ಲಿಂಗಸಗೂರು:ಖಾಸಗಿ ಆಸ್ಪತ್ರೆಗಳ ಸೇವೆಗಳು ಸ್ಥಗಿತ, ವೈದ್ಯರ ಪ್ರತಿಭಟನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗುರ:ರಾಯಚೂರು ಜಿಲ್ಲೆಯ ವಿಜಿಕೆ ಪಾಲಿಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್‌ನಲ್ಲಿ ೨೫ರಂದು ