ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಗತ್ಯ ಕ್ರಮವಹಿಸಲಾಗಿದೆ- ತಾ,ಪಂ ಅಧಿಕಾರಿ ಉಮೇಶ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ೧೩೬ ಗ್ರಾಮಗಳು ಹಾಗೂ ೫೭೯ ಜನವಸತಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಲಾಗಿದೆ ಎಂದು ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಹೇಳಿದರು
ಅವರು ತಮ್ಮ ಕಾರ್ಯಾಲಯದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ಬೇಸಿಗೆ ಆರಂಭವಾಗಿರುವುದರಿAದ ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಅಗತ್ಯ ಕ್ರಮವಹಿಸಲಾಗಿದ್ದು ಯಾವುದೆ ರೀತಿಯ ತೊಂದರೆಯಾಗAದತೆ ಕ್ರಮವಹಿಸಲಾಗಿದೆ ಬಿಸಿಲು ಹೆಚ್ಚು ಇರುವುದರಿಂದ ಬೊರವೆಲೆ ಇತ್ಯಾದಿ ಜಲಮೂಲಗಳಲ್ಲಿ ನೀರಿನ ತೊಂದರೆ ಉಂಟಾದರೆ ಖಾಸಗಿಯವರ ಬೋರವೆಲ್ ಅಥವ ಜಲಮೂಲ ಸಿದ್ದತೆಯಲ್ಲಿರುವಂತೆ ಎಲ್ಲಾ ಪಿಡಿಓ ಗಳಿಗೆ ಸೂಚಿಸಲಾಗಿದೆ ೧೩ ಗ್ರಾಮಪಂಚಾಯಿತಿಗಳಲ್ಲಿ ೨೧ ಗ್ರಾಮಗಳಲ್ಲಿ ೨೧ ಬೋರವೆಲ್ ತೊಂದರೆಯಲ್ಲಿವೆ ಎನ್ನುವುದನ್ನು ಗುರುತಿಸಲಾಗಿದೆ ಅಲ್ಲಿ ಖಾಸಗಿ ಬೊರವೆಲ್ ಇತ್ಯಾದಿ ಸಿದ್ದತೆ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು ತಾಲೂಕಿನಲ್ಲಿ ೭೮೧ ಬೋರವೆಲ್ ಗಳಿದ್ದು ಯಾವ ಗ್ರಾಮಕ್ಕೂ ಟ್ಯಾಂಕರ್ ಮೂಲಕ ನೀರು ವಿತರಣೆ ಮಾಡುವ ಸಂದರ್ಭಬಾರದAತೆ ನೋಡಿಕೊಳ್ಳಲಾಗುತ್ತಿದೆ ಒಂದು ವೇಳೆ ಆಕಸ್ಮಿಕ ಸಮಸ್ಯೆ ಉಂಟಾದರೆ ಹೊಸ ಬೊರವೆಲ್ ಗಳಿಗೂ ಮನವಿ ಸಲ್ಲಿಸಲಾಗಿದೆ
ತಾಲೂಕಿನಲ್ಲಿ ೧೧೮ ಶುದ್ದ ಕುಡಿಯುವ ನೀರಿನ ಘಟಕಗಳು ಇದ್ದು ಅವುಗಳಲ್ಲಿ ೧೭ ದುರಸ್ಥಿಗೆ ಸ್ಥಿತಿಗೆ ಬಂದಿದ್ದು ೧೦೧ ಬೋರವೆಲ್ ಗಳು ಉತ್ತಮವಾಗಿವೆ ತಾಲೂಕಿನಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದAತೆ ಎಲ್ಲಾ ಸಿದ್ದತೆಯಲ್ಲಿರುವುದಾಗಿ ಅವರು ಹೇಳಿದರು
ಈ ಸಂದರ್ಭದಲ್ಲಿ ಮಹಿಬೂಬ ಸೇರಿದಂತೆ ಇದ್ದರು


