ಲಿಂಗಸಗೂರು,ಮಸ್ಕಿ, ಕುಷ್ಟಗಿ,ಮೀಸಲಾತಿ ಬದಲಾವಣೆ ಚರ್ಚೆ ಸುರು ಬಯ್ಯಾಪುರ, ಲಿಂಗಸಗೂರು,ಆನ್ವರಿ ಮಸ್ಕಿ !! ಹೂಲಿಗೇರಿ ಕುಷ್ಟಗಿಗೆ ಫಿಕ್ಸಾ!!?

Laxman Bariker
ಲಿಂಗಸಗೂರು,ಮಸ್ಕಿ, ಕುಷ್ಟಗಿ,ಮೀಸಲಾತಿ ಬದಲಾವಣೆ ಚರ್ಚೆ ಸುರು ಬಯ್ಯಾಪುರ, ಲಿಂಗಸಗೂರು,ಆನ್ವರಿ ಮಸ್ಕಿ !! ಹೂಲಿಗೇರಿ ಕುಷ್ಟಗಿಗೆ ಫಿಕ್ಸಾ!!?
WhatsApp Group Join Now
Telegram Group Join Now

 

,ಲಿಂಗಸಗೂರು,ಮಸ್ಕಿ, ಕುಷ್ಟಗಿ,ಮೀಸಲಾತಿ ಬದಲಾವಣೆ ಚರ್ಚೆ ಸುರು
ಬಯ್ಯಾಪುರ, ಲಿಂಗಸಗೂರು,ಆನ್ವರಿ ಮಸ್ಕಿ !! ಹೂಲಿಗೇರಿ ಕುಷ್ಟಗಿಗೆ ಫಿಕ್ಸಾ!!?

ಕಲ್ಯಾಣ ಕರ್ನಾಟಕ ವಾರ್ತೆ

(ಲಕ್ಷ್ಮಣ ಬಾರಿಕೇರ್)

