಬುವರು ಲಿಂಗಸುಗೂರ ರಕ್ಷಿತ ಅರಣ್ಯ ಬಗ್ಗಲಗುಡ್ಡದ ಸರ್ವೆ ನಂ೨೮ ರಲ್ಲಿ ಒಟ್ಟು೧೬ ಎಕರೆ ಯರದೊಡ್ಡಿ ತಾಂಡಾದ ಸೋಮಪ್ಪ ತಂ ಗ್ಯಾಮಪ್ಪ, ಡಾಕಪ್ಪ ತಂ ಗ್ಯಾನಪ್ಪ ಜಗನಪ್ಪ ಗ್ಯಾನಪ್ಪ, ಸತ್ಯಪ್ಪ ಗ್ಯಾನಪ್ಪ, ಹೇಮಪ್ಪ ಗ್ಯಾನಪ್ಪ, ರೇಖಪ್ಪ ಗ್ಯಾನಪ್ಪ, ಚಂದಪ್ಪ ಗ್ಯಾನಪ್ಪ, ಶಂಕ್ರಪ್ಪ ಗ್ಯಾನಪ್ಪ ೮ ಜನ ರೈತರಿಗೆ ಅರಣ್ಯ ಜಮೀನು ಮಂಜೂರ ಮಾಡಿದ ಮಸ್ಕಿ ತಹಸೀಲ್ದಾರವರು ೨೩ನೇ ಇಸ್ವಿಯಲ್ಲಿ ಪಟ್ಟಾ ಮಾಡಿ ಪೆಬ್ರುವರಿ ೨೪ರಂದು ಪಹಣಿಯಲ್ಲಿ ನಮೂದಿಸಿದ್ದು ಲಿಂಗಸೂಗೂರ ವಲಯ ಅರಣ್ಯ ಅಧಿಕಾರಿ ವಿದ್ಯಾ ಎಂಬುವರು ಸಹಾಯಕ ಆಯುಕ್ತರ ನ್ಯಾಯಲಯದಲ್ಲಿ ಮೇಲಮನವಿ ಸಲ್ಲಿಸಿದ ಕಾರಣ ವಿಚಾರಣೆ ನಡೆಸಿದ ಸಹಾಯಕ ಆಯುಕ್ತ ಶಿಂಧೆ ಅವಿನಾಶ ದಿ ೨-೭-೨೪ರಂದು ಮಸ್ಕಿ ತಹಸೀಲ್ದಾರ ಆದೇಶವನ್ನು ರದ್ದುಪಡಿಸಿ ನ್ಯಾಯಾಲಯದಲ್ಲಿ ಬಹಿರಂಗ ಘೋಷಿಸಲಾಯಿತು,
ಪ್ರತಿವಾದಿ ರೈತರ ಪರವಾಗಿ ಸಿಂಧನೂರ ಮಿಥುನಕುಮಾರ ವಕೀಲರು ವಾದಿಸಿದ್ದರು
ಸದರಿ ರಕ್ಷಿತ ಅರಣ್ಯ ಭೂಮಿ ಪ್ರಕರಣದಲ್ಲಿ ಮಸ್ಕಿ ತಹಸೀಲ್ದಾರ ಅರಣ್ಯ ಕಾನೂನು ಉಲ್ಲಂಘಿಸಿದ್ದು ಸ್ಪಷ್ಠವಾಗಿದ್ದರು ಅವರ ವಿರುದ್ದ ಕಂದಾಯ ಇಲಾಖೆಯವರ ಯಾವ ಕ್ರಮ ಜರುಗಿಸಬಹುದು ಕಾದು ನೋಡಬೇಕಾಗಿದೆ ಆದರೆ ತಹಲ್ದಾರವರಿಗೆ ರಕ್ಷಣೆ ನೀಡಲಾಗಿರುವ ಬಗೆಗೆಚರ್ಚೆ ನಡೆದಿದೆ,
ಲಿಂಗಸಗೂರಿನಲ್ಲಿ ಅರಣ್ಯ ಒತ್ತುವರಿ ಮಾಡಿ ಪ್ಲಾಟ್ ಮಾಡಲಾಗಿದೆ ಎನ್ನಲಾದ ಭೂಮಿ ರಕ್ಷಣೆ ಯಾವಾಗ?- ಲಿಂಗಸುಗೂರ ಪಟ್ಟಣದ ಬಹುಕಾಲದ ಅರಣ್ಯ ಭೂಮಿ ಸರ್ವೆನಂ ೪೯೨ ರಲ್ಲಿ ಅಂದಾಜು ೪ ಎಕರೆ ಪಕ್ಕದ ಸೈಟನವರು ಒತ್ತುವರಿ ಮಾಡಿ ಗುಡ್ಡದ ಕಲ್ಲು ಗಿಡಗಳನ್ನು ಜೆಸಿಬಿ ಮೂಲಕ ಸ್ವಚ್ಛ ಮಾಡಿ ಪ್ಲಾಟಗಳನ್ನು ನಿರ್ಮಿಸಿ ಗ್ರಾಹಕರಿಗೆ ಮಾರಾಟಕ್ಕೆ ಮುಂದಾಗಿದ್ದರು ವಲಯ ಅರಣ್ಯಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದು ಈಗ ಜಂಟಿ ಸರ್ವೇಗೆ ಆದೇಶ ನೀಡಿದ್ದಾರೆ ಹೊರತು ಯಾವದೆ ಕ್ರಮ ಜರುಗಿಲ್ಲ ಕಾಮಗಾರಿ ಮುಂದುವರೆಸದಂತೆ ಸೂಚಿಸಿರುವದಾಗಿ ಅರಣ್ಯ ಅಧಿಕಾರಿ ಹೇಳುತ್ತಾರೆ ಲಿಂಗಸುಗೂರ ವಲಯ ಅರಣ್ಯಧಿಕಾರಿಗಳು ಅರಣ್ಯ ಭೂಮಿಯನ್ನು ಮಸ್ಕಿಯಲ್ಲಿ ರಕ್ಷಿಸಿದಂತೆ ಇಲ್ಲಿಯು ರಕ್ಷಿಸುತ್ತಾರೆಯೆ ಕಾದು ನೋಡಬೇಕಾಗಿದೆ