ಲಿಂಗಸಗೂರು-ರೋಡಲಬಂಡ(ಯುಕೆಪಿ) ರಸ್ತೆ ದುರಸ್ತಿ ಕಾಮಗಾರಿ, ಕಳಪೆ,ಆರೋಪ

Laxman Bariker
ಲಿಂಗಸಗೂರು-ರೋಡಲಬಂಡ(ಯುಕೆಪಿ) ರಸ್ತೆ ದುರಸ್ತಿ ಕಾಮಗಾರಿ, ಕಳಪೆ,ಆರೋಪ
Oplus_0
WhatsApp Group Join Now
Telegram Group Join Now

ಲಿಂಗಸಗೂರು-ರೋಡಲಬಂಡ(ಯುಕೆಪಿ) ರಸ್ತೆ ದುರಸ್ತಿ ಕಾಮಗಾರಿ, ಕಳಪೆ,ಆರೋಪ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದಿಂದ ಕರಡಕಲ್ ಮಾರ್ಗವಾಗಿ ಸಾಗುವ ರೋಡಲಬಂಡಾ (ಯುಕೆಪಿ) ರಸ್ತೆ ದುರಸ್ತಿ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಡೆದಿದ್ದು ಡಾಂಬರು ಪ್ರಮಾಣ ಇಲ್ಲದಿರುವುದರಿಂದ ದುರಸ್ತಿ ಕಾಮಗಾರಿ ಮಾಡುತ್ತಿರುವಾಗಲೆ ಕಿತ್ತಿಹೋಗಿದ್ದು ಗುಣಮಟ್ಟವಿಲ್ಲದ ಕಾಮಗಾರಿ ನಡೆಯುತ್ತಿದ್ದು ಕೂಡಲೆ ಕಾಮಗಾರಿಯ ಬಿಲ್ ತಡೆದು ಸರಿಪಡಿಸಬೇಕೆಂದು ದಸಸಂ ನ ಅಮರೇಶ ಗೋಸ್ಲೆ ಒತ್ತಾಯಿಸಿದ್ದಾರೆ
ಲಿಂಗಸಗೂರು ಪಟ್ಟಣದಿಂದ ಕರಡಕಲ್ ಈಚನಾಳ ಕ್ರಾಸ್ ಮಾರ್ಗವಾಗಿ ಸಾಗುವ ಸುಮಾರು ೨೦ಕಿಮಿ ರಸ್ತೆಗೆ ರಿಪೇರಿ ಕೆಲಸ ಪ್ರಾರಂಭವಾಗಿದ್ದು ತಗ್ಗುಗುಂಡಿಗಳು ಇದ್ದಲ್ಲಿ ಡಾಂಬರು ಹಾಕಲಾಗುತ್ತಿದ್ದು ಹಾಕಿದ ಹಲವೆಡೆ ಕಿತ್ತಿಹೋಗಿದ್ದು ಅದರಲ್ಲಿ ಡಾಂಬರು ಹಾಕದೆ ಕಾಮಗಾರಿ ಮಾಡಿರುವುದೆ ಕಾರಣವಾಗಿದೆ ಎಂದು ಆರೋಪಿಸಲಾಗುತ್ತಿದೆ ಸದರಿ ರಸ್ತೆಗೆ ಎಲ್ಲೆಲ್ಲಿ ಡಾಂಬರು ಹಾಕಲಾಗಿದೆಯೋ ಅಲ್ಲೆಲ್ಲ ಹಾಕುವಾಗಲೆ ಪುನಃ ಕಿತ್ತಿಹೋಗಿದ್ದು ಇದೆಂತ ಕಾಮಗಾರಿ ಎಂದು ಸಾರ್ವಜನಿಕರು ಹಾಗೂ ಸಂಘಟನೆಯವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ
ಇದೆ ರಸ್ತೆಯಲ್ಲಿ ಕರಡಕಲ್ ಹತ್ತಿರದ ಬ್ರಿಜ್ ಮೇಲೆ ಸಿಸಿಕಾಮಗಾರಿ ನಡೆಯುತಿದ್ದು ಅದುಕೂಡ ಸಿಸಿಹಾಕಿದೆ ರಾತ್ರಿಯೆ ಕಿತ್ತಿಬಂದಿದೆ
ಜAಗಲ್ ಕಟಿಂಗ್ ಕೆಲಸವು ನಡೆಯುತಿದ್ದು ಅಕ್ಕಪಕ್ಕದಲ್ಲಿ ಯಾವುದೆ ಗಿಡಗಂಟಿ ಬೆಳೆದಿರದಿದ್ದರು ರಸ್ತೆಗೆ ಕೇವಲ ಗೆರೆಗಳನ್ನು ಎಳೆದು ಬಿಲ್ ಮಾಡಲಾಗುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಸಿದ್ದಾರೆ
ಒಟ್ಟಾರೆಯಾಗಿ ಕಾಮಗಾರಿ ಕಳಪೆಯಾಗಿದ್ದು ಡಾಂಬರು ಬಳಸುವ ಕಡೆ ಡಾಂಬರು ಇಲ್ಲ ಸಿಮೆಂಟ್ ಬಳಸುವ ಕಡೆ ಸಿಮೆಂಟ್ ಇಲ್ಲ ಎನ್ನುವಂತಾಗಿದ್ದು ಸರಕಾರದ ಹಣ ದುರುಪಯೋಗವಾಗುತ್ತಿದೆ ಕೂಡಲೇ ಇಲಾಖೆಯವರು ಕ್ರಮಜರುಗಿಸಿ ರಸ್ತೆಕಾಮಗಾರಿ ಸರಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ
ಹೇಳಿಕೆ:ಸದರಿ ಲಿಂಗಸಗೂರು-ರೋಡಲಬಂಡಾ(ಯುಕೆಪಿ) ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ಡಾಂಬರು ಕಡಿಮೆ ಇರುವುದರಿಂದ ಕಾಮಗಾರಿಯನ್ನು ನಿಲ್ಲಿಸಲಾಗಿದ್ದು ಗುಣಮಟ್ಟದ ಕೆಲಸ ಮಾಡಿಸಲು ಕ್ರಮಕೈಗೊಳ್ಳುವೆ- ಬರ‍್ಪಪ ಜೆಇ ಪಿಡಬ್ಲೂö್ಯಡಿ ಲಿಂಗಸಗೂರು

WhatsApp Group Join Now
Telegram Group Join Now
Share This Article