ಲಿಂಗಸುಗೂರ ಎ.ಪಿ.ಎಂ.ಸಿ ಯಾರ್ಡನಲ್ಲಿ ಖಾಸಗಿ ಅಂಗಡಿಗಳ ತೆರುವಿಗೆ ೪೫ಜನ ವರ್ತಕರಿಗೆ ನೋಟಿಸ

Laxman Bariker
ಲಿಂಗಸುಗೂರ ಎ.ಪಿ.ಎಂ.ಸಿ ಯಾರ್ಡನಲ್ಲಿ ಖಾಸಗಿ ಅಂಗಡಿಗಳ ತೆರುವಿಗೆ ೪೫ಜನ ವರ್ತಕರಿಗೆ ನೋಟಿಸ
WhatsApp Group Join Now
Telegram Group Join Now

ಲಿಂಗಸುಗೂರ ಎ.ಪಿ.ಎಂ.ಸಿ ಯಾರ್ಡನಲ್ಲಿ ಖಾಸಗಿ ಅಂಗಡಿಗಳ ತೆರುವಿಗೆ ೪೫ಜನ ವರ್ತಕರಿಗೆ ನೋಟಿಸ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ: ಪಟ್ಟಣದ ಎಪಿಎವiಸಿ ಯಾರ್ಡನಲ್ಲಿ ಸರಕಾರದ ನಿಯಮಗಳ ಅಡಿಯಲ್ಲಿ ನಡೆಸಬೇಕಾದ ಮಳಿಗೆಗಳನ್ನು ನಡೆಸದೆ ಬಾಡಿಗೆ ಕೊಟ್ಟು ಸರಕಾರ ನಿಯಮ ಉಲ್ಲಂಘನೆ ಮಾಡಿದ್ದು ಅಂತಹ ೪೫ ವರ್ತಕರ ಮೆಳೆಗೆಗಳ ಲೈಸನ್ಸ್ ರದ್ದು ಪಡಿಸುವ ಕುರಿತು ಎ.ಪಿ.ಎಂ.ಸಿ ಕಾರ್ಯದರ್ಶಿ ಸಾವಿತ್ರಿ ನೋಟಿಸ ನೀಡಿದ್ದಾರೆ.

ಸಮಿತಿಯ ಮುಖ್ಯ ಮಾರುಕಟ್ಟೆ ಹಾಗೂ ಉಪ ಮಾರುಕಟ್ಟೆಗಳಲ್ಲಿ ಪ್ರಾಂಗಣಗಳಲ್ಲಿ ಅಧಿಸೂಚಿತ್ತ ಕೃಷಿ ಹುಟ್ಟುವಳಿಗಳ ವ್ಯಾಪಾರ ವಹಿವಾಟು ನಡೆಸುವ ಸಲ್ಲುವಾಗಿ ಸಮಿತಿಯಿಂದ ನಿವೇಶನ ಹಂಚಿಕೆ ಮಾಡಲಾಗಿರುತ್ತದೆ ಆದರೆ ಹಂಚಿಕೆಯಾದ ನಿವೇಶನದಲ್ಲಿ ಅಧಿಸೂಚಿತ್ತ ಕ್ಷೃಷಿ ಹುಟ್ಟುವಳಿಗಳ ವ್ಯಾಪಾರ ವಹಿವಾಟು ನಡೆಸದೆ ಟಿ.ಸಿ ರೀಪೆರಿ, ಒಳ್ಳಣ್ಣೆ ಮಾರಾಟ ಸಿಮಿಂಟ ಅಂಗಡಿ ಹಾಗೂ ತಮ್ಮ ಅಂಗಡಿಗಳನ್ನು ಬೇರವರಿಗೆ ಬಾಡಿಗೆ ಕೂಟ್ಟಿರುವದಾಗಿ ಶಿರಾಜ ತೊಟದ ಯರಡೋಣಿ ಇವರು ದೂರು ನೀಡಿದಾರೆ ಈ ಕುರಿತು ಸಂಬಂಧಿಸಿದ ವರ್ತಕರಿಗೆ ಸಾಕಷ್ಟು ಬಾರಿ ಮೌಖಿಕವಾಗಿ ಹಾಗೂ ನೋಟಿಸಗಳ ಮುಖಾಂತರ ಅನಧಿಕೃತ ವ್ಯಾಪಾರ ವಹಿವಾಟು ನಡೆಸುವದನ್ನು ತೆರುವುಗೋಳಿಸುವಂತೆ ತಿಳಿವಳಿಕೆ ನೀಡಲಾಗಿದರು ಕೂಡ ಅಂಗಡಿಗಳನ್ನು ಬಾಡಿಗೆ ರೂಪದಲ್ಲಿ ನೀಡಿದನ್ನು ತೆರುವುಗೊಳಿಸಿ ವ್ಯಾಪಾರ ವಹಿವಾಟು ಪ್ರಾರಂಭಿಸಿರುವದಿಲ್ಲ ಇದರಿಂದಯಾಗಿ ಕೃಷಿ ಮಾರುಕಟ್ಟೆ ವ್ಯವಾಹರ (ಮಾರುಕಟ್ಟೆ ಪ್ರಾಂಗಣದಲ್ಲಿ ಆಸ್ತೆ ಹಂಚಿಕೆ ನಿಯಂತ್ರಣ)ನಿಯಮಗಳು ೨೦೦೪ರ ಉಲ್ಲಘಂಣೆ ಆಗಿರುತ್ತದೆ ಆದರಿಂದ ೨೦೦೪ರ ಆಸ್ತೆ ಹಂಚಿಕೆ ನಿಯಮಗಳು ಮತ್ತು ಒಪ್ಪಂದ ಕರಾರಿನಲ್ಲಿ ಹಂಚಿಕೆಯಾದ ನಿವೇಶನದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಅನಧಿಕೃತವಾಗಿ ಬಾಡಿಗೆ ಹಾಗೂ ಇತರೆ ಚಟುವಟಿಕೆಗಳನ್ನು ನಡೆಸುವುದಕ್ಕೆ ಅವಕಾಶ ವಿರುವುದಿಲ್ಲ ಅಧಿಸೂಚಿತ್ತ ಕೃಷಿ ಹುಟ್ಟುವಳಿಗಳ ವ್ಯವಾಹರಕ್ಕೆ ಮಾತ್ರ ಬಳಕೆ ಮಾಡಬೇಕಾಗಿರುತ್ತದೆ.
ಪ್ರಯುಕ್ತ ಈ ನೋಟಿಸ ತಲುಪಿದ ೭ ದಿನಗಳಯೊಳಗೆ ಲಿಖಿತ ಸಮಜಾಹಿಸಿಯನ್ನು ಕಛೇರಿಗೆ ಸಲ್ಲಿಸಿಲು ತಿಳಿಸಿರುತ್ತದೆ ಎಂದು ದಿನಾಂಕ ೦೬-೦೯-೨೦೨೪ರಂದು ಎ.ಪಿ.ಎಮ.ಸಿ ಕಾರ್ಯದರ್ಶಿ ತಿಳಿಸಿರುತ್ತಾರೆ.
ವರ್ತಕರಿಗೆ ನೋಟಿಸ್;-
ಮಂಜುನಾಥ ಟ್ರೇಡರ್ಸ ಮಸ್ಕಿ ನಿವೇಶನ ಸಂಖೆ ೩೭, ಶ್ರೀ ಗವಿಸಿದ್ದೇಶ್ವರ ಟ್ರೇಡರ್ಸ, ನಿರ್ಮಾಲಾ ಟ್ರೇಡರ್ಸ,ಚೈತನ್ಯ ಕಿರಾಣಿ ಸ್ಟೋರ ಮಸ್ಕಿ, ವೀರಭದ್ರೇಶ್ವರ ಟ್ರೇಡರ್ಸ,ಶ್ರೀ ಮಲ್ಲಿಕಾರ್ಜುನಾ ಟ್ರೇಡರ್ಸ, ಶ್ರೀ ಲಕ್ಷಿö್ಮ ವಿಜಯ ಟ್ರೇಡರ್ಸ, ಶ್ರೀ ಊಟಗನೂರ ಬಸವೇಶ್ವರ ಟ್ರೇಡರ್ಸ, ಶ್ರೀ ಲಕ್ಷಿö್ಮ ಟ್ರೇಡರ್ಸ , ಶ್ರೀ ಕರಡಿ ಬಸವೇಶ್ವರ ಟ್ರೇಡಸ್, ಶ್ರೀ ವಾಸವಿ ಟ್ರೇಡರ್ಸ, ಘನಮಠೇಶ್ವರ ಎಂಟರ ಪ್ರೆöÊಸಸ್, ಶ್ರೀ ಅಲಮ್ಮಪ್ರಭು ಟೇಡರ್ಸ, ಶ್ರೀ ರೇಣುಕಾ ಟ್ರೇಡರ್ಸ ಹಾಗೂ ಇತರೆ ೪೫ ನಿವೇಶನದಾರರಿಗೆ ನೋಟಿಸ ನೀಡಲಾಗಿದೆ

WhatsApp Group Join Now
Telegram Group Join Now
Share This Article