ಎರಡು ದಿನಕೊಮ್ಮೆ ಕುಡಿಯುವ ನೀರು ಬಿಡಲು ಆಗ್ರಹ
ಪುರಸಭೆ ಬೀದಿ ದೀಪಗಳ ಖರೀದಿ ಬಿಲ್ ತಡೆಹಿಡಿಯಲು ಸದಸ್ಯರ ಒತ್ತಾಯ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಪುರಸಭೆ ಅಧ್ಯಕ್ಷ ಬಾಬು ರೆಡ್ಡಿ ಮೂನ್ನೂರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯರಾದ ದೊಡ್ಡಣ್ಣಗೌಡ ಹೊಸಮನಿ ಹಾಗೂ ಮಹ್ಮದ್ ರಫಿ ಬೀದಿ ದೀಪ ಖರೀದಿಯಲ್ಲಿ ಅವ್ಯವಹಾರ ಭ್ರಷ್ಟಾಚಾರ ನಡೆದಿದೆ ಎಂದು ಮುಖಾಧಿಕಾರಿಯನ್ನು ತರಾಟೆಗೆ ತಗೆದುಗೊಂಡು ಬೀದಿ ದೀಪ ಬಿಲ್ ಪಾವತಿಸದಂತೆ ಒತ್ತಾಯಿಸಿದಾಗ ಮುಖ್ಯಾಧಿಕಾರಿ ರಡ್ಡಿರಾಯನಗೌಡ ನಾವು ಬಿಲ್ ಗಳನ್ನು ಪಾವತಿಸಿಲ್ಲ ವೆಂದರು ಆಗ ಸದಸ್ಯರು ಕೋಟೇಷನದಲ್ಲಿ ಕಡಮೆ ದರ ತೋರಿಸಿದವರಿಗೆ ಬಿಲ್ ಪರಿಶೀಲಸಬೇಕು ಎಂದು ಹೇಳಿದರು.
ಪಟ್ಟಣದಲ್ಲಿ ಕಳೆದ ಹಲುವಾರ ದಿನದಿಂದ ಕುಡಿಯುವ ನೀರು ೫ ರಿಂದ ೬ ದಿನಕೊಮ್ಮೆ ಬಿಡುತ್ತಿದ್ದು ಇದರಿಂದ ನಾಗರಿಕರು ತೊಂದರೆ ಅನುಭವಿಸುತ್ತಿದ್ದು ನೀರಿನ ಕೂರತೆ ಇರುವುದಿಲ್ಲ ಕನಿಷ್ಟ ಎರಡು ದಿನಕೊಮ್ಮೆ ನೀರು ಸರಬರಾಜು ಮಾಡಬೇಕು ಎಂದು ಮಾಜಿ ಅಧ್ಯಕ್ಷೆ ಸುನಿತಾ ಕೆಂಭಾವಿ ಒತ್ತಾಯಿಸಿ ಕಸ ವಿಲೇವಾರಿ ವಾಹನ ವಾರ್ಡಗಳಲ್ಲಿ ಸರಿಯಾಗಿ ಬರುತ್ತಿಲ್ಲ ಎಂದು ದೂರಿ ಚರಂಡಿಯ ತ್ಯಾಜ್ಯ ವಸ್ತುಗಳಿಂದ ಗಬ್ಬು ನಾರುತ್ತಿವೆ ಎಂದರು.
ಪುರಸಭೆ ಮಳೆಗೆಗಳಿಗೆ ಹಲವು ವರ್ಷಗಳಿಂದ ಟೆಂಡರ ಆಗದ ಕರಣ ಅದರಿಂದ ಬರುವಂತ ಅದಾಯ ಬಾರಿ ನಷ್ಟ ಉಂಟು ಮಾಡಿದ್ದು ಅದನ್ನು ಮರು ಟೆಂಡರ್ ಮಾಡಿ ಎಂದು ಸದ್ಯ¸ರಾದ ಪ್ರಮೋದ್ ಕುಲಕರ್ಣಿ ಹಾಗೂ ರುದ್ರಪ್ಪ ಬ್ಯಾಗಿ ಹೇಳಿದರು ಹಾಗೂ ಪ್ರತಿ ವಾರ್ಡಗಳಲ್ಲಿ ನಾಮಫಲಕ ಅಳವಡಿಸಬೇಕು ಮತ್ತು ಬಸವ ಸಾಗರ ವೃತದಲ್ಲಿ ಸಿ.ಸಿ ಕ್ಯಾಮರಗಳನ್ನು ಅಳಡಿಸಬೇಕು, ಆಕ್ಟೋಬರ ತಿಂಗಳು ಖರ್ಚು ವೆಚ್ಚ ಅಂಗಿಕರಿಸಲಾಯಿತು, ಪಟ್ಟಣದ ವಿವಿಧ ಭಾಗಗಳಲ್ಲಿ ಪುರಸಭೆ ನಿಧಿಯಿಂದ ಸಂಚಾರಿ ಮೂತ್ರಾಲಯ ನಿರ್ಮಿಸಬೇಕು, ರಾಯಚೂರನಲ್ಲಿ ನಡೆಯುವ ೧೧ನೇ ಅಖಿಲ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಪುರಸಭೆ ನಿಧಿಯಿಂದ ೨ ಲಕ್ಷ ರೂ ಅರ್ಥಿಕ ಸಹಾಯದ ಪ್ರಸ್ತಾವನೆಯನ್ನು ಸಭೆಯಲ್ಲಿ ಮಂಡಿಸಲಾಯಿತು, ಲಿಂಗಸುಗೂರ ಪುರಸಭೆಯನ್ನು ನಗರಸಭೆಗೆ ಮೇಲ್ದರ್ಜೆಗೆರಿಸಲು ಎಲ್ಲಾ ಸದಸ್ಯರು ಆಗ್ರಹಿಸಿದರು.
ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷೆ ಶರಣಮ್ಮ, ಸದಸ್ಯರಾದ ದೂಡ್ಡಣ್ನಗೌಡ, ಸೋಮನಗೌಡ, ಮುತ್ತಣ್ಣ ಮೇಟಿ, ಪ್ರಮೋದ ಕುಲಕರ್ಣಿ, ಶಿವರಾಯ ದೇಗಲುಮರಡಿ , ಮುದಕಪ್ಪ ನಾಯಕ, ರುದ್ರಪ್ಪ ಬ್ಯಾಗಿ, ಸುನಿತಾ ಕೆಂಭಾವಿ, ಗದೆಮ್ಮ, ರಾಜೇಶ್ವರಿ, ಯಮನಪ್ಪ ಹಾಗೂ ನಾಮ ನಿರ್ದೇಶನ ಸದಸ್ಯರುಗಳು, ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ , ಗಿರಿಜಾ, ಅಶೋಕ, ಮಂಜುನಾಥ, ರಾಜಗೋಪಾಲ, ಇಕ್ಬಾಲ್ ಹಾಗೂ ಇತರೆ ಸಿಬ್ಬಂದಿಗಳು ಭಾಗವಹಿಸಿದರು, ವ್ಯವಸ್ಥಾಪಕ ಹನುಮಂತರಾಯ ಸ್ವಾಗತಿಸಿದರು.