ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಲಿಂಗಸುಗೂರ ಬಂದ್, ಬೃಹತ್ ಪ್ರತಿಭಟನೆ,
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ: ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಐಕ್ಯಹೋರಾಟಗಾರರು ಬಂದ್ ಹಾಗೂ ಬೃಹತ್ ಪ್ರತಿಭಟನೆ ಮಾಡಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು
ನಂತರ ಮಾತನಾಡಿದ ಮುಖಂಡರುಮುಖ್ಯಮಂತ್ರಿಗಳೆ ಆದೇಕೆ ತಾವು ಮೌನವಹಿಸಿದ್ದೀರಿ ಎನ್ನುವುದು ಅರ್ಥವಾಗುತ್ತಿಲ್ಲ. ನ್ಯಾಯಾಲಯದ ತೀರ್ಪಿಗೆ ಮುನ್ನ ತಾವು ಹಾಗು ತಮ್ಮ ಪಕ್ಷವು ಚಿತ್ರದುರ್ಗದ ಲಕ್ಷಾಂತರ ಜನರ ಸಮಾವೇಶದಲ್ಲಿ ಘೋಷಿಸಿದಂತೆ ನುಡಿದಂತೆ ನಡೆ ಯುತ್ತೇವೆ ಎಂಬ ಭರವಸೆ ಈಗ ದಿನದಿನೇ ದೂರವಾಗುತ್ತಿದೆ. ಇದ ರರ್ಥ ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನೊಂದ ಸಮುದಾ ಯಗಳ ಮಧ್ಯೆ ಪರ ವಿರೋಧದ ಪರಸ್ಪರ ವಾದ ವಿವಾದಗಳು ಹೆಚ್ಚಾಗಲಿ, ಈಗಾಗಲೇ ಆರಂಭವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ಮುಗಿದು ಖಾಲಿಯಾಗಲಿ, ಮತ್ತೊಂದು ಹತ್ತು ಹದಿನೈದು ವರ್ಷಗಳ ವಿದ್ಯೆ ಉದ್ಯೋ ಗ ಪಡೆದ ಕೆಲ ಬಲಾಡ್ಯ ಸಮುದಯಗಳೇ ಮತ್ತಷ್ಟು ಬಲಾಡ್ಯರಾಗಲಿ, ಅವಕಾಶ ವಂಚಿತ ಬಹು ಸಂಖ್ಯಾತರು ಬರಿಗೈಲಿ ಪರದಾಡಲಿ ಎಂಬ ಮನಸ್ಥಿತಿಗೆ ತಾವು ಶರಣಾಗಿದ್ದೀರಿ ಎಂಬ ಆತಂಕವು ತಳ ಸಮುದಾಯ ಗಳಲ್ಲಿ ಹಾಸು ಹೊಕ್ಕಿದೆ. ಬಿಜೆಪಿ ಸರ್ಕಾರದ ಒಳ ಮೀಸಲಾತಿ ತಾರತಮ್ಯವನ್ನು ಸಾರಾಸಗಟಾಗಿ ತಿರಸ್ಕರಿಸಿ ಜಾತ್ಯಾತೀತ ಮನೋಭಾವದ ಕಾಂಗ್ರೆಸ್ ಪಕ್ಷವನ್ನು ಅತ್ಯಧಿಕ ಸ್ಥಾನಗಳಲ್ಲಿ ಗೆಲ್ಲಿಸಿ ಸ್ಥಿರ
ಕಳೆದ ಇಪ್ಪತ್ತು ವರ್ಷಗಳ ಕಾಲ ಸರ್ವೋಚ್ಚನ್ಯಾಯಾಲಯದಲ್ಲಿ ನಡೆದ ಸುಧೀರ್ಘ ವಿಚಾರಣೆಯ ನಂತರವೇ ಸಾಮಾಜಿಕ ನ್ಯಾಯಕ್ಕೆ ಸ್ಪಷ್ಟ ಗೆಲುವು ದೊರೆತು ಎರಡು ತಿಂಗಳು ಗತಿಸಿದರೂ ತಾವುಗಳು ಮತ್ತೊಂ ದು ಸಮಿತಿಯ ನೇಮಕವೆಂಬ ಕಾಲಹರಣದ ಮತ್ತೊಂದು ಸುತ್ತಿನ ವಿಳಂಬಕ್ಕೆ ದಾರಿ ಮಾಡಿಕೊಡುತ್ತಿರು ವುದು ಯಾವ ಸೀಮೆಯ ನ್ಯಾಯ ಎನ್ನುವುದನ್ನು ಸಾರ್ವಜನಿಕವಾಗಿ ಪ್ರಕಟಿಸಿ , ಕಳೆದ ಮೂವತ್ತು ವರ್ಷಗಳಿಂದ ಆ ಯೋಗದ ರಚನೆ ಗಾಗಿ, ರಚನೆಯಾದ ಆಯೋ ಗದ ಅನುದಾನಕ್ಕಾಗಿ, ಅನುದಾನದ ನಂತ ರ ಆಯೋ ಗವು ನೀಡಿದ ವರದಿಯ ಶಿಫಾರಸ್ಸಿಗಾಗಿ ಇದೀಗ ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಅನುಷ್ಟಾನಕ್ಕಾಗಿ ಎಷ್ಟು ತಲೆಮಾರುಗಳು ಬೀದಿಗೆ ಬಂತು ಹೋರಾಡ ಬೇಕು ಎನ್ನುವುದನ್ನು ತಾವುಗಳು ಖಾತರಿಪಡಿ ಸಿ ಎಂದು ಈ ಜನಾಂದೋಲನದ ಮೂ ಲಕ ಆಗ್ರಹ ಪಡಿಸುತ್ತೇವೆ ಎಂದರು.
ಪಟ್ಟಣದ ಪ್ರವಾಸಿಮಂದಿರದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಪಟ್ಟಣದ ವಿವಿದೆಡೆ ಸಂಚರಿಸಿ ನಂತರ ಹೊಸಬಸ್ ನಿಲ್ದಾಣದ ಹತ್ತಿರ ಬಂದು ವೇದಿಕೆಯಾಗಿ ಮಾರ್ಪಟ್ಟಿತು
ಈ ಸಂದರ್ಭದಲ್ಲಿ ಪಾಮಯ್ಯ ಮುರಾರಿ, ಹೆಚ್.ಬಿ.ಮುರಾರಿ, ಲಿಂಗಪ್ಪ ಪರಂಗಿ, ಹನುಮಂತಪ್ಪ ಕುಣೆಕೆಲ್ಲೂರು, ಡಿ. ಬಿ. ಸೋಮನ ಮರಡಿ, ನಾಗಪ್ಪ ಈಚನಾಳ, ಯಂಕಪ್ಪ ಚಿತ್ತಾಪೂರು, ಉಮೇಶ ಹುನಕುಂಟಿ, ಮೋಹನ್ ಗೋಸ್ಲೆೆ, ಸಂಜೀವಪ್ಪ ಹುನ ಕುಂಟಿ, ಪ್ರಭುಲಿಂಗ ಮೇಗಳಮನಿ, ರಮೇಶ ಗೋಸ್ಟೆ, ಅನಿಲ್ ಕುರ್ಮರ, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಗ್ಯಾನಪ್ಪ ಕಟ್ಟಿಮನಿ, ಹುಸೇನಪ್ಪ ಕಳ್ಳಿ ಲಿಂಗಸುಗೂರು, ಹೆಚ್.ಎ.ಲಿಂಗಪ್ಪ ಹಟ್ಟಿ, ಲಿಂಗಸೂಗೂರು, ಮುದಗಲ್, ಆನಾಹೊಸರು, ಗುರುಗುಂಟಾ ಭಾಗದ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.