ಅಕಾಲಿಕ ಮಳೆ ಮಟ್ಟೂರಲ್ಲಿ ಸಿಡಿಲು ಬಡಿದು ಒಂದು ಎಮ್ಮೆ ಎರಡು ಆಕಳು ಸಾವು
ಕಲ್ಯಾಣ ಕರ್ನಾಟಕ ವಾರ್ತೆ
ಮಟ್ಟೂರು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಸಾಯಂಕಾಲ ೫ ಗಂಟೆಗೆ ಏಕಾಏಕಿ ಮಳೆ ಬಿರುಗಾಳಿ ಪ್ರಾರಂಭವಾಯಿತು ಈ ವೇಳೆ ಬಿದ್ದ ಸಿಡಿಲಿಗೆ ಗ್ರಾಮದ ಹೊರವಲಯದ ಜಮೀನಿನಲ್ಲಿ ಸಿಡಿಲು ಬಡಿದು ಎರಡು ಹಸು ಹಾಗೂ ಒಂದು ಎಮ್ಮೆ ಸಾವನ್ನಪ್ಪಿದ ಘಟನೆ ಜರುಗಿದೆ.
ಗ್ರಾಮದ ಅಮರೇಗೌಡ ತಂದೆ ಲಕ್ಕನಗೌಡ ಮಾ.ಪಾಟೀಲ್ ಅವರಿಗೆ ಸೇರಿದ ಮೂರು ಜಾನುವಾರುಗಳು ಜಮೀನಿನಲ್ಲಿದ್ದ ವೇಳೆ ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲಿ ಸಾವಿಗೀಡಾಗಿ ಅಂದಾಜು ೨ಲಕ್ಷರೂ ರೈತರು ನಷ್ಟ ಅನುಭವಿಸುವಂತಾಗಿದೆ. ಈವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ವಿರೇಶ ಹಾಗೂ ಪಿಡಿಓ ತಿಮ್ಮನಗೌಡ ಕಂದಾಯ ಇಲಾಖೆ ಗ್ರಾಮಲೆಕ್ಕಿಗರ ಸಹಾಯಕ ಶರಣಪ್ಪ ಭೇಟಿ ಜತೆ ನೀಡಿ ಕಂದಾಯ ಮತ್ತು ಪಶು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಪಣ್ಣ ಜಾವೂರು ಗ್ರಾ.ಪಂ ಸದಸ್ಯರಾದ ಶಂಕ್ರಣ್ಣ ನಂದಿಹಾಳ, ಹನಮಂತ ಗೋಸಿ ಹನಮಂತ ರಾಂಪೂರು ಇತರರು ನೈಸರ್ಗಿಕ ವಿಕೋಪದಡಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಕಂದಾಯ ಇಲಾಖೆ ಮತ್ತು ಸರಕಾರಕ್ಕೆ ಒತ್ತಾಯಿಸಿದ್ದಾರೆ.