ಶಕ್ತಿ ಯೋಜನೆಯಲ್ಲಿ ೫೦೦ಕೋಟಿ ಮಹಿಳೆಯರ ಪ್ರಯಾಣ ಯಶಸ್ವಿ, ಸಿಹಿಹಂಚಿ ಸಂಭ್ರಮಾಚರಣೆ::
ಜನದಟ್ಟಣೆ ತಡೆಯಲು ಹೊಸಬಸ್ ಗಳು ಬರಲಿವೆ-ವೆಂಕಟೇಶ ಗುತ್ತೇದಾರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿಯೋಜನೆಯಲ್ಲಿ ೫೦೦ಕೋಟಿ ಮಹಿಳಾ ಪ್ರಯಾಣ ಯಶಸ್ವಿಯಾದ ನಿಮಿತ್ಯವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಗೆ ಪೂಜೆ ಸಲ್ಲಿಸಿ ಸಿಹಿಹಂಚಿ ಸಂಭರಮಾಚರಣೆಯನ್ನು ಮಾಡಲಾಯಿತು
ರಾಜ್ಯ ಸರಕಾರದ ಶಕ್ತಿ ಯೋಜನೆಯಲ್ಲಿ ರಆಜ್ಯದಾದ್ಯಂತ ೫೦೦ ಕೋಟಿ ಮಹಿಳೆಯರು ಯಶಸ್ವಿ ಪ್ರಯಾಣ ಮಾಡಿದ್ದು ಅದಕ್ಕಾಗಿ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ ನಡೆಯುತಿದ್ದು ಅದರಂತೆ ಪಟ್ಟಣದಲ್ಲಿ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿ ಬಸ್ ನಿಲ್ದಾಣದಲ್ಲಿ ಬಸ್ ಗೆ ಪೂಜೆ ಸಲ್ಲಿಸಿ ಮಹಿಳಾ ಪ್ರಯಾಣಿಕರಿಗೆ ಸಿಹಿಹಂಚಿ ಸಂಭ್ರಮಾಚರಣೆಯನ್ನು ಮಾಡಲಾಯಿತು
ನಂತರ ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಮಾತನಾಡಿ ರಾಜ್ಯದಲ್ಲಿ ಶಕ್ತಿಯೋಜನೆಯಲ್ಲಿ ೫೦೦ಕೋಟಿ ಮಹಿಳೆಯರು ಯಶಸ್ವಿ ಪ್ರಯಾಣ ಮಾಡಿದ್ದು ನಮ್ಮ ಸರಕಾರದ ಯಶಸ್ವಿಯಾಗಿದೆ ಅದಕ್ಕಾಗಿ ನಾವೆಲ್ಲ ಸೇರಿ ಬಸ್ ಗೆ ಪೂಜೆ ಸಲ್ಲಿಸಿ ಸಿಹಿಹಂಚಿದ್ದೇವೆ ಎಂದರು
ನಿತ್ಯ ಪ್ರಯಾಣದಲ್ಲಿ ಜನದಟ್ಟಣೆಯಾಗುತ್ತಿದೆ ಶಾಲಾ ಮಕ್ಕಳಿಗೆ ಸಾರ್ವಜನಿಕರಿಗೆ ಪ್ರಯಾಣಕ್ಕೆ ತೊಂದರೆಯಾಗುತ್ತಿದೆ ಇದಕ್ಕೇನು ಪರಿಹಾರ ಇದೆಯಾ ಎಂದು ಕೇಳಿದಾಗ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಹೆಚ್ಚಿನ ವಾಹನಗಳು ಬರುವ ಸಂಭವವಿದೆ ಜನದಟ್ಟಣೆ ತಡೆಯಲು ಕ್ರಮವಹಿಸಲಾಗುವುದು ಎಂದರು
ನAತರ ಡಿಪೋ ಮ್ಯಾನೇಜರ್ ಪ್ರಕಾಶ ದೊಡ್ಡಮನಿ ಮಾತನಾಡಿ೧೧,೦೬,೨೦೨೩ರಿಂದ ಪ್ರಾರಂಭವಾದ ಈ ಯೋಜನೆಯಲ್ಲಿ ಇಲ್ಲಿಯವರೆಗೆ ತಾಲೂಕಿನಲ್ಲಿ ೧ಕೋ೮೭ಲಕ್ಷ ಮಹಿಳಾ ಪ್ರಯಾಣಿಕರು ಓಡಾಡಿದ್ದು೭೨.೯೦ಕೋಟಿ ವೆಚ್ಚವಾಗಿದೆ ಪ್ರತಿದಿನಾಲು ಸರಾಸರಿ೨೪೬೦೦ ಮಹಿಳೆಯರು ಓಡಾಡುತ್ತಿದ್ದಾರೆ ಈ ಯೋಜನೆಯ ಪೂರ್ವದಲ್ಲಿ ೧೧೮ ಅನುಸೂಚಿಗಳು ಇದ್ದು ಯೋಜನೆಯ ನಂತರ೧೩ಅನುಸೂಚಿಗಳು ಹೆಚ್ಚಾಗಿದ್ದು ೧೩೧ ಅನುಸೂಚಿಗಳಾಗಿವೆ ೧೩೪ ಟ್ರಿಪ್ ಗಳು ಹೆಚ್ಚಾಗಿವೆ ಜನದಟ್ಟಣೆ ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಸ್ಥಳಿಯವಾಗಿ ಹೆಚ್ಚುಟ್ರಿಪ್ ಮಾಡಲಾಗುತ್ತಿದೆ ಹೆಚ್ಚುವರಿ ಬಸ್ ಬಂದರೆ ಹೆಚ್ಚುಅನುಕೂಲವಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗೋವಿಂದನಾಯಕ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ವೆಂಕಟೇಶ ಗುತ್ತೇದಾರ, ಎಂ,ಡಿ ರಫಿ,ಅಮರೇಶ ಹಿರೇಹೆಸರೂರು,ಸಂಜೀವಪ್ಪ ಹುನಕುಂಟಿ, ಗದ್ದೆನಗೌಡ,ಖಾಜಾಹುಸೇನ ಪೂಲವಾಲೆ,ಡಿಪೋ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ ಮಹಿಳಾ ಸದಸ್ಯರು ಸೇರಿದಂತೆ ಇದ್ದರು