ಗುತ್ತಿಗೆದಾರಿಕೆ ಕೊಟ್ಟು ಕಸಿದ ಹೂಲಿಗೇರಿ,ಅತೃಪ್ತನಾದ ಕಟ್ಟಾಬೆಂಬಲಿಗ ಮುದಕಪ್ಪನಾಯಕ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕ್ಷೇತ್ರದಲ್ಲಿ ನಡೆಯುತ್ತಿರುವ ಗುತ್ತಿಗೆದಾರಿಕೆಯನ್ನು ಮಾಜಿಶಾಸಕ ಡಿ ಎಸ್ ಹೂಲಿಗೇರಿ ತನ್ನ ಕಟ್ಟಾ ಬೆಂಬಲಿಗನಾದ ಮುದಕಪ್ಪನಾಯಕ ಹಂಚಿನಾಳರವಿಗೆ ಮೊದಲು ನೀಡಿ ನಂತರ ಬೇರೆಯವರಿಗೆ ನೀಡಿದ್ದರಿಂದ ಗುತ್ತಿಗೆದಾರಿಕೆಯಿಂದ ವಂಚಿನಾಗಿದ್ದು ಆಕ್ರೋಶ ವ್ಯಕ್ತಪಡಿಸುತ್ತಾನೆ
ತಾಲೂಕಾ ಪಂಚಾಯ್ತಿ ಅನಿರ್ಬಂಧಿತ ಯೋಜನೆಯಲ್ಲಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಹೈಮಾಸ್ ದೀಪ ಅಳವಡಿಕೆ ಸುಮಾರು ೪.೮೦ ಲಕ್ಷದ ಗುತ್ತಿಗೆದಾರಿಕೆಯನ್ನು ಮಾಜಿ ಶಾಸಕ ಡಿ ಎಸ್ ಹೂಲಿಗೇರಿ ಶಿಫಾರಸ್ಸಿನ ಮೇಲೆ ಮುದಕಪ್ಪನಾಯಕ ಹಂಚಿನಾಳರಿಗೆ ದೊರಕಿತ್ತು ಕೆಲಸ ಮಾಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದನು ಅಲ್ಲದೆ ಮಾಜಿ ಶಾಸಕ ಹೂಲಿಗೇರಿ ತಾ,ಪಂ ಅಧಿಕಾರಿಗೆ ಸಹಿತ ಒತ್ತಡ ಹಾಕಿ ಮುದಕಪ್ಪನಾಯಕರಿಗೆ ಬೇಗ ಕೆಲಸ ಮಾಡಲು ಸಹಕಾರ ನೀಡಿ ಎಂದೂ ಸೂಚಿಸಿದ್ದರಂತೆ ಆದರೆ ಏಕಾಏಕಿ ಬದಲಾವಣೆ ಮಾಡಿ ಸದರಿ ಕೆಲಸವನ್ನು ಮುದಗಲ್ಲಿನ ಪರಮೇಶ ಗೋರಾ ಇವರಿಗೆ ನೀಡಲಾಗಿದೆ
ಈಗಾಗಲೆ ರಾಜಕೀಯದಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಮುದಕಪ್ಪನಾಯಕ ಒಮ್ಮೆ ತನ್ನ ಪತ್ನಿಯನ್ನು ತಾ,ಪಂ ಸದಸ್ಯರನ್ನಾಗಿ ಮಾಡಿದ್ದಾರೆ ಅಲ್ಲದೆ ತಾನು ಗ್ರಾಮಪಂಚಾಯ್ತಿ ಸದಸ್ಯನಾಗಿ ಕೆಲಸ ಮಾಡುತ್ತಿದ್ದಾನೆ ಸ್ವಂತಗ್ರಾಮ ಹಂಚಿನಾಳದಲ್ಲಿ ಮೊದಲು ಗುತ್ತಿಗೆದಾರಿಕೆಯನ್ನು ಪಡೆದು ನಂತರದಲ್ಲಿ ಬದಲಾವಣೆಯಾಗಿದೆ ಎಂದರೆ ಗ್ರಾಮದಲ್ಲಿ ನನ್ನ ಬೆಂಬಲಿಗರಲ್ಲಿ ಅಸಮಧಾನ ವ್ಯಕ್ತವಾಗಿದೆ ನಾನು ಹೂಲಿಗೇರಿಯವರನ್ನು ಸಾಕಷ್ಟು ಬೆಂಬಲಿಸಿದ್ದೆನು ಬಹಳ ಅನ್ಯಾಯ ಮಾಡಿದ್ದಾರೆಂದು ಅತೃಪ್ತಿ ವ್ಯಕ್ತಪಡಿಸುತ್ತಾರೆ
ಕಳೆದ ಚುನಾವಣೆಯಲ್ಲಿ ತಮ್ಮ ಹಲವಾರು ಕಟ್ಟಾ ಬೆಂಬಲಿಗರನ್ನು ಕಳೆದುಕೊಂಡಿರುವುದರಿಂದಲೇ ಚುನಾವಣೆಯಲ್ಲಿ ಸೋಲಾಯಿತು ಎನ್ನುವ ಮಾತುಗಳು ಮರೆಯುವ ಮುನ್ನ ಮತ್ತೊಂದು ಅಂತಹುದೆ ಘಟನೆ ಜರುಗಿದೆ ಇದರ ಹಿಂದೆ ರಾಜಕೀಯದ ಬಲವಾದ ಒತ್ತಡವೇ ಅಥವ ಕಮಿಷನ್ ದಂಧೆಯ ಪರಿಣಾಮವೋ ಎನ್ನುವ ಮಾತುಗಳು ಕೇಳಿಬರುತ್ತಿವೆ