ಸೋಡಾ ಪಾಯಿಂಟ್,ಕೆಮಿಕಲ್ ರಹಿತ ಹಳ್ಳಿಹೈದನ ದೇಸಿಸೋಡಾ,
ಎಲ್ಲರಂತಲ್ಲವೀ ಸೋಡಾ..! ನೀನೊಮ್ಮೆ ಕುಡಿದು ನೋಡಾ!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಬೇಸಿಗೆ ಬಂತೆಂದರೆ ರಣಬಿಸಿಲಿಗೆ ನೀರಿನ ದಾಹ ಸಹಕ ಅಂತಹ ಸಂದರ್ಭದಲ್ಲಿ ಜನರು ವಿವಿಧ ರೀತಿಯ ತಂಪುಪಾನಿಯ ಸೇವಿಸುವುದು ಸಾಮಾನ್ಯ ಆದರೆ ಪಟ್ಟಣದಲ್ಲಿರುವ ಸೋಡಾ ಪಾಯಿಂಟ್ ನಲ್ಲಿ ಸಿಗುವ ಸೋಡಾ ಕೆಮಿಕಲ್ ಸಹಿತ ಸೋಡಾವಾಗಿದ್ದು ಆರೋಗ್ಯಕ್ಕೂ ಉತ್ತಮ ಎನ್ನಲಾಗುತ್ತಿದೆ
ಹೌದು ಪಟ್ಟಣದ ಮುಖ್ಯರಸ್ತೆಯ ಶಾಸಕರ ಮಾದರಿಯ ಶಾಲೆಯ ಮುಂದೆ ತಳ್ಳುಗಾಡಿಯಲ್ಲಿ ಸೋಡಾಪಾಯಿಂಟ್ ಎನ್ನುವ ಸೋಡಾದ ಅಂಗಡಿಯಲ್ಲಿ ದೇಸಿಯ ಸೋಡಾ ಸಿಗಲಿದ್ದು ಇದರಲ್ಲಿ ಯಾವುದೆ ಕೆಮಿಕಲ್ ಇರುವುದಿಲ್ಲವೆಂದು ಅಂಗಡಿಕಾರ ಹೇಳುತ್ತಾನೆ
ತಾಲೂಕಿನ ಮಾವಿನಬಾವಿ ಗ್ರಾಮದ ಅಪ್ಪಟ ಹಳ್ಳಿಹೈದನಾದ ನಜೀರ ಅಹ್ಮದ ಹಾಗೂ ಆತನ ತಮ್ಮ ಶಬ್ಬೀರ ಸಹೋದರರು ಆರಂಭಿಸಿರುವ ಸೋಡಾದ ಅಂಗಡಿಯಲ್ಲಿ ಕೆಮಿಕಲ್ ರಹಿತ ಸೋಡಾ ಮಾರಾಟ ಮಾಡಲಾಗುತ್ತಿದ್ದು ಇವರು ವಿಭಿನವಾಗಿ ಸೋಡಾ ನಿಡುತ್ತಾರೆ ಅದನ್ನು ಸವಿಯುವುದೆ ಒಂದು ಸಂಭ್ರಮವೆನ್ನಬೇಕು
ಮಣ್ಣಿನ ಗಡಿಯಲ್ಲಿ ಕುಡಿಯುವ ನೀರನ್ನು ಇಟ್ಟಿದ್ದು ಕುಡಿಯಲು ಮಣ್ಣಿನಮಗಿಯನ್ನು ಬಳಕೆ ಮಾಡಲಾಗುತ್ತಿದೆ ನೀರುಮಣ್ಣಿನ ಮಡಿಕೆಯಲ್ಲಿ ಕುಡಿಯುವುದು ಮತ್ತೊಂದು ರೀತಿಯಲ್ಲಿ ಗ್ರಾಹಕನಿಗೆ ತಂಪು ನೀಡುತ್ತದೆ
ಯಾವಯಾವ ಸೋಡಾ ಸಿಗುತ್ತದೆ:ಲಿಂಬುಸೋಡಾ, ಪುದಿನಾಸೋಡಾ, ಶರಬತ್, ಸೋಡಾ ಶರಬತ್, ನನ್ನಾರಿ, ಜೀರಾ ಮಸಾಲ ಸೋಡಾ, ಹೀಗೆ ಹಲವು ದೇಸಿಯ ಸೋಡಾಗಳನ್ನು ನೀಡಲಾಗುತ್ತಿದ್ದು ಕೈಗೆಟುಕುವ ಬೆಲೆಯಲ್ಲಿ ನೀಡಲಾಗುತ್ತಿದೆ
ಇತ್ತೀಚೆಗೆ ಆರಂಭ ಮಾಡಿರುವ ಈ ಸೋಡಾ ಅಂಗಡಿಯು ಜನ ಒಮ್ಮೆ ಬಂದವರು ಮತ್ತೆ ಮತ್ತೆ ಬಂದು ಸೋಡಾ ಸವಿಯುತ್ತಿದ್ದಾರೆ
ಗ್ರಾಮೀಣಭಾಗದಿಂದ ಬಂದಿರುವ ಈ ಯುವಕರು ತಮ್ಮ ಬದುಕನ್ನು ಸೋಡಾದಿಂದಲೆ ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ ನೀವು ಒಮ್ಮೆ ಈ ಯುವಕರ ಸೋಡಾ ರುಚಿನೋಡಿ ಪ್ರೋತ್ಸಾಯಿಸಿ ಏನಂತೀರಾ?