ಲಿಂಗಸಗೂರು:ಮುಕ್ತವಿವಿ ಪರೀಕ್ಷೆಗಳ ಅಕ್ರಮ,ಸದನದಲ್ಲಿ ಬಯ್ಯಾಪುರ ಚರ್ಚೆ, ಕ್ರಮಕ್ಕೆ ಸಚಿವರ ಭರವಸೆ
ಕಲ್ಯಾಣ ಕರ್ನಾಟಕ ಪತ್ರಿಕೆಯಲ್ಲಿ ಬಂದ ಸುದ್ದಿ ಸದನದಲ್ಲಿ ಚರ್ಚೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಇತ್ತೇಚೆಗೆ ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಯವರು ಮುಕ್ತವಿವಿಯ ಬಿಎಡ್ ಪರೀಕ್ಷೆಗಳನ್ನು ಸಾಮೂಹಿಕವಾಗಿ ನಡೆಸಿದ್ದು ಅಕ್ರಮಗಳ ಬಗೆಗೆ ಎಂ,ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಸದನದಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಪ್ರಶ್ನೆ ಮಾಡಿದ್ದು ವಿವಿಯ ವಿಸಿಗೆ ಪರೀಕ್ಷೆ ಅಕ್ರಮದ ಬಗೆಗೆ ಕ್ರಮಕ್ಕೆ ಸೂಚಿಸಲಾಗುವುದೆಂದು ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ
ಪಟ್ಟಣದಲ್ಲಿರುವ ರಾಷ್ಟಿçÃಯ ಗ್ರಾಮೀಣಾಭಿವೃದ್ದಿ ಹಾಗೂ ಶಿಕ್ಷಣ ಟ್ರಸ್ಟ ನರಕಲದಿನ್ನಿ ಎನ್ನುವ ಖಾಸಗಿ ಟ್ರಸ್ಟ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ವತಿಯಿಂದ ನಡೆಸಲಾಗುವ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಕೇಂದ್ರವನ್ನು ಪಡೆದುಕೊಂಡು ಬಂದು ಲಿಂಗಸಗೂರಿನ ಸಣ್ಣ ವಾಣಿಜ್ಯ ಮಳಿಗೆಯಲ್ಲಿ ಸಾಮೂಹಿಕವಾಗಿ ಪರೀಕ್ಷಾರ್ಥಿಗಳನ್ನು ಒಂದೆಡೆ ಕೂಡಿಸಿ ಅವರಿಂದ ಪರೀಕ್ಷೆಗಳನ್ನು ಬರೆಸಲಾಗುತ್ತದೆ ಸಾಮೂಹಿಕವಾಗಿ ಗುಂಪುಗೂಡಿ ಬರೆಯವುದು ನಕಲುಮಾಡುವುದು ನಡೆಯುತಿದ್ದು ಸ್ನಾತಕೋತ್ತರ ಪರೀಕ್ಷೆಗಳು ಇಲ್ಲಿ ಪ್ರಾಥಮಿಕ ತರಗತಿಯ ಪರೀಕ್ಷೆಗಳಂತೆ ಉತ್ತಮವಾಗಿ ನಡೆಯುವುದಿಲ್ಲ, ಪರೀಕ್ಷಾರ್ಥಿಗಳಿಗೆ ಗುಂಪಾಗಿ ಬರೆಯಲು ಅವಕಾಶ ಒಂದು ಬಿಟ್ಟರೆ ಇಲ್ಲಿ ಒಂದಿಷ್ಟು ಕೋಣೆಗಳಲ್ಲಿಯೆ ನಾಲ್ಕೆöÊದು ನೂರು ವಿದ್ಯಾರ್ಥಿಗಳನ್ನು ಸೇರಿಸಿ ಪರೀಕ್ಷೆ ಬರೆಯುತ್ತಿರುವದು ಯಾವುದೆ ಬೆಳಕಿನ ಸೌಕರ್ಯವಿಲ್ಲ,ಗಾಳಿ,ನೀರು ಶೌಚಾಲಯ ಯಾವುದೆ ಮೂಲಭೂತ ಸೌಕರ್ಯಗಳು ಇಲ್ಲದಿದ್ದರು ಇಲ್ಲಿ ಪರೀಕ್ಷಾಕೇಂದ್ರಗಳನ್ನು ನೀಡಿದ್ದು ಇದು ಪರೀಕ್ಷೆಯೆ ಎಂದು ಹುಬ್ಬೇರಿಸುವಂತೆ ಮಾಡಿದ್ದನ್ನು ಕಲ್ಯಾಣ ಕರ್ನಾಟಕ ಪತ್ರಿಕೆ ಗುರುತಿಸಿ ಅದನ್ನು ವರದಿ ಮಾಡಿತ್ತು
ಸದರಿ ವರದಿಯ ಫಲಶೃತಿ ಎನ್ನುವಂತೆ ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಸದನದಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಪ್ರಶ್ನೆ ಮಾಡಿ ಚರ್ಚಿಸಿದ್ದು ಲಿಂಗಸಗೂರಿನ ಖಾಸಗಿ ಶಿಕ್ಷಣ ಸಂಸ್ಥೆಗೆ ಪರೀಕ್ಷೆ ನಡೆಸಲು ಅವಕಾಶ ನೀಡಿದ್ದೀರಿ ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎಲ್ಲ ಪರೀಕ್ಷೆಗಳು ಅಕ್ರಮವಾಗಿ ನಡೆಯುತ್ತಿವೆ ಇದರ ಬಗೆಗೆ ಯಾವುದೆ ಕ್ರಮವಿಲ್ಲ ಅದರ ಮೇಲೆ ಸೂಕ್ತಕ್ರಮ ಜರುಗಿಸುವುದು ಯಾವಾಗ ಎಂದು ಪ್ರಶ್ನೆ ಮಾಡಿದ್ದು ಅದಕ್ಕೆ ಉನ್ನತ ಶಿಕ್ಷಣ ಸಚಿವರಾದ ಎಂ ಸಿ ಸುಧಾಕರ ಉತ್ತರ ನೀಡಿ ಸದರಿ ಪರೀಕ್ಷೆಯ ಅಕ್ರಮದ ಬಗೆಗೆ ವಿಸಿಯವರಿಗೆ ಪತ್ರ ಬರೆದು ಕ್ರಮವಹಿಸಲಾಗುವುದು ಎಂದು ಉತ್ತರ ನೀಡಲಾಗಿದ್ದು ಇತ್ತೀಚೆಗೆ ನಡೆದ ಪರೀಕ್ಷೆಗಳು ಅಕ್ರಮವೆಂದು ಘೋಷಿಸಿ ಮರುಪರೀಕ್ಷೆ ನಡೆಸಬಹುದೆ ಕಾದುನೋಡೋಣ?