ಶಾಲಾಕೊಠಡಿಗಳಿಗೆ ಭೂಮಿಪೂಜೆ: ಗ್ರಾಮೀಣ ಭಾಗದ ಅಭಿವೃದ್ದಿಗೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ-ಶಾಸಕ ವಜ್ಜಲ್

Laxman Bariker
ಶಾಲಾಕೊಠಡಿಗಳಿಗೆ ಭೂಮಿಪೂಜೆ: ಗ್ರಾಮೀಣ ಭಾಗದ ಅಭಿವೃದ್ದಿಗೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ-ಶಾಸಕ ವಜ್ಜಲ್
WhatsApp Group Join Now
Telegram Group Join Now

ಶಾಲಾಕೊಠಡಿಗಳಿಗೆ ಭೂಮಿಪೂಜೆ:
ಗ್ರಾಮೀಣ ಭಾಗದ ಅಭಿವೃದ್ದಿಗೆ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ-ಶಾಸಕ ವಜ್ಜಲ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಕ್ಷೇತ್ರದ ಗ್ರಾಮೀಣ ಭಾಗದ ಅಭಿವೃದ್ದಿ ಹಾಗೂ ಶಿಕ್ಷಣದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು


ಅವರು ತಾಲೂಕಿನ ಈಚನಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ಹೆಚ್ಚವರಿ ಕೊಠಡಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಾ ಕ್ಷೇತ್ರದ ಗ್ರಾಮೀಣ ಭಾಗದ ಅಭಿವೃದ್ದಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು ಸುಮಾರು ೮೦ರಿಂದ ೯೦ ಗ್ರಾಮಗಳ ಅಭಿವೃದ್ದಿಗಾಗಿ ತಲಾ ೫೦ ಲಕ್ಷದ ವರೆಗೂ ಅನುದಾನವನ್ನು ನೀಡಲಾಗಿದೆ ಈಗಿನ ಸರಕಾರದಲ್ಲಿ ಹಣದ ಕೊರತೆ ಇದೆ ಆದರೆ ಕೆಕೆಆರ್ ಡಿ ಬಿ ಯ ಅನುದಾನದಲ್ಲಿ ಸಾಕಷ್ಟು ಅನುದಾನವನ್ನು ತರಲಾಗಿದ್ದು ಈಗಾಗಲೆ ಗ್ರಾಮೀಣಭಾಗದ ಅಭಿವೃದ್ದಿಗೆ ಹಣ ನೀಡಲಾಗಿದೆ ಅದರಂತೆ ತಾಂಡಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು ಕುಡಿಯುವ ನೀರು ವಿದ್ಯುತ್ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು
ಈಚನಾಳ ತಾಂಡದಲ್ಲಿ೨೦೨೩-೨೪ನೇ ಸಾಲಿನ ಕೆಕೆ ಆರ್ ಡಿ ಬಿ ಮೈಕ್ರೋ ಯೋಜನೆಯಲ್ಲಿ ಅಂದಾಜು ಮೊತ್ತ ೫೬ ಲಕ್ಷದಲ್ಲಿ ನಾಲ್ಕು ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ ಗುತ್ತಿಗೆದಾರರು ನಿಗದಿಪಡಿಸಿದ ಅವಧಿಯಲ್ಲಿ ಗುಣಮಟ್ಟದ ಕೆಲಸ ಮಾಡಬೇಕು ಎಂದರು ಅಲ್ಲದೆ ಕ್ಷೇತ್ರದಲ್ಲಿರುವ ಶಾಲೆಗಳಿಗೆ ಕಟ್ಟಡ, ಪೀಠೋಪಕರಣ, ಶೌಚಾಲಯ ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುವುದು ಇದರಿಂದಾಗಿ ನಮ್ಮ ಕ್ಷೇತ್ರದ ಶೈಕ್ಷಣಿಕಮಟ್ಟ ಅಭಿವೃದಿಯಾಗಲಿದೆ ಈಗಾಗಲೆ ನಮ್ಮ ಕ್ಷೇತ್ರದ ವಿದ್ಯಾರ್ಥಿಗಳು ವಿವಿಧ ಪರೀಕ್ಷೆಗಳಲ್ಲಿ ಉತ್ತಮಸಾಧನೆಯನ್ನು ಮಾಡಿದ್ದಾರೆ ಅಂತಹ ಮಕ್ಕಳಿಗೆ ಪ್ರೋತ್ಸಾಹಿಸಲಾಗುವುದು ಶಿಕ್ಷಣ, ಆರೋಗ್ಯ, ಕುಡಿಯುವ ನೀರು ರಸ್ತೆ ನಿರ್ಮಾಣ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳು ನಾಗರೀಕರಿಗೆ ದೊರೆಯುವಂತೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು
ಈ ಸಂದರ್ಭದಲ್ಲಿ ಬಸನಗೌಡ ಮೇಟಿ, ಮಂಡಲ ಅಧ್ಯಕ್ಷ ಅಯ್ಯಪ್ಪ ವಕೀಲ,ನಾಗಭೂಷಣ,ನಾರಾಯಣಪ್ಪ, ನಾಗರಡ್ಡಿ, ವೆಂಕಟೇಶ ರಾಠೋಡ್ ವೆಂಕನಗೌಡ ಐದನಾಳ,ಈಚನಾಳ ಗ್ರಾ,ಪಂ ಅಧ್ಯಕ್ಷೆ ಗಂಗಮ್ಮ ಗಂ ಉಮೇಶ, ಲೋಕೋಪಯೋಗಿ ಇಲಾಖೆಯ ಎಇಇ ಪ್ರಕಾಶ ಜ್ಯೋತಿ ಹಾಗೂ ಜೆಇಗಳಾದ ಲಕ್ಷ್ಮೀಕಾಂತ ಗುಂಟಿ ಯಾಸ್ಮೀನ್ ಕಲ್ಪನಾ ಮುಖ್ಯಗುರುಗಳು ಆದಪ್ಪ ಈಚನಾಳ ಗ್ರಾಮಸ್ಥರು ಸೇರಿದಂತೆ ಇದ್ದರು ದೇವಪ್ಪ ರಾಠೋಡ ಸ್ವಾಗತಿಸಿ ನಿರೂಪಿಸಿದರು ಶರಣಬಸವ ಗುಡದಿನ್ನಿ ಶಿಕ್ಷಕರು ವಂದಿಸಿದರು

WhatsApp Group Join Now
Telegram Group Join Now
Share This Article