ಲಿಂಗಸುಗೂರು ಕೃಷಿ ಉಪನಿರ್ದೇಶಕರ ಕಚೇರಿ ಸ್ಥಳಾಂತರ ರದ್ದುಪಡಿಸಲು: ಬೆಳಗಾವಿ ಅಧಿವೇಶನದಲ್ಲಿ ಶಾಸಕ ಮಾನಪ್ಪ ವಜ್ಜಲ್ ಒತ್ತಾಯ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು: ತಾಲೂಕಿನ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದ ಕೃಷಿ ಉಪನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಿಸುವ ಸರ್ಕಾರದ ಆದೇಶದ ವಿರುದ್ಧ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಅವರು ಬೆಳಗಾವಿ ಶಾಸಕಾಂಗ ಅಧಿವೇಶನದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಆದೇಶ ರದ್ದು ಪಡಿಸುವಂತೆ ಒತ್ತಾಯಿಸಿದರು
ವಿಷಯವನ್ನು ಶೂನ್ಯಾವಧಿ ಪ್ರಶ್ನೆ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ವಜ್ಜಲ್ ಅವರು, “ಲಿಂಗಸಗೂರು ತಾಲೂಕು ವ್ಯಾಪಕ ಕೃಷಿ ಆಧಾರಿತ ಪ್ರದೇಶ. ಇಲ್ಲಿ ಬೆಳೆಗಾರರು, ರೈತ ಸಂಗ್ರಹ ಕೇಂದ್ರಗಳು ಮತ್ತು ಯೋಜನಾ ಕಛೇರಿಗಳು ಇರುವ ಸಂದರ್ಭದಲ್ಲಿ, ಕೃಷಿ ಉಪನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರಿಸುವುದು ಸಂಪೂರ್ಣ ಅಸಮಂಜಸ. ಇದು ರೈತರ ಹಿತಕ್ಕೆ ವಿರುದ್ಧ” ಎಂದು ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದರು.
ಈಗಾಗಲೆ ಜಿಲ್ಲಾಸ್ಪತ್ರೆಯನ್ನು ಸಿಂಧನೂರಿವೆ ಸ್ಥಳಾಂತರಿಸಲಾಗಿದೆ ಜೆಸ್ಕಾಂ ಇಲಾಖೆಗೂ ಕೈಹಾಕಿದ್ದರು ಇದೀಗ ಕೃಷಿ ಇಲಾಖೆ ಸ್ಥಳಾಂತರ ಮಾಡಲಾಗುತ್ತದೆ ಸರಕಾರಕ್ಕೆ ಲಿಂಗಸಗೂರು ಎಂದರೆ ತಾತ್ಸಾರವೇ ಕೂಡಲೆ ಕೃಷಿ ಡಿಡಿ ಕಛೇರಿ ಸ್ಥಳಾಂತರ ರದ್ದುಪಡಿಸಬೇಕು ವಿವಿಧ ಸಂಘಟನೆ ಗಳು ಹೋರಾಟ ನಡೆಸಿವೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಸಮಸ್ಯೆ ಸರಿಪಡಿಸಿ ಎಂದು ಒತ್ತಾಯಿಸಿದರು


