ಉತ್ತಮ ಸುದ್ದಿ ನೀಡುವ ಮೂಲಕ ಪತ್ರಿಕೆ ಬೆಳೆಯಲಿ-ಮಹಾದೇವ ಶ್ರೀಗಳು

Laxman Bariker
ಉತ್ತಮ ಸುದ್ದಿ ನೀಡುವ ಮೂಲಕ ಪತ್ರಿಕೆ ಬೆಳೆಯಲಿ-ಮಹಾದೇವ ಶ್ರೀಗಳು
WhatsApp Group Join Now
Telegram Group Join Now

ಕಲ್ಯಾಣ ಕರ್ನಾಟಕ ದೀಪಾವಳಿ ಸಂಚಿಕೆ ಬಿಡುಗಡೆ
ಉತ್ತಮ ಸುದ್ದಿ ನೀಡುವ ಮೂಲಕ ಪತ್ರಿಕೆ ಬೆಳೆಯಲಿ-ಮಹಾದೇವ ಶ್ರೀಗಳು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಕಲ್ಯಾಣ ಕರ್ನಾಟಕ ಪತ್ರಿಕೆಯು ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚಲ್ಲುತ್ತಾ ನಾಡಿನ ಬಗೆಗೆ ಕಳಕಳಿಯ ಮಿಡಿದು ಸೇವೆ ಮಾಡುತ್ತಾ ಉತ್ತಮ ಸುದ್ದಿ ನೀಡುವ ಮೂಲಕ ಪತ್ರಿಕೆ ರಾಜ್ಯಮಟ್ಟದಲ್ಲಿ ಬೆಳೆಯಲಿ ಎಂದು ಪುರಸಭೆ ವ್ಯಾಪ್ತಿಯ ಆಹೋಮಲ್ಲಿನಾಥ ಶಾಖಾಮಠದ ಮಹಾದೇವ ಶ್ರೀಗಳು ಹೇಳಿದರು
ಅವರು ಪಟ್ಟಣದ ಕಸಬಾಲಿಂಗಸಗೂರು ಹತ್ತಿರವಿರುವ ಆಹೋಮಲ್ಲಿನಾಥ ಶಾಖಾಮಠದಲ್ಲಿ ಲಕ್ಷö್ಮಣ ಬಾರಿಕೇರ್ ಸಂಪಾದಕತ್ವದ ಕಲ್ಯಾಣ ಕರ್ನಾಟಕ ಪತ್ರಿಕೆಯ ದೀಪಾವಳಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಪತ್ರಿಕೆಯು ಸಮಾಜದ ಅಂಕುಡೊAಕುಗಳನ್ನು ತಿದ್ದುತಾ ಉತ್ತಮಸೇವೆ ಸಲ್ಲಿಸಿ ಎತ್ತರಕೆ ಬೆಳೆಯಲಿ ಎಂದರು
ವಕೀಲ ನಾಗಪ್ಪ ಕಸಬಾಲಿಂಗಸಗೂರು ಮಾತನಾಡುತ್ತಾ ಪತ್ರಿಕೆ ನಡೆಸುವುದು ಕಷ್ಟದ ಕೆಲಸವಾಗಿದ್ದು ಅಂತಹದರಲ್ಲಿ ಕಲ್ಯಾಣ ಕರ್ನಾಟಕ ಪತ್ರಿಕೆಯನ್ನು ನಿರಂತರವಾಗಿ ಹೊರತರುತಿದ್ದು ದೀಪಾವಳಿ ಸಂಚಿಕೆಯು ಮೂಡಿ ಬರುತ್ತಿರುವುದು ಸಂತಸವಾಗಿದೆ ಎಂದರು
ನAತರ ಶಶಿನಾ ಚಿಕ್ಕಹೆಸರೂರು ಮಾತನಾಡುತ್ತಾ ಪತ್ರಕರ್ತರೆಂದರೆ ನಡೆ ನುಡಿಯೊಂದಿಗೆ ಉತ್ತಮವಾಗಿದ್ದು ವಿಷಯ ಪರಿಶೀಲಿಸಿ ಬರೆಯಬೇಕು ತನುಮನ ಧನಗಳನ್ನು ಅರ್ಪಿಸಿ ನಡೆಯುವಾತ ಉತ್ತಮ ಪತ್ರಕರ್ತ ಅಂತಹ ನೈಜತೆಯೊಂದಿಗೆ ಕಲ್ಯಾಣ ಕರ್ನಾಟಕ ಪತ್ರಿಕೆ ಸಾಗುತ್ತಿದ್ದು ನಾಡಿನಲಿ ಉತ್ತಮ ಸೇವೆ ಸಲ್ಲಿಸುತ್ತಾ ಮುನ್ನಡೆಯುತಿದೆ ಎಂದರು
ಈ ಸಂದರ್ಭದಲ್ಲಿ ಡಾ ಚಂದ್ರಶೇಖರ ಸರ್ಜಾಪುರ, ಸಂಪಾದಕ ಲಕ್ಷö್ಮಣ ಬಾರಿಕೇರ್ ಶಾಮಿದಲಿ ಕರಡಕಲ್, ಮಲ್ಲಿಕಾರ್ಜುನಗೌಡ ಪಾಟೀಲ್, ಉಪನ್ಯಾಸಕ ಕಣ್ಮೇಶ ಚಿತ್ತಾಪುರ, ಗುಡದಯ್ಯ ಉಪನ್ಯಾಸಕ ಖೈರವಾಡಗಿ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article