ಬೋಟ್‌ನಲಿ ನದಿದಾಟಿ ನಡುಗಡ್ಡೆಗೆ ತಾಲೂಕಾಡಳಿತ ಭೇಟಿ,ಸಂತ್ರಸ್ತರ ಮನವೊಲಿಕೆಗೆ ಯತ್ನ, ಬರಲೊಪ್ಪದ ನೆರೆಸಂತ್ರಸ್ಥರು

Laxman Bariker
ಬೋಟ್‌ನಲಿ ನದಿದಾಟಿ ನಡುಗಡ್ಡೆಗೆ ತಾಲೂಕಾಡಳಿತ ಭೇಟಿ,ಸಂತ್ರಸ್ತರ ಮನವೊಲಿಕೆಗೆ ಯತ್ನ, ಬರಲೊಪ್ಪದ ನೆರೆಸಂತ್ರಸ್ಥರು
WhatsApp Group Join Now
Telegram Group Join Now

೨,೫೦-೩ಲಕ್ಷ ಕ್ಯೂಸೆಕ್ ನೀರು ನದಿಗೆ:
ಬೋಟ್‌ನಲಿ ನದಿದಾಟಿ ನಡುಗಡ್ಡೆಗೆ ತಾಲೂಕಾಡಳಿತ ಭೇಟಿ,ಸಂತ್ರಸ್ತರ ಮನವೊಲಿಕೆಗೆ ಯತ್ನ, ಬರಲೊಪ್ಪದ ನೆರೆಸಂತ್ರಸ್ಥರು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ:ಕೃಷ್ಣಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ತಾಲೂಕಿನ ನಡುಗಡ್ಡೆಗಳಿಗೆ ಸಂಪರ್ಕದ ಕೊರತೆಯಾಗಿದ್ದು ಮ್ಯಾದರಗಡ್ಡಿಯಲಿರುವ ಎರಡು ಕುಟುಂಬಗಳ ಹತ್ತಿರ ಸಹಾಯಕ ಆಯುಕ್ತರು ಬೋಟ್ ಮೂಲಕ ತೆರಳಿ ಸಂತ್ರಸ್ತರನ್ನು ಭೇಟಿಮಾಡಿ ಸುರಕ್ಷಿತ ಸ್ಥಳಕ್ಕೆ ಕರೆತರಲು ಯತ್ನಿಸಿದರಾದರು ಅಲ್ಲಿಯ ರೈತರು ಆಚೆ ಬರಲು ಒಪ್ಪಲಿಲ್ಲವೆಂದು ತಾಲೂಕಾಡಳಿತದಿಂದ ತಿಳಿದುಬಂದಿದೆ

ಬಸವಸಾಗರ ಜಲಾಶಯದಿಂದ ೨೫ ಕ್ರಸ್ಟ ಗೇಟುಗಳ ಮುಖಾಂತರ ಕೃಷ್ಣಾ ನದಿಗೆ೨.೫೦೦೦೦-ದಿಂದ ೩ ಲಕ್ಷ ಕ್ಯೂಸೆಕ ನೀರು ಬಿಡಲಾಗುತ್ತಿದ್ದು ಮ್ಯಾದರಗಡ್ಡಿಯ ಎರಡು ಕುಟುಂಬಗಳ ಸುಮಾರು ಆರೇಳು ಜನರು ಅಲ್ಲಿ ವಆಸ ಮಾಡುತ್ತಿದ್ದು ಈಗಾಗಲೆ ಸಂಪರ್ಕವನ್ನು ಕಳೆದುಕೊಂಡಿದ್ದಾರೆ ಅವರೆನ್ನು ಕರೆತರಲು ಸಹಾಯಕ ಆಯುಕ್ತರ ನೇತೃತ್ವದಲ್ಲಿ ತಾಲೂಕಾಡಳಿತವು ಬೋಟ್ ಮೂಲಕ ನದಿಯನ್ನು ದಾಟಿ ನಡುಗಡ್ಡೆಯಲ್ಲಿ ವಾಸ ಮಾಡುತ್ತಿರುವ ಎರಡು ಕುಟುಂಬಗಳ ಜನರನ್ನು ಭೇಟಿ ಮಾಡಿ ಸುರಕ್ಷಿತ ಸ್ಥಳಕ್ಕೆ ಬರಲು ಮನವಿಯನ್ನು ಮಾಡಿದರು
ಆದರೆ ಸದರಿ ಸಂತ್ರಸ್ತರು ನಾವು ಹೊರಗಡೆ ಬಂದರೆ ಇಲ್ಲಿ ನಮ್ಮ ಜಾನುವಾರುಗಳಿಗೆ ತೊಂದರೆಯಾಗಲಿದೆ ಅಲ್ಲದೆ ಸುಮಾರು ೩೫ ಎಕರೆ ಜಮೀನು ಇದ್ದು ಅದರಲ್ಲಿ ಉತ್ತಮವಾದ ಬೆಳೆ ಬಂದಿದೆ ಅದುಕೂಡ ಹಾಳಾಗಲಿದೆ ಅದಕ್ಕಾಗಿ ನಾವು ಬರುವುದಿಲ್ಲವೆಂದು ಹೇಳಿರುವುದಾಗಿ ತಿಳಿದುಬಂದಿದೆ
ಶಾಶ್ವತ ಸ್ಥಳಾಂತರಕ್ಕೆ ಭರವಸೆ: ಸದರಿ ನಡುಗಡ್ಡೆಯ ಜನತೆಗೆ ತಾಲೂಕಾಡಳಿತವು ಆದಷ್ಟು ಬೇಗನೆ ಶಾಶ್ವತ ಸಥಳಾಂತರ ಮಾಡುವ ಭರವಸೆಯನ್ನು ನೀಡಲಾಗಿದ್ದು ನಡುಗಡ್ಡೆಯ ಜನತೆಯ ಸಕಲ ಸಮಸ್ಯೆಗಳಿಗೆ ಸ್ಪಂದಿಸಲು ಸಕಲವನ್ನು ಸಿದ್ದತೆಯಲ್ಲಿರುವುದಾಗಿ ತಿಳಿದುಬಂದಿದೆ

ಜೀವದಹಂಗು ತೊರೆದು ನದಿದಾಟಿದ ತಾಲೂಕಾಡಳಿತ:

ನದಿಗೆ ಸುಮಾರು ೨-೫೦ರಿಂದ೩ಲಕ್ಷ ಕ್ಯೂಸೆಕ್ ನೀರು ಹರಿದುಬರುತಿದ್ದು ಸಹಾಯಕ ಆಯುಕ್ತರು ತಹಸೀಲ್ದಾರರು ಡಿವೈಎಸ್ಪಿ ಸೇರಿ ತಾಲೂಕಾಡಳಿತ ಅಗ್ನಿಶಾಮಕ ದಳದ ಸಹಾಯದ ಮೂಲಕ ಬೋಟ್ ನಲಿ ನದಿದಾಟಿ ನಡುಗಡ್ಡೆಯಲಿರುವ ನೆರೆಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಅವರ ಕುಂದುಕೊರೆತೆಗಳನ್ನು ಅರಿತು ಅವರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಿರುವುದಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಅವಿನಾಶ ಸಿಂಧೆ ,ತಹಸೀಲ್ದಾರ ಶಂಶಾಲಂ, ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ ಹಾಗೂ ಅಗ್ನಿಶಾಮಕದಳ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article