ಜಿಲ್ಲಾಸ್ಪತ್ರೆ ಸ್ಥಳಾಂತರ ಖಂಡಿಸಿ ನಮ್ಮ ಕರ್ನಾಟಕ ಸೇನೆ ಮನವಿ
ಶಾಸಕ ಬಾದರ್ಲಿ ಒಡೆತನದ ವಿಸಿಬಿ ಕಾಲೇಜು ತೆರವುಗೊಳಿಸಲು ಒತ್ತಾಯ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿಗೆ ಬಂದಿರುವ ಕಛೇರಿಗಳನ್ನು ಸಿಂಧನೂರಿಗೆ ವರ್ಗಾಯಿಸಲು ಯತ್ನಿಸುತ್ತಿರುವ ಶಾಸಕ ಬಾದರ್ಲಿ ಹಂಪನಗೌಡರ ಒಡೆತನ ವಿಸಿಬಿ ಕಾಲೇಜು ಪಟ್ಟಣದಿಂದ ತೆರವುಗೊಳಿಸಬೇಕು ಹಾಗೂ ಜಿಲ್ಲಾಸ್ಪತ್ರೆಯನ್ನು ಪಟ್ಟಣಕ್ಕೆ ನೀಡಬೇಕೆಂದು ನಮ್ಮ ಕರ್ನಾಟಕ ಸೇನೆ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತರ ಮೂಲಕ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿತು
ತಾಲೂಕು ಹಾಗೂ ಅಕ್ಕಪಕ್ಕದ ತಾಲೂಕುಗಳಿಗೆ ಆಸರೆಯಾಗಬೇಕಾಗಿದ್ದ ೨೦೦ ಹಾಸಿಗೆಯ ಜಿಲ್ಲಾಸ್ಪತ್ರೆಯನ್ನು ಬಜೆಟ್ ನಲ್ಲಿ ನೀಡಿದ್ದು ಅದಕ್ಕೆ ಈಗಾಗಲೆ ಸ್ಥಳವನ್ನು ಗುರುತಿಸಲಾಗಿದೆ ಆದರೆ ಸಚಿವ ಸಂಪುಟದ ಸಭೆಯಲ್ಲಿ ಸದರಿ ಆಸ್ಪತ್ರೆ ಸಿಂಧನೂರಿಗೆ ಸ್ಥಳಾಂತರ ಮಾಡಲಾಗಿದೆ ಇದು ಸರಿಯಾದ ಕ್ರಮವಲ್ಲ ಲಿಂಗಸಗೂರು ತಾಲೂಕಿಗೆ ಏನೆ ಬಂದರು ಅದನ್ನು ಸಿಂಧನೂರಿಗೆ ಸ್ಥಳಾಂತರ ಮಾಡಿಕೊಳ್ಳಲು ಯತ್ನಿಸುತ್ತಿರುವ ಶಾಸಕ ಹಂಪನಗೌಡ ಬಾದರ್ಲಿ ಮೊದಲು ತನ್ನ ಒಡೆತನ ಲಿಂಗಸಗೂರಿನಲ್ಲಿರುವ ವಿಸಿಬಿ ಕಾಲೇಜನ್ನು ಸ್ಥಳಾಂತರ ಮಾಡಲಿ
ಲೂಡಲೆ ೨೦೦ ಹಾಸಿಗೆಯ ಜಿಲ್ಲಾಸ್ಪತ್ರೆಯನ್ನು ಲಿಂಗಸಗೂರಿನಲ್ಲಿ ಸ್ಥಾಪಿಸಬೇಕು ಇಲ್ಲವಾದರೆ ಸಂಘಟನೆಯವತಿಯಿAದ ಪ್ರತಿಭಟನೆ ನಡೆಸಲಾಗುವುದೆಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶಟ್ಟಿಯವರ ಮೂಲಕ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾಧ್ಯಕ್ಷ ಶಿವರಾಜ ನಾಯ್ಕ, ನಿರುಪಾದಿ ಹಿರೇಮಠ, ಚಂದ್ರುನಾಯಕ, ಬಸವರಾಜ ನಾಯಕ, ಚಂದ್ರಕಾAತ ಆದೋನಿ,ದೇವೇಂದ್ರನಾಯ್ಕ, ಶಿವರಾಜ ಅಲಬನೂರು,ಕಿರಣನಾಯ್ಕರುದ್ರಯ್ಯಸ್ವಾಮಿ, ಸೇರಿದಂತೆ ಇದ್ದರು