ಅಂದಾಜು ಸಮಿತಿಯ ಸದಸ್ಯ ಶಾಸಕ ಮಾನಪ್ಪ ವಜ್ಜಲ್ ಕಾಮಗಾರಿ ಪರಿಶೀಲನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳುರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳು ನಡೆಯುತಿದ್ದು ಅಂದಾಜು ಸಮಿತಿಯ ಸದಸ್ಯರು ಹಾಗೂ ಲಿಂಗಸಗೂರು ಕ್ಷೇತ್ರದ ಶಾಸಕರಾದ ಮಾನಪ್ಪ ವಜ್ಜಲರು ವಿವಿಧ ಕಾಮಗಾರಿ ಪರಿಶೀಲನೆಯನ್ನು ನಡೆಸಿದರು
ಬಿಬಿಎಂಪಿ ವಯಾಪ್ತಿಯಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ,ಹೊಸದಾಗಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೇ ಕಾಮಗಾರಿಗಳನ್ನು ಪರಿಶೀಲನೆಯನ್ನು ಮಾಡಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು
ಈ ಸಂದರ್ಭದಲ್ಲಿ ಅಂದಾಜು ಸಮಿತಿಯ ಅಧ್ಯಕ್ಷರಾದ ಹಂಪನಗೌಡ ಬಾದರ್ಲಿ, ಸಮಿತಿಯ ಸದಸ್ಯರಾದ ಶಿವರಾಜ ಪಾಟೀಲ್, ಜಿ,ಟಿ ಪಾಟೀಲ್, ಚನ್ನಾರೆಡ್ಡಿ ಪಾಟೀಲ್ ತನ್ನೂರು ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು