ಲಿಂಗಸಗೂರು ಇಂದಿರಾ ಕ್ಯಾಂಟೀನ್ ಅರೆಬೆಂದ ಚಪಾತಿ, ಪ್ರಶ್ನೆ ಮಾಡಿದರೆ ಧಮಕಿ ಹಾಕುವ ಸಿಬ್ಬಂದಿ!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ಇಂದಿರಾ ಕ್ಯಾಂಟೀನ್ ಗ್ರಾಹಕರಿಗೆ ಸರಿಯಾದ ಆಹಾರ ನೀಡುತ್ತಿಲ್ಲವೆಂದು ಆರೋಪಗಳು ಕೇಳಿಬರುತ್ತಿದ್ದು ಇಂದುಕೂಡ ಅಂತಹುದೆ ಘಟನೆ ಜರುಗಿದ್ದು ಕ್ಯಾಂಟೀನ್ ಗೆ ಹೋದ ಗ್ರಾಹಕರಿಗೆ ಅರೆಬೆಂದ ಚಪಾತಿ ನೀಡಲಾಗಿದ್ದು ಪ್ರಶ್ನೆ ಮಾಡಿದವರಿಗೆ ಅಲ್ಲಿಯ ಸಿಬ್ಬಂದಿ ಧಮಕಿ ಹಾಕಿದ್ದಾರೆಂದು ಗ್ರಾಹಕರು ಆರೋಪಿಸಿದ್ದಾರೆ
sಸದರಿ ಇಂದಿರಾ ಕ್ಯಾಂಟೀನ್‌ನ ಆಹಾರದಲ್ಲಿ ಈ ಹಿಂದೆ ಹುಳುಕಾಣಿಸಿಕೊಂಡಿತ್ತು ಆಗ ಸರಿಪಡಿಸಿಕೊಳ್ಳುತ್ತೇವೆ ಎನ್ನುವ ಗುತ್ತಿಗೆದಾರರು ಯಾವುದನ್ನು ಸರಿಪಡಿಸಿಕೊಂಡAತೆ ಕಾಣುತ್ತಿಲ್ಲ
ಇಂದು ಮಧ್ಯಾಹ್ನ ಗ್ರಾಹಕರು ಊಟಕ್ಕೆ ಹೋದ ಸಂದರ್ಭದಲ್ಲಿ ಗ್ರಾಹಕರಿಗೆ ಅರೆಬೆಂದ ಚಪಾತಿಯನ್ನು ನೀಡಲಾಗಿದ್ದು ಅದನ್ನು ತಿಂದಿರುವ ಹಲವಾರು ವಿದ್ಯಾರ್ಥಿಗಳು ಹೊಟ್ಟೆನೋವು ಕಾಣಿಸಿಕೊಂಡಿರುವ ಬಗೆಗೆ ಪ್ರತ್ಯಕ್ಷದರ್ಶಿಗಳಿಗೆ ತಿಳಿಸಿದ್ದಾರೆ ಅದನ್ನು ಕಂಡAತಹ ಅಮರೇಶ ಸಾಲಿ ಉಸ್ಕಿಹಾಳ ಎನ್ನುವವರು ಇಂತಹ ಆಹಾರ ನೀಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ ಅಲ್ಲದೆ ನೀವು ಮೆನುವಿನ ಪ್ರಕಾರ ಆಹಾರ ನೀಡುವುದಿಲ್ಲ ಯಾಕೆ ಎಂದು ಕೇಳಿದ್ದಾರೆ ಅದೆಲ್ಲವನ್ನು ಏನು ಕೇಳುತ್ತೀರಿ ನಾವುಕೊಟ್ಟದ್ದು ತಿನಬೇಕು ಎಂದು ಉಡಾಫೆಯಾಗಿ ಮಾತನಾಡಿದ್ದಾರೆ ಕೂಡಲೆ ಗುತ್ತಿಗೆದಾರರ ಟೆಂಡರ್ ರದ್ದುಪಡಿಸಬೇಕು ಹಾಗೂ ಧಮಕಿಹಾಕುವ ಇಲ್ಲಿಯ ಸಿಬ್ಬಂದಿಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ
ಚಪಾತಿ ಹಾಗೂ ಅನ್ನ ಸಾಂಬರು ಸರಿಯಾಗಿ ಬೆಂದಿರುವುದಿಲ್ಲ ಗುಣಮಟ್ಟದ ಆಹಾರ ನೀಡುವುದಿಲ್ಲ ಮೆನುವಿನ ಪ್ರಕಾರ ಆಹಾರ ದೊರೆಯುವುದಿಲ್ಲ ಸೇರಿದಂತೆ ಹಲವಾರು ಕೊರತೆಗಳ ನಡುವೆ ಇಂದಿರಾ ಕ್ಯಾಂಟೀನ್ ನಡೆಯುತಿದ್ದು ಸರಕಾರದಿಮದ ಬರುವ ಹಣ ಇಲ್ಲಿ ಸರಿಯಾಗಿ ಬಳಕೆಯಾಗದೆ ಬಡವರ ಹೊಟ್ಟೆ ತುಂಬಿಸುವ ಬದಲು ಗುತ್ತಿಗೆದಾರನ ಜೇಬು ತುಂಬಿಸಲಾಗುತ್ತಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
ಹೇಳಿಕೆ: ಇಂದಿರಾ ಕ್ಯಾಂಟಿನ್ ಬಗೆಗೆ ಆರೋಪಗಳು ಕೇಳಿಬರುತ್ತಿವೆ ನಮಗೆ ದೂರು ಬಂದರೆ ಕೂಡಲೇ ಸಂಬAಧಿಸಿದ ಅಧಿಕಾರಿಗಳಿಗೆ ಸದರಿ ಕ್ಯಾಂಟೀನ್ ಗುತ್ತಿಗೆದಾರಿಕೆಯನ್ನು ರದ್ದುಪಡಿಸಲು ಬರೆಯಲಾಗುವುದು-ರಡ್ಡಿ ರಾಯನಗೌಡ-ಮುಖ್ಯಾಧಿಕಾರಿಗಳು ಪುರಸಭೆ ಲಿಂಗಸಗೂರು