ಲಿಂಗಸಗೂರು-ಬೆಂಗಳುರು ಬಸ್ ವಿಳಂಬ,ಪ್ರಯಾಣಿಕರ ಪ್ರತಿಭಟನೆ, ವಾಗ್ವಾದ

Laxman Bariker
ಲಿಂಗಸಗೂರು-ಬೆಂಗಳುರು ಬಸ್ ವಿಳಂಬ,ಪ್ರಯಾಣಿಕರ ಪ್ರತಿಭಟನೆ, ವಾಗ್ವಾದ
WhatsApp Group Join Now
Telegram Group Join Now

ಲಿಂಗಸಗೂರು-ಬೆಂಗಳುರು ಬಸ್ ವಿಳಂಬ,ಪ್ರಯಾಣಿಕರ ಪ್ರತಿಭಟನೆ, ವಾಗ್ವಾದ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದಿಂದ ಬೆಂಗಳೂರಿಗೆ ಪ್ರಯಾಣಿಸಲು ಬಸ್ ಗಳ ಕೊರತೆಯಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾದು ನಂತರ ಸೋಮವಾರ ರಾತ್ರಿ ಬಸ್ ಡಿಪೋಗೆ ತೆರಳಿ ಪ್ರತಿಭಟನೆ ಮಾಡಿ ಬಸ್ ಬಿಡುವಂತೆ ಒತ್ತಾಯಿಸಿದ ಘಟನೆ ಜರುಗಿದೆ


ಪಟ್ಟಣದಿಂದ ಬೆಂಗಳುರಿಗೆ ತೆರಳಲು ತಾಲೂಕಿನ ವಿವಿಧ ಗ್ರಾಮಗಳ ಕೂಲಿಕಾರ್ಮಿಕರು ಹಾಗೂ ಶಾಲೆಗಳಲ್ಲಿ ಬಿಸಿಯೂಟ ಮಾಡುತ್ತಿರುವ ಅಡುಗೆಯವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಾಗಿ ತೆರಳಲು ಸೋಮವಾರ ಸಂಜೆ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ ಆದರೆ ಬೆಂಗಳುರಿಗೆ ಸಾಕಷ್ಟು ಬಸ್ ತೆರಳಿದರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಕರು ಬಂದಿರುವುದರಿAದ ಬಸ್ ಗಳು ಫುಲ್ ಆಗಿ ತೆರಳಲು ತೊಂದರೆಯಾಗಿದೆ ಕೂಡಲೆ ವಿಷಯವನ್ನು ಡಿಪೋ ಮೇನೇಜರ್ ರಾಹುಲ್ ವನಸೋರೆಯವರ ಗಮನಕ್ಕೆ ತಂದಿದ್ದಾರೆ ಅವರು ಬೇರೆಬಸ್ ಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಆದರೂ ವಿಳಂಭವಾದಾಗ ಪುನಃಪುನB ಕರೆಮಾಡಿದಾಗ ಡಿಪೋಮೇನೇಜರ್ ಫೋನ್ ಕರೆ ಸ್ವೀಕರಿಸಿಲ್ಲ
ಡಿಪೋಗೆ ಆಗಮಿಸಿದ ಪ್ರಯಾಣಿಕರು:ಬಸ್ ಬರಲು ವಿಳಂಭವಾಗಿರುವುದರಿAದ ಆಕ್ರೋಶಗೊಂದ ಪ್ರಯಾಣಿಕರು ಬಸ್ ಡಿಪೋಗೆ ತೆರಳಿ ಬಸ್ ವ್ಯವಸ್ಥೆ ಮಾಡಲು ಒತ್ತಾಯಿಸಿದ್ದಾರೆ ಅಲ್ಲಿರುವ ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಲಾಗುತ್ತದೆ ಸ್ವಲ್ಪ ತಾಳ್ಮೆ ಇರಲಿ ಎನ್ನುತ್ತಲೆ ಪ್ರಯಾಣಿಕರು ಆಕ್ರೋಶಗೊಂಡು ಅಧಿಕಾರಿಗಳ ವಿರುದ್ದ ಧಿಕ್ಕಾರ ಘೋಷಣೆಕೂಗಿದ್ದಾರೆ
ವಾಗ್ವಾದ:ಪ್ರಯಾಣಿಕರು ಧಿಕ್ಕಾರಕೂಗುತ್ತಲೆ ಸ್ಥಳಕ್ಕೆ ಆಗಮಿಸಿದ ಮ್ಯಾನೇಜರ ರಾಹುಲ್ ವನಸೂರೆ ನೀವು ಧಿಕ್ಕಾಗಕೂಗುವುದ್ಯಾಕೆ ಎಂದು ಪ್ರಶ್ನಿಸಿದ್ದಾರೆ ಆಗ ಮಾತಿಗೆ ಮಾತು ಬೆಳೆದು ಎಸ್ ಎಫ್ ಐನ ರಮೇಶವೀರಾಪೂರ ಏರುಧ್ವನಿಯಲ್ಲಿ ಮಾತನಾಡಿದಾಗ ವಾಗ್ವಾದ ನಡೆದಿದೆ
ವಾಗ್ವಾದ ತಿಳಿಸೊಳಿಸಿದ ಪಿಐ ಪುಂಡಲೀಕ:ಬಸ್ ಡಿಪೋದಲ್ಲಿ ಗಲಾಟೆ ನಡೆಯುತ್ತಿರುವುದರ ಮಾಹಿತಿ ಪಡೆದ ಪಿಐ ಪುಂಡಲಿಕ ಪಟ್ಟತ್ತರ ಸ್ಥಳಕ್ಕೆ ಆಗಮಿಸಿ ವೇಳೆಯಾಗಿದೆ ನಿರ್ವಾಹಕರ ಚಾಲಕರ ವ್ಯವಸ್ಥೆ ಮಾಡಿಕೊಳ್ಳಬೇಕು ವಿಳಂಭವಾದರು ಬೇರೆ ಬಸ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ ವಾಗ್ವಾದ ಮಾಡುವುದಕಿಂತ ವಿಷಯ ನಮ್ಮ ಗಮನಕ್ಕೆ ತರಬೇಕಾಗಿತ್ತು ಎಂದು ಸಮಾಧಾನಿಸಿದರು
ಈ ನಡುವೆ ಡಿಪೋ ಮ್ಯಾನೇಜರ್ ಪ್ರಕರಣ ದಾಖಲಿಸಿ ಎಂದರು ಅದಕ್ಕೆ ವಿರುದ್ದವಾಗಿ ಸಂಘಟನೆಯರು ನಾವು ಪ್ರಕರಣ ದಾಖಲಿಉತ್ತೇವೆ ತೆಗೆದುಕೊಳ್ಳಿ ಎನ್ನುವ ಹಂತ ತಲುಪಿತು
ನಂತರದಲ್ಲಿ ಬಸ್ ಗಳ ವ್ಯವಸ್ಥೇ ಮಾಡಿಕೊಡಲಾಯಿತು

WhatsApp Group Join Now
Telegram Group Join Now
Share This Article