ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕಾರ್ಮಿಕರಿಗೆ ಮಾರಕವಾಗಿರುವ ನೂತನ ನಾಲ್ಕು ಕಾರ್ಮೀಕ ಸಂಹಿತೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು
ದೇಶದಲ್ಲಿ ಮೂರನೆ ಅವಧಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಸರಕಾರ ದುಡಿಯುವ ಜನರ ಹಕ್ಕುಗಳನ್ನು ಕಸಿದು ಕಾರ್ಪೋರೇಟ್ ಕಂಪನಿಗಳಿಗೆ ನೆರವಾಗುವ ರೀತಿಯಲ್ಲಿ ಕೇಂದ್ರ ಸರಕಾರ ನೀತಿಗಳನ್ನು ರೂಪಿಸುತ್ತಾ ಬರುತ್ತಿದೆ ಇದರಿಂದಾಗಿ ದೇಶದಲ್ಲಿ ಬಡತನ,ನಿರುದ್ಯೋಗ, ಹಸಿವು ಅಪೌಷ್ಠಿಕತೆ ಗುಣಮಟ್ಟವಿಲ್ಲದ ಕೆಲಸ ಹೀಗೆ ಹತ್ತಾರು ಸಂಕಷ್ಟಗಳನ್ನು ದೇಶದ ಜನರು ಎದುರಿಸಬೇಕಾಗಿದ್ದು ಈ ಪರಸ್ಥಿತಿಯನ್ನು ಸುಧಾರಿಸಬೇಕಾಗಿದ್ದ ಸರಕಾರ ಇದರ ವಿರುದ್ದವೇ ಕಾರ್ಮಿಕ ಕಾಯ್ದೆಗಳನ್ನು ಜಾರಿಮಾಡಲು ಹೊರಟಿದ್ದು ಇದರಿಂದ ಕಾರ್ಮಿಕರಿಗೆ ತೊಂದರೆಯಾಗಲಿದೆ
ಕೆಲಸದ ಪರಸ್ಥಿತಿ, ಕಾರ್ಮಿಕರು ದುಡಿಯುವ ಅವಧಿ, ಕನಿಷ್ಟ ವೇತನ,ಸಾಮಾಜಿಕ ಭದ್ರತೆ, ಸಂಘಟನೆಯ ಹಕ್ಕು, ಚೌಕಾಸಿಯ ಹಕ್ಕು, ಹೋರಾಟದ ಹಕ್ಕು ಮುಷ್ಕರದ ಹಕ್ಕುಗಳು ಸೇರಿದಂತೆ ಎಲ್ಲಾ ಮೂಲಭೂತ ಹಕ್ಕುಗಳಿಗೆ ಮಾರಕವಾಗುತ್ತಿದ್ದು ಕೇಂದ್ರ ಸರಕಾರ ಬಡಕಾರ್ಮಿಕರ ಮೇಲೆ ಹೇರುವ ಮೂಲಕ ಗುಲಾಮಗಿರಿ ನಿರ್ಮಾಣ ಮಾಡಲಾಗುತ್ತಿದೆ ಆದರೆ ಕಾರ್ಪೋರೇಟರ ಹಿತ ಕಾಯುತ್ತದೆ ಇಂತಹ ಮಾರಕ ನಾಲ್ಕು ಸಂಹತೆಗಳನ್ನು ಕೂಡಲೇ ರದ್ದುಮಾಡಬೇಕು ಮತ್ತು ಕಾರ್ಮಿಕರ ಹಿತರಕ್ಷಣೆಯಾಗಬೇಕು ಎಂದು ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಒಕ್ಕೂಟ ಪಟ್ಟಣದ ಗುರುಭವದಿಂದ ಪ್ತಿಭಟನೆ ಆರಂಭಿಸಿ ಹೊಸಬಸ್ ನಿಲ್ದಾಣದವರೆಗೂ ಬಂದು ಸಭೆ ನಡೆಸಿ ನೂತನ ಣೀತಿಗಳನ್ನು ಖಂಡಿಸಲಾಯಿತು ಕಾಯಂ ಕೆಲಸಕ್ಕೆ ತಕ್ಕ ವೇತನ ಸೇರಿ ಸುಮಾರು ೩೦ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಲಾಯಿತು
ಈ ಸಂದರ್ಭದಲ್ಲಿ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಅಧ್ಯಕ್ಷ ಕೆ ಮಹಾಂತೇಶ, ಸಿಐಟಿಯು ಮುಖಂಡರಾದ ರಮೇಶ ವೀರಾಪೂರ,ಹನೀಫ್, ನಿಂಗಪ್ಪ, ಅಲ್ಲಾಭಕ್ಷ, ಸರಸ್ವತಿ ಈಚನಾಳ, ಮಹೇಶ್ವರಿ ಹಟ್ಟಿ, ಜರಿನಾಬೇಗಂ, ಚಂದ್ರಶೇಖರ ನೆಲೋಗಿ, ವೆಂಕೋಬ ಮಿಯ್ಯಾಪೂರ,,ಗುಂಡಪ್ಪ,ಬಾಬು ಭೂಪುರ,ಶ್ರೀಧರ,ಶಿವು ಚಿಕ್ಕನಗನೂರು, ಎಐಟಿಯುಸಿ ಮುಖಂಡರಾದ ಸಂಗಯ್ಯಸ್ವಾಮಿ, ಬಸಮ್ಮ, ಶರಣಪ್ಪ ಉದ್ಬಾಳ, ಸೇರಿದಂತೆ ಬಿಸಿಯೂಟ,ಅಂಗನವಾಡಿ,ಪAಚಾಯ್ತಿ ನೌಕರರ,ಆಶಾ ನೌಕರರು,ಹಟ್ಟಿ ಚಿನ್ನದ ಗಣಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಇದ್ದರು