*ರಾಷ್ಟ್ರೀಯ ಹೆದ್ದಾರಿ ವಿವಾದ, ರೈತರ ಮೇಲೆ ದಬ್ಬಾಳಿಕೆ, ಬೆಳೆ ನಾಶ*
ಕಲ್ಯಾಣ ಕರ್ನಾಟಕ ವಾರ್ತೆ
ಮಸ್ಕಿ/ಲಿಂಗಸಗೂರು:: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿವಾದ ರೈತರ ಅಧಿಕಾರಿಗಳ ನಡುವೆ ವಾಗ್ವಾದ
ರಾಷ್ಟ್ರೀಯ ಹೆದ್ದಾರಿ748,ಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಭೂ ಪರಿಹಾರ ಬಂದಮೇಲೆ ಕೆಲಸ ಪ್ರಾರಂಭ ಮಾಡಿ ಎನ್ನುವ ರೈತರ ವಾದವನ್ನು ತಳ್ಳಿಹಾಕಿ ಪೊಲೀಸ್ ಬಂದೊಬಸ್ತಿನಲ್ಲಿ ಕಾಮಗಾರಿ ಆರಂಭ ಮಾಡಿದ್ದು ರೈತರ ಬೆಳೆನಾಶವಾಗಿದೆ ಎನ್ನಲಾಗುತ್ತಿದೆ
ಮಸ್ಕಿ ತಾಲೂಕಿನ ಗೋನವಾರ ಗ್ರಾಮದ ಹತ್ತಿರದ ಹೊಲಗಳಲಿ ಇಂದು ಅಧಿಕಾರಿಗಳ ತಂಡವು ಭೇಟಿ ನೀಡಿತ್ತು
ಜೆಸಿಬಿ, ಹಿಟಾಚಿ ಮೂಲಕ ಬಿತ್ತಿದ ಬೆಳ ನಾಶ ಮಾಡಿದ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು.
ಪೊಲೀಸರ ಸಮ್ಮುಖದಲ್ಲಿ ರೈತರಿಗೆ ಅನ್ಯಾಯ ಜರುಗುತ್ತಿದೆ ಎಂದು ರೈತರ ಅಸಮಾಧಾನ. ಈ ಒಂದು ಘಟನೆಯು
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಗೋನವಾರ ದಲ್ಲಿ ನಡೆದಿದ್ದು,
ಭಾರತ ಮಾಲಾ ಯೊಜನೆ ಅಡಿಯಲ್ಲಿ ನಿರ್ಮಾಣ ವಾಗುತ್ತಿರುವ ಬೆಳಗಾವಿ – ರಾಯಚೂರು ರಾಷ್ಟ್ರೀಯ ಹೆದ್ದಾರಿ 748 ಎನ್ ಎಚ್ ರೈತರಿಂದ ಭೂಸ್ವಾಧಿನ ಪಡಿಸಿಕೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರವು, ಕನಿಷ್ಠ ಕಾನೂನು ನಿಯಮಗಳನ್ನು ಪಾಲಿಸುತ್ತಿಲ್ಲ ನಿಯಮ ಉಲ್ಲಂಘಿಸಿ ಅದಿಕಾರಿಗಳು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ರೈತರ ಆರೋಪ.
ರೈತರ ಖಾತೆಗೆ ಪರಿಹಾರ ಹಣ ಜಮಾ ಮಾಡದೇ ದಬ್ಬಾಳಿಕೆ ಮಾಡುತ್ತಿದ್ದು, ಸ್ಥಳದಲ್ಲಿ
ಲಿಂಗಸುಗೂರು ಎಸಿ, ಮಸ್ಕಿ ತಹಸಿಲ್ದಾರ್ ರ ಸಮ್ಮುಖದಲ್ಲಿ ಗಲಾಟೆ ನಡೆಯಿತು
ನಮ್ಮ ಭೂಮಿ ಪಡೆದು ನಮ್ಮ ಖಾತೆಗೆ ಪರಿಹಾರ ಜಮಾ ಮಾಡಿ ಎಂದು ಕೇಳುತ್ತಿದ್ದೇವೆ.
ನೀವು ಅಕೌಂಟ್ ನಂಬರ್ ಕೊಟ್ಟಿಲ್ಲ ನ್ಯಾಯಾಲಯದಲ್ಲಿ ಜಮಾ ಮಾಡಿದ್ದೇವೆ ಎನ್ನುತ್ತಾರೆ.
ಭೂಮಿ ಕಳೆದುಕೊಂಡ ಮಾಲಕರಿಗೆ ಇದುವರೆಗೂ ಯಾವುದೇ ಪರಿಹಾರ ಬಂದಿಲ್ಲ.
ಕುಂಟು ನೆಪ ಹೇಳಿ ರೈತರ ಮೇಲೆ ಪೊಲೀಸರನ್ನ ಬಿಟ್ಟು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನವನ್ನು ರೈತರಾದ ಸಿದ್ದಲಿಂಗಪ್ಪ ಸಾಹುಕಾರ, ಶರಣಪ್ಪ, ವೀರಭದ್ರಪ್ಪ, ಬಾಲಾಜಿ ಸಿಂಗ್ ,ತಿಮ್ಮನಗೌಡ, ದೊಡ್ಡಪ್ಪ ಹೊಸಗೌಡ್ರು ಇನ್ನೂ ಹತ್ತಾರು ಭೂಮಿ ಕಳೆದುಕೊಂಡ ರೈತರ ಅಳಲು,ನೋವು ಹಂಚಿಕೊಂಡರು.