ಆರ್ ಡಿ.ಸಿ.ಸಿಬ್ಯಾಂಕ ಅವ್ಯವಹಾರ ಕಾನೂನು ಕ್ರಮಕ್ಕೆ ಮಾನಸಯ್ಯ ಒತ್ತಾಯ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ: ಆರ್ ಡಿ ಸಿ ಸಿ ಬ್ಯಾಂಕನ ಸಿಬ್ಬಂದಿಗಳ ಖಾತೆಗೆ ಅಪಾರ ಪ್ರಮಾಣದ ಹಣ ವರ್ಗಾವಣೆ ಮಾಡಿ ಎತ್ತಿಕೊಂಡು ಭ್ರಷ್ಟಾಚಾರ ಮಾಡಿದ ಆಡಳಿತ ಮಂಡಳಿ ಅಧ್ಯಕ್ಷರು , ನಿರ್ದೇಶಕರು ಹಾಗೂ ಸಂಬAಧಪಟ್ಟ ಸಿಬ್ಬಂದಿಯವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಟಿ.ಯು.ಸಿ.ಐ ಪ್ರ. ಕಾರ್ಯದರ್ಶಿ ಆರ್.ಮಾನಸಯ್ಯ ಹೇಳಿದರು.
ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೆ ಆರ್ ಡಿ ಸಿ ಸಿ ರಾಯಚೂರು ಪ್ರಧಾನ ಬ್ಯಾಂಕಿನ ಆಡಳಿತ ಮಂಡಳಿಯು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ಹಿಂಬಾಲಕ ಅಧಿಕಾರಿ ಮತ್ತು ಸಿಬ್ಬಂದಿಗಳ ಉಳಿತಾಯ ಖಾತೆಗಳಿಗೆ ಅಪಾರ ಪ್ರಮಾಣದ ಹಣವನ್ನು ವರ್ಗಾವಣೆ ಮಾಡಿದೆ. ಬ್ಯಾಂಕಿನ ನಿಯಮಗಳನ್ನು ೧೦೦% ಉಲ್ಲಂಘನೆ ಮಾಡಿ ಸಾಮಾನ್ಯ ಸಭೆ, ವಾರ್ಷಿಕ ಸಭೆ, ಭೋಜನ ಕೂಟ, ಹೋಟೆಲ್ ಹಾಗೂ ಟಿಕೆಟ್ ಬುಕಿಂಗ್, ಡೀಸೆಲ್ ಹಾಗೂ ವಾಹನ ರಿಪೇರಿ, ಸಾಫ್ಟ್ ವೇರ್ ಖರೀದಿ ಹೀಗೆ ಬ್ಯಾಂಕಿನ ಖರ್ಚಿನ ಹೆಸರಲ್ಲಿ ಸಿಬ್ಬಂದಿಗಳ ಖಾತೆಗೆ ಹಣ ವರ್ಗಾವಣೆಯಾಗಿದೆ. ಬ್ಯಾಂಕಿನ ನಿಯಮಾವಳಿ, ಕೆಟಿಪಿಪಿ ಕಾಯ್ದೆ-೧೯೯೯ ಹಾಗೂ ಇತರೆ ಅಧಿನಿಯಮಗಳನ್ನು ನೇರವಾಗಿ ಗಾಳಿಗೆ ತೂರಿ ಭ್ರಷ್ಟಾಚಾರವೆಸಗಲಾಗಿದೆ.
ಈ ಭ್ರಷ್ಟಾಚಾರದ ಮೊಟ್ಟಮೊದಲ ಹೊಣೆ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ್ ಪಾಟೀಲ್ ತಂದೆ ಅಮರಪ್ಪ ತೋರಣದಿನ್ನಿ ಹಾಗೂ ಎಲ್ಲಾ ನಿರ್ದೇಶಕರದ್ದಾಗಿದೆ. ಹಾಗೆಯೇ, ನಿವೃತ್ತ ಸಿಇಒ ಐಎಸ್ ಗಿರಡ್ಡಿ ಹಾಗೂ ಪ್ರಧಾನ ಕಾರ್ಯಾಲಯದ ಅಧಿಕಾರಿ ಹಾಗೂ ಸಿಬ್ಬಂದಿಗಳದ್ದಾಗಿದೆ. ಇದು ಕೇವಲ ರಾಯಚೂರು ಪ್ರಧಾನ ಕಛೇರಿಯಲ್ಲಿ ನಡೆದ ಕಳ್ಳ ವ್ಯವಹಾರವಾಗಿದೆ. ಈ ಕಳ್ಳ ವ್ಯವಹಾರದ ಖಾತೆದಾರರು, ಖಾತೆಗಳು ಮತ್ತು ಭ್ರಷ್ಟಾಚಾರವಾದ ಹಣದ ಮೊತ್ತ ಈ ಕೆಳಗಿನಂತಿದೆ
೧ ರವಿಕುಮಾರ್, ಕಚೇರಿ ಸಹಾಯಕ ಆರ್ ಕೆ ಡಿ ಸಿ ಸಿ ಪ್ರಧಾನ ಕಚೇರಿ ರಾಯಚೂರು. ೨) ವೀಣಾ ಪಾಟೀಲ್ ಕಚೇರಿ ಸಹಾಯಕಿ, ಕೆ ಆರ್ ಡಿ ಸಿ ಸಿ ಪ್ರಧಾನ ಕಛೇರಿ, ರಾಯಚೂರು ೩) ನರೇಶ್ ಕುಮಾರ ನಾಯಕ್ ಅಸ್ಟೇಂಟ್ ಜನರಲ್ ಮ್ಯಾನೇಜರ್ ಕೆ ಆರ್ ಡಿ ಸಿ ಸಿ ಪ್ರಧಾನ ಕಾರ್ಯಾಲಯ ರಾಯಚೂರು ೪) ದೇವಪ್ಪ ಆದೋನಿ ಕಚೇರಿ ಸಹಾಯಕ ಕೆ ಆರ್ ಡಿ ಸಿ ಪ್ರಧಾನ ಕಛೇರಿ, ರಾಯಚೂರು ೫) ಆನಂದ್ ಮೂಲಿಮನಿ ಅಸಿಸ್ಟೆಂಟ್ ಜನರಲ್ಲಿ ಮ್ಯಾನೇಜರ್ ಕೆ ಆರ್ ಡಿ ಸಿ ಸಿ ಪ್ರಧಾನ ಕಚೇರಿ ರಾಯಚೂರು ೬) ಅಲಿ ಮುರ್ತುಜಾ ಜನರಲ್ ಮ್ಯಾನೇಜರ್ ಆರ್ ಕೆ ಡಿ ಸಿ ಸಿ ಪ್ರಧಾನ ಬ್ಯಾಂP ೭) ಸಿ.ಎ.ರಾಘವೇಂದ್ರ ಬ್ರಾಂಚ್ ಮ್ಯಾನೇಜರ್ ಕೆ ಆರ್ ಡಿ ಸಿ ಸಿ ಮೇನ್ ಬ್ರಾಂಚ್ ರಾಯಚೂರು ಇವರುಗಳ ಬ್ಯಾಂಕ್ ಶಾಖೆಯಲ್ಲಿ ೨೩೮.೪೦ ಕೋಟಿ ರೂ ಭ್ರಷ್ಟಾಚಾರ ಮಾಡಲಾಗಿದೆ.
ಕರ್ನಾಟಕ ರೈತ ಸಂಘ ಜಿಲ್ಲಾಧ್ಯಕ್ಷ. ಹಾಗೂ ಸಹಕಾರಿ ಸಂಘದ ಸದಸ್ಯರಾದ ಮಲ್ಲಯ್ಯ ಕಟ್ಟಿಮನಿ, ತಿಪ್ಪಣ್ಣ ಚಿಕ್ಕಹೆಸರೂರು,ವೀರಭದ್ರಪ್ಪ ಹಡಪದ ಗಂಗಾಧರ ನಾಯಕ ಇದ್ದರು.