ಕಳ್ಳಿಲಿಂಗಸಗೂರು:ಬಾಲ್ಯ ವಿವಾಹ ಮಾಹಿತಿ, ಮುಚ್ಚಳಿಕೆ ಬರೆಸಿಕೊಂಡ ಅಧಿಕಾರಿಗಳು

Laxman Bariker
WhatsApp Group Join Now
Telegram Group Join Now

ಕಳ್ಳಿಲಿಂಗಸಗೂರು:ಬಾಲ್ಯ ವಿವಾಹ ಮಾಹಿತಿ, ಮುಚ್ಚಳಿಕೆ ಬರೆಸಿಕೊಂಡ ಅಧಿಕಾರಿಗಳು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ತಾಲೂಕಿನ ಕಳ್ಳಿಲಿಂಗಸಗೂರು ಗ್ರಾಮದಲಿ ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಗ್ರಾಮಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳು ಬಾಲ್ಯವಿವಾಹವನ್ನು ತಡೆದು ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡ ಘಟನೆ ಭಾನುವಾರ ಜರುಗಿದೆ

ಗ್ರಾಮದ ವರನ ಸ್ವಗೃಹದಲಿ ಭಾನುವಾರ 12-30ಕ್ಕೆ ಮದುವೆ ಏರ್ಪಾಟು ಆಗಿತ್ತು ಮದುವೆಗೆ ಎರಡು ಗಂಟೆ ಮೊದಲೆ ಬಾಲ್ಯ ವಿವಾಹ ನಡೆಯುತ್ತಿರುವ ಬಗೆಗೆ ಪೊಲೀಸ್ 112 ಗರ ಮಾಹಿತಿ ಲಭ್ಯವಾಗಿತ್ತು
ಕೂಡಲೆ ಕಾರ್ಯ ಪ್ರವೃತ್ತರಾದ ಪೊಲೀಸ್ ಇಲಾಖೆ ಬಾಲ್ಯವಿವಾಹವನ್ನು ತಡೆದು ಪೊಲೀಸ್ ಠಾಣೆಗೆ ಪಾಲಕರನ್ನು ಕರೆತಂದು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಮಾಹಿತಿ ನೀಡಿದರು ಆಗ ಇಲಾಖೆಯ ಹಿರಿಯ ಮೇಲ್ವಿಚಾರಕಿ ಬಸಮ್ಮ ಹಾಗೂ ಕಳ್ಳಿಲಿಂಗಸಗೂರು ವೃತ್ತದ ಮೇಲ್ವಿಚಾರಕಿ ಸಂಕಮ್ಮ ಠಾಣೆಗೆ ಆಗಮಿಸಿ ವಿಚಾರಣೆ ನಡೆಸಿದಾಗ ವರ ರಮೇಶ ವಯಸು 21 ತಾಲ್ಲೂಕಿನ ಐದಬಾವಿ ಗ್ರಾಮದ ವಧು ಲಕ್ಷ್ಮೀ ವಯಸ್ಸು 14ವರ್ಷ 8ತಿಂಗಳು ಇರುವುದಾಗ ತಿಳಿದುಬಂದಿದ್ದರಿಂದ ಪಾಲಕರಿಗೆ ಬುದ್ದಿವಾದ ಹೇಳಿ ಕಾನೂನಿನಡಿ ಮದುವೆ ಮಾಡಲು ಬರುವುದಿಲ್ಲವೆಂದು ತಿಳಿಹೇಳಿ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಂಡು ಇಂದು ಭಾನುವಾರವಾಗಿರುವುದರಿಂದ ಸೋಮವಾರ ಬೆಳಗ್ಗೆ ವಧು ವರರ ವಯಸಿನ ದಾಖಲಾತಿ ತರುವಂತೆ ಸೂಚಿಸಿ ಮನೆಗೆ ಕಳುಹಿಸಿದರು

WhatsApp Group Join Now
Telegram Group Join Now
Share This Article