ಸಚಿವ ಶರಣಪ್ರಕಾಶ ಪಾಟೀಲ್,ಕಾರ್ಯಕರ್ತನ ನಡುವೆ ಮಾತಿನ ಚಕಮಕಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ದಿಢಿರನೆ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣು ಪ್ರಕಾಶ ಪಾಟೀಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಗದೆನಗೌಡ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜರುಗಿದೆ
ಕಾರ್ಯಕ್ರಮದ ನಿಮಿತ್ಯವಾಗಿ ಪಟ್ಟಣದ ಮೂಲಕ ತೆರಳುವಾಗ ಆಕಸ್ಮಿಕವಾಗಿ ಪ್ರವಾಸಿ ಮಂದಿರಕ್ಕೆ ಆಗಮಿಸಿದಾಗ ಕಾಂಗ್ರೆಸ್ ಕಾರ್ಯಕರ್ತ ಗದ್ದೆನಗೌಡ ಆಗಮಿಸಿ ನೀವು ಪಟ್ಟಣಕ್ಕೆ ಆಗಮಿಸುವಾಗ ನಮ್ಮ ಪಕ್ಷದ ಅಧ್ಯಕ್ಷರಿಗೆ ಅಥವ ಮಾಜಿ ಶಾಸಕರಿಗೆ ಮಾಹಿತಿ ನೀಡದೆ ಬಂದಿದ್ದೀರಿ ಎಂದು ಕೇಳಿದಾಗ ಅದನ್ನು ಕೇಳಲು ನೀನು ಯಾರು ಹೂ ಹಿಜ್ ದಿಸ್ ನಾನೆಸ್ನೆ ಫೆಲೋ ಎಂದು ಮಾತಿನ ಚಕಮಕಿ ನಡೆದಿದೆ ಸಚಿವರು ಹಾಗೆಹೇಳುತ್ತಲೆಕಾರ್ಯಕರ್ತ ಗದ್ದೆನಗೌಡ ಮಾತನಾಡಿ ನಾನು ಸುಮಾರು ೨೦ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದೇನೆ ಎಂದಿದ್ದಾನೆ
ನಾನು ಪಟ್ಟಣಕ್ಕೆ ಆಗಮಿಸಿರುವುದು ಆಕಸ್ಮಿಕವಾಗಿ ಈ ಮಾರ್ಗ ಮೂಲಕ ಬೇರೊಂದು ಕಾರ್ಯಕ್ರಮಕ್ಕೆ ತೆರಳುವುದಿತ್ತು ಅಂತವುಗಳಿಗೆಲ್ಲ ಹೇಳಲಾಗುತ್ತದೆಯೆ ಎನ್ನುವ ದಾಟಿಯಲ್ಲಿ ಮಾತನಾಡುತ್ತಾ ಸಚಿವರು ಹೊರನಡೆದ ಘಟನೆ ಜರುಗಿದೆ