ಲಿಂಗಸಗೂರು:ರಾಜಕಾರಣದಲ್ಲಿ ಯಾವ ಸಂದರ್ಭದಲ್ಲಿ ಏನು ನಡೆಯುತ್ತದೆಯೋ ಬಲ್ಲವರಾರು ಇದೀಗ ಮಸ್ಕಿ, ಲಿಂಗಸಗೂರು ಹಾಗೂ ಕುಷ್ಟಗಿ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದ್ದು ಮೀಸಲಾತಿ ಬದಲಾವಣೆಯಾಗುತಿದ್ದು ಮಸ್ಕಿಗೆ ಆನ್ವರಿ, ಬಯ್ಯಾಪುರ ಲಿಂಗಸಗೂರು,ಕುಷ್ಟಗಿಗೆ ಹೂಲಿಗೇರಿ ಎನ್ನುವ ಲೆಕ್ಕಾಚಾರದ ಮಾತುಗಳು ಜೋರಾಗಿಯೆ ಕೇಳಿಬರುತ್ತಿವೆ
ಹೌದು ಇದೀಗ ಮಸ್ಕಿ ಲಿಂಗಸಗೂರು ಹಾಗೂ ಕುಷ್ಟಗಿ ಕ್ಷೇತ್ರಗಳ ಮೀಸಲಾತಿ ಬದಲಾವಣೆಯಾಗುತಿದ್ದು ಹಿರಿಯ ರಾಜಕಾರಣಿಗಳಾದ ಬಸವರಾಜ ಪಾಟೀಲ್ ಆನ್ವರಿ, ಅಮರೇಗೌಡ ಪಾಟೀಲ್ ಬಯ್ಯಾಪುರ ಚುನಾವಣಗೆ ಸಜ್ಜಾಗುತಿದ್ದಾರೆ ಎನ್ನುವ ಮಾತುಗಳು ಸಾಕಷ್ಟು ಚರ್ಚೆಗಳು ಕ್ಷೇತ್ರದಲ್ಲಿ ನಡೆದಿದ್ದು ಮಾತ್ರ ಸುಳ್ಳಲ್ಲ
ಮುಂಬರುವ ಚುನಾವಣೆಯ ವೇಳೆಗೆ ಇದೀಗ ಎಸ್ಟಿ ಕ್ಷೇತ್ರವಾಗಿರುವ ಮಸ್ಕಿ ಕ್ಷೇತ್ರ ಹಾಗೂ ಎಸ್ಸಿ ಮೀಸಲು ಹೊಂದಿರುವ ಲಿಂಗಸಗೂರು ಕ್ಷೇತ್ರ ಸಾಮಾನ್ಯವಾಗಲಿವೆ ಎನ್ನಲಾಗುತಿದ್ದು ಸದರಿ ಕ್ಷೇತ್ರದಲ್ಲಿ ಹಿರಿಯ ರಾಜಕಾರಣಿಗಳಾದ ಬಸವರಾಜ ಪಾಟೀಲ್ ಆನ್ವರಿ ಮಸ್ಕಿ ಕ್ಷೇತ್ರದಲ್ಲಿ ತನ್ನ ಬಲಾಬಲ ಪರೀಕ್ಷೆ ಮಾಡಲು ಸಜ್ಜಾಗುತಿದ್ದಾರೆ ಎಂದು ಕೇಳಿ ಬರುತ್ತಿದೆ ಹಾಗೆ ಲಿಂಗಸಗೂರು ಕ್ಷೇತ್ರದಲ್ಲಿ ಅಮರೇಗೌಡ ಪಾಟೀಲ್ ಬಯ್ಯಾಪುರ ಆಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ
ಲಿಂಗಸಗೂರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ತೊಡಗಿರುವ ಬಯ್ಯಾಪುರ: ಅಮರೇಗೌಡ ಪಾಟೀಲ್ ಬಯ್ಯಾಪುರವರು ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು ಸಹಿತ ಇತ್ತೀಚೆಗೆ ಅವರು ಲಿಂಗಸಗೂರು ಕ್ಷೇತ್ರದ ಮೇಲೆ ಹೆಚ್ಚು ಆಸಕ್ತಿ ತೋರುತ್ತಿರುವಂತೆ ಕಂಡು ಬರುತ್ತಿದೆ ತಮ್ಮ ಬಣದ ಹಲವಾರು ಕಾರ್ಯಕರ್ತ ಮುಖಂಡರಿಗೆ ಸ್ಥಾನಗಳನ್ನು ಕೊಡಿಸಿ ನೇಮಕಾತಿ ಮಾಡಿ ಇತ್ತೀಚೆಗೆ ಪದಗ್ರಹಣ ಕಾರ್ಯಕ್ರಮಗಳನ್ನು ಮಾಡಿದರು ಹಲವಾರು ಸಭೆ ಸಮಾರಂಭ ಮದುವೆ ಇತ್ಯಾದಿಗಳಿಗೆ ಹೆಚ್ಚು ಹೆಚ್ಚು ಭಾಗಿಯಾಗುತಿದ್ದಾರೆ ಕ್ಷೇತ್ರದಲ್ಲಿ ಅವರ ಓಡಾಟ ಹೆಚ್ಚಾಗಿ ಕಂಡು ಬರುತಿದ್ದು ಸದರಿ ಚರ್ಚೆಗೆ ಇಂಬುಕೊಡುವAತಾಗಿದೆ ಅತ್ತ ಮಸ್ಕಿಯಲ್ಲಿಯು ಬಸವರಾಜ ಪಾಟೀಲ್ ಆನ್ವರಿಯವರು ಹೆಚ್ಚು ಒತ್ತು ನೀಡುತಿದ್ದಾರೆ ಎನ್ನಲಾಗುತ್ತಿದೆ
ಕುಷ್ಟಗಿಯಲ್ಲಿ ಮನೆ ಮಾಡುತ್ತಿರುವ ಹೂಲಿಗೇರಿ:ಲಿಂಗಸಗೂರು ಮೀಸಲು ಕ್ಷೇತ್ರದ ಮಾಜಿ ಶಾಸಕ ಡಿ ಎಸ್ ಹೂಲಿಗೇರಿಯವರು ಲಿಂಗಸಗೂರು ರಾಜಕಾರಣದ ಜೊತೆಗೆ ಕುಷ್ಟಗಿ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ ಎನ್ನುವುದಕ್ಕೆ ಅವರು ಕುಷ್ಟಗಿಯಲ್ಲಿಯು ಮನೆಯನ್ನು ನಿರ್ಮಿಸುತಿದ್ದಾರೆ ಎನ್ನಲಾಗುತಿದ್ದು ಸದರಿ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡುತ್ತದೆ
ಸದರಿ ಮೂರು ಕ್ಷೇತ್ರದ ಮೀಸಲಾತಿಯು ಬದಲಾವಣೆಯಾಗಲಿದ್ದು ಮಸ್ಕಿ ಹಾಗೂ ಲಿಂಗಸಗೂರು ಸಾಮಾನ್ಯ ಹಾಗೂ ಕುಷ್ಟಗಿ ಎಸ್ಸಿ ಎನ್ನುವ ಮಾತುಗಳು ದೆಹಲಿ ಮೂಲದ ರಾಜಕಾರಣಯೊಬ್ಬರ ಮೂಲಕ ಸ್ಥಳಿಯ ರಾಜಕಾರಣಿಗಳಿಗೆ ತಲುಪಿದ್ದು ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಸುರುವಾಗಿದೆ ಎಂದು ಹೇಳಲಾಗುತ್ತಿದೆ
ಈ ಮೂರು ಕ್ಷೇತ್ರಗಳ ಮೀಸಲಾತಿ ಬದಲಾವಣೆಯ ಬಲವಾದ ಮಾತುಗಳು ಕೇಳಿಬರುತಿದ್ದು ಅದು ನಿಜ ಎಂಬಂತೆ ರಾಜಕಾರಣಿಗಳು ಸಹಿತ ಆಯಾ ಕ್ಷೇತ್ರದಲ್ಲಿ ಓಡಾಡುತಿದ್ದಾರೆ ಅದು ಎಷ್ಟರ ಮಟ್ಟಿಗೆ ನಿಜ ಎಂಬುದು ಸದ್ಯ ನಿಗೂಢವಾಗಿದೆ

WhatsApp Group Join Now
Telegram Group Join Now
Share This Article