ಮಿಂಚೇರಿ: ನಿರುಪಯುಕ್ತ ನೂತನ ಶಾಲಾಕೊಠಡಿಗಳು, ಕ್ರಮಯಾವಾಗ?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಹಲವಾರು ಸರಕಾರಿ ಶಾಲೆಗಳಿಗೆ ಕೊಠಡಿಗಳಿಲ್ಲವೆಂದು ವಿದ್ಯಾರ್ಥಿಗಳು ಆಗಾಗ್ಗೆ ದೂರುವುದುಂಟು ಆದರೆ ಇಲ್ಲಿ ನೂತನ ಶಾಲಾಕೊಠಡಿಗಳಿದ್ದರು ಅವುಗಳನ್ನು ಶಾಲಾ ಸುಪರ್ದಿಗೆ ತೆಗೆದುಕೊಳ್ಳದೆ ನಿರುಪಯುಕ್ತವಾಗುತ್ತಿರುವುದು ದುರಂತವಾಗಿದೆ
ಹೌದು ತಾಲೂಕಿನ ಮಿಂಚೇರಿ ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದ್ದು ಹಲವಾರು ಮೂಲಭೂತ ಸೌಕರ್ಯಗಳ ನಡುವೆ ನಲುಗುತ್ತಿದೆ ೨೦೧೭-೧೮ನೇ ಸಾಲಿನ ಶಿಕ್ಷಣ ಇಲಾಖೆ ಅನುದಾನದಲ್ಲಿ ಶಾಲಾಕೊಠಡಿಗಳನ್ನು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ನಿರ್ಮಿಸಲಾಗಿದ್ದು ಸುಮಾರು ಏಳೆಂಟು ವರ್ಷ ಗತಿಸಿದರು ಇದುವರೆಗೂ ಶಾಲಾ ವ್ಯಾಪ್ತಿಗೆ ತೆಗೆದುಕೊಳ್ಳದೆ ಇರುವುದರಿಂದ ಸದರಿ ಕೊಠಡಿಯ ಮುಂದೆ ಗಿಡಗಂಟಿಗಳು ಮುಳ್ಳುಕಂಟಿಗಳು ಬೆಳೆದು ಶಾಲೆ ಇರುವುದು ಕಾಡಿನಲ್ಲಿಯೋ ನಾಡಿನಲ್ಲಿಯೋ ಎನ್ನುವಂತಾಗಿರುವುದು ದುರಂತವಾಗಿದೆ
ಬಿಸಿಯೂಟದಕೊಣೆಯು ಶಿಥಿಲವಾಗಿದೆ:ಇಲ್ಲಿರುವ ಬಿಸಿಯೂಟದ ಕೋಣೆಯು ಶಿಥಿಲವಾಗಿದ್ದು ಬೇರೊಂದು ಕೋಣೆಯಲ್ಲಿ ನಿಸಿಐಊಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ ಶಾಲಾಪಕ್ಕದಲ್ಲಿರುವ ನೀರಿನ ಸಂಗ್ರಹತೊಟ್ಟಿಗೆ ನೀರುಬರದೆ ನಿರುಪಯುಕ್ತವಾಗಿದೆ ಕೆಲ ಶಾಲಾಕೊಣೆಗಳ ಕಿಟಕಿಗಳು ಕಿತ್ತಿಹೋಗಿವೆ
ಎಚ್ ಎಂ ಗೆ ಇದುವರೆಗೂ ಚಾರ್ಜ ನೀಡಿಲ್ಲವಂತೆ: ಮತ್ತೊಂದು ಸಂಗತಿ ಎಂದರೆ ಈ ಶಾಲೆಯ ಮುಖ್ಯ ಗುರುಗಳಿಗೆ ಇದುವರೆಗೂ ಚಾರ್ಜ ನಿಡಿಲ್ಲವಂತೆ ಕಳೆದ ಮೇ ತಿಂಗಳಿನಲ್ಲಿ ಸದರಿ ಶಾಲೆಯ ಮುಖ್ಯಗುರುಗಳು ಮರಣಿಸುತ್ತಾರೆ ನಂತರ ಬಂದ ಮುಖ್ಯ ಗುರುಗಳಿಗೆ ಇದುವರೆಗೂ ನನಗೆ ಶಾಲೆಯ ಚಾರ್ಜ ನೀಡಿಲ್ಲವೆಂದು ಹೇಳುತ್ತಾರೆ ಅಲ್ಲದೆ ಇಲಾಖೆಯಿಂದ ಅಧಿಕ ಕೆಲಸಗಳ ಒತ್ತಡ ಇರುವುದರಿಂದ ಸರಿಯಾಗಿ ಶಾಲೆಗೆ ಹೋಗುವುದು ಹಾಜರಿ ಇರುವುದು ಅಸಾಧ್ಯವಾಗುತ್ತಿದೆ ಎನ್ನುವ ಮಾತುಗಳನ್ನು ಈಗಿನ ಮುಖ್ಯಗುರುಗಳು ಹೇಳುತ್ತಾರೆ ಯಾಕೆಂದರೆ ಇವರು ಶಾಲೆಗೆ ಸರಿಯಾಗಿ ಬರುವುದಿಲ್ಲ ಎನ್ನುವ ಆರೋಪಗಳಿಗೆ ಅವರು ಕೊಡುವ ಉತ್ತರವಾಗಿದೆ ಹಾಗೆಯೆ ಇವರು ಯಾವುದೆ ಕಾರಣಕ್ಕೂ ತಮ್ಮ ಮೊಬೈಲ್ ತೆಗೆಯುದಿಲ್ಲವಂತೆ ಕಾಲ್ ಮಾಡಿದವರ ಹೆಸರು ತಮ್ಮಲ್ಲಿ ಸೇವ್ ಇದ್ದರೆ ಮಾತ್ರ ತೆಗೆದು ಎನ್ನುತ್ತಾರೆ ಅದಕ್ಕಾಗಿ ಸಹಶಿಕ್ಷಕರ ಫೋನ್ ಮೂಲಕ ಮಾತನಾಡಿ ಮಾಹಿತಿ ಪಡೆಯಲಾಯಿತು
ಮೇಲಿಂದಮೇಲೆ ಕಳುವಾಗುತ್ತಿರುವ ಶಾಲೆ:ಸದರಿ ಶಾಲೆಯಲ್ಲಿ ಮೇಲಿಂದ ಮೇಲೆ ಕಳ್ಳತನ ನಡೆಯುತ್ತಿದ್ದು ಅದನ್ನು ತಪ್ಪಿಸುವುದೆ ಒಂದು ಸಾಹಸವಾಗಿದೆ ಆಗಾಗ್ಗೆ ಸ್ಟೇಷನ್ ಗೆ ಮಾಹಿತಿಯನ್ನು ನೀಡಲಾಗಿದೆ ಎನ್ನಲಾಗುತ್ತಿದೆ ಇದುವರೆಗೂ ಶಾಲೆಯ ಮುಂದೆ ಒಂದು ಧ್ವಜದ ಕಂಬವನ್ನು ಕಟ್ಟಲಾಗಿಲ್ಲವೆಂದು ತಿಳಿದುಬಂದಿದ್ದು ಸದರಿ ಶಾಲೆಯು ಹಲವಾರು ಕುಂದುಕೊರತೆಗಳ ನಡುವೆ ನಡೆಯುತ್ತಿದ್ದು ಇದರ ಮೇಲಾಧಿಕಾರಿಗಳು ಇತ್ತ ಗಮನಹರಿಸುವುದಾದರು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ
ಹೇಳಿಕೆ: ಸದರಿ ಶಾಲೆಯಲ್ಲಿ ನೂತನ ಕೊಠಡಿಗಳು ಇರುವುದು ನನ್ನ ಗಮನಕ್ಕೆ ಇರುವುದಿಲ್ಲ ಅದರ ಬಗೆಗೆ ಮಾಹಿತಿ ಪಡೆದುಕೊಂಡು ಕ್ರಮತೆಗೆದುಕೊಳ್ಳಲಾಗುವುದು ಅಲ್ಲದೆ ಮುಖ್ಯಗುರುಗಳು ಶಾಲೆಗೆ ಸರಿಯಾಗಿ ಬರುವುದಿಲ್ಲ ಎನ್ನುವ ಆರೋಪಗಳಿಗೂ ಗಮನಹರಿಸಲಾಗುವುದು- ಬಿಇಓ ಹುಂಬಣ್ಣ ರಾಠೋಡ
ಹೇಳಿಕೆ-ನನಗೆ ಇದುವರೆಗೂ ಮುಖ್ಯಗುರುಗಳ ಚಾರ್ಜಕೊಟ್ಟಿರುವುದಿಲ್ಲ ಶಾಲಾಕೊಠಡಿಗಳ ಬಗೆಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ ಸರಕಾರದ ಕೆಲಸದ ಒತ್ತಡದಲ್ಲಿ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗುವುದು ತೊಂದರೆಯಾಗಿದೆ-ಶಿವಯ್ಯ ಹಿರೇಮಠ ಮುಖ್ಯಗುರುಗಳು ಮಿಂಚೇರಿ