ಎ10ರವರೆಗೆ ನಾಲೆಗೆ ನೀರು ಬಿಡಲು ಎಂ ಎಲ್ ಸಿ ಬಯ್ಯಾಪುರ ಮನವಿ

Laxman Bariker
ಎ10ರವರೆಗೆ ನಾಲೆಗೆ ನೀರು ಬಿಡಲು ಎಂ ಎಲ್ ಸಿ ಬಯ್ಯಾಪುರ ಮನವಿ
WhatsApp Group Join Now
Telegram Group Join Now

ಎ10ರವರೆಗೆ ನಾಲೆಗೆ ನೀರು ಬಿಡಲು ಎಂ ಎಲ್ ಸಿ ಬಯ್ಯಾಪುರ ಮನವಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನಲಿ ನಾರಾಯಂಪುರ ಬಲದಂಡೆ ಹಾಗೂ ರಾಂಪೂರ ನೀರಾವರಿ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗೆ ಎಪ್ರೀಲ್ ೧೦ರವರೆಗೆ ನೀರು ಬಿಡುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರವರಿಗೆ ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಮನವಿ ಮಾಡಿದರು


ಅವರು ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರರವರನ್ನು ಭೇಟಿಯಾಗಿ ಲಿಂಗಸಗೂರು ತಾಲೂಕಿನ ಅಚ್ಚುಕಟ್ಟು ಪ್ರದೇಶದ ರೈತರು ಬೇಸಿಗೆ ಬೆಳೆಯನ್ನು ಹಾಕಿದ್ದು ಬೆಳೆ ಬರಬೇಕಾದರೆ ಕನಿಷ್ಟ ಏ೧೦ರವರೆಗೆ ನಾಲೆಗೆ ನೀರು ಬಿಡಬೇಕೆಂದು ವಿಧಾನಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ ಭೇಟಿಯಾಗಿ ಸಮಸ್ಯೆಯನ್ನು ವಿವರಿಸಿ ಮನವಿ ಮೂಲಕ ಒತ್ತಾಯಿಸಿದ್ದು ಸಮಸ್ಯೆಯನ್ನು ಆಲಿಸಿದ ಉಪಮುಖ್ಯಮಂತ್ರಿ ಡಿಕೆಶಿಯವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆAದು ಹೇಳಲಾಗುತ್ತಿದೆ
ನಂತರ ಲಿಂಗಸಗೂರ ಪಟ್ಟಣದ ನಗರಯೋಜನಾ ಪ್ರಾಧಿಕಾರಕ್ಕೆ ನೂತನವಾಗಿ ಧ್ಯಕ್ಷರಾಗಿ ಆಯ್ಕೆಯಾಗಿರುವ ಭೂಪನಗೌಡ ಪಾಟೀಲ್ ಕರಡಕಲ್ ರವರು ಹಾಗೂ ರಾಯಚೂರು ಕೊಪ್ಪಳ ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ ನೇತೃತ್ವದಲ್ಲಿ ಡಿಕೆಶಿಯವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಬಸವರಾಜಗೌಡ ಗಣೇಕಲ್, ಜಿ,ಪಂ ಮಾಜಿ ಅಧ್ಯಕ್ಷರಾದ ಗುಂಡಪ್ಪನಾಯಕ, ಡಿ ಜಿ ಗುರಿಕಾರ, ಸೋಮಶೇಖರ ಐದನಾಳ,ಮಲ್ಲಯ್ಯ ನರಕಲದಿನ್ನಿ ಚನ್ನಾರಡ್ಡಿ ಬಿರಾದಾರ ನಾಗರಡ್ಡೆಪ್ಪ ಈಚನಾಳತಾಂಡ,ಸೇರಿದAತೆ ಇದ್ದರು

WhatsApp Group Join Now
Telegram Group Join Now
Share This Article