ಸೋವೇನಹಳ್ಳಿ: ಸ,ಹಿ,ಪ್ರಾಥಮಿಕ ಶಾಲೆಯಲ್ಲಿ ಅಕ್ಷರಾಭ್ಯಾಸ ಆರಂಭ

Laxman Bariker
ಸೋವೇನಹಳ್ಳಿ: ಸ,ಹಿ,ಪ್ರಾಥಮಿಕ ಶಾಲೆಯಲ್ಲಿ ಅಕ್ಷರಾಭ್ಯಾಸ ಆರಂಭ
WhatsApp Group Join Now
Telegram Group Join Now

ಸೋವೇನಹಳ್ಳಿ: ಸ,ಹಿ,ಪ್ರಾಥಮಿಕ ಶಾಲೆಯಲ್ಲಿ ಅಕ್ಷರಾಭ್ಯಾಸ ಆರಂಭ

ಕಲ್ಯಾಣ ಕರ್ನಾಟಕ ವಾರ್ತೆ

ಸಂಡೂರು:ತಾಲೂಕಿನ ಸೋವೇನಹಳ್ಳಿ ಗ್ರಾಮದ ಶತಮಾನಕಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಯಿ ಹಾಗೂ ಗುರುಗಳ ಸಾನಿಧ್ಯದಲ್ಲಿ ಮಕ್ಕಳಿಗೆ ಅಕ್ಷರಭ್ಯಾಸವನ್ನು ಮಾಡಿಸಲಾಯಿತು
ಸೋವೇನಹಳ್ಳಿ ಶಾಲೆಯಲ್ಲಿ ನೂತನವಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಶಾಲೆಯವತಿಯಿಂದ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಶಿಕ್ಷಕಿ ಮಂಗಳಗೌರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮನೆಯ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಎನ್ನುವಂತೆ ಎಲ್ಲಾ ತಾಯಂದಿರ ಮಡಿನಲ್ಲಿ ಮಕ್ಕಳು ಅಕ್ಷರಾಭ್ಯಾಸಕ್ಕೆ ಪ್ರಾರಂಭಿಸುತ್ತಿರುವುದು ಶ್ಲಾಘನೀಯವಾಗಿದೆ ಉಳ್ಳವರು ಶೃಂಗೇರಿಗೆ ಹೋಗಿ ತಮ್ಮ ಮಕ್ಕಳಿಗೆ ಅಕ್ಷರದ ಆರಂಭ ಮಾಡಿಸುತ್ತಾರೆ ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಆದ್ದರಿಂದ ನಮ್ಮ ಶಾಲೆಯ ಮುಖ್ಯಗುರುಗಳಾದ ರಾಧಾರವರ ನೇತೃತ್ವದಲ್ಲಿ ಶಾಲಾವತಿಯಿಂದಲೇ ಅಕ್ಷರಾಭ್ಯಾಸದ ಕಾರ್ಯಕ್ರಮ ನಡೆಯುತ್ತಿರುವುದು ಸಂತಸವಾಗಿದೆ ಎಂದರು ಸುಧಾ ಶಿಕ್ಷಕಿಯು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು
ನಂತರ ತಾಯಂದಿರ ಮಡಿಲಿನಲ್ಲಿ ಮಕ್ಕಳನ್ನು ಕುಳ್ಳಿರಿಸಿ ಸರಸ್ವತಿ ಪೂಜೆಯೊಂದಿಗೆ ಓಂ ಅಕ್ಷರ ಬರೆಯುವ ಮೂಲಕ ಅಕ್ಷರಾಭ್ಯಾಸವನ್ನು ಪ್ರಾರಂಭ ಮಾಡಲಾಯಿತು
ನಸಿನ್ ಭಾನು ಸ್ವಾಗತಿಸಿದರು ಜ್ಯೋತಿ ನಿರೂಪಿಸಿದರು ನಿಂಗಮ್ಮ ವಂದಿಸಿದರು
ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ರಾಧಾ, ಶಿಕ್ಷಕರಾದ ಬಸಾಪುರದ ರಾಮಪ್ಪ, ರವಿಕಿರಣ, ಸುಪುತ್ರಪ್ಪ ಶೃತಿ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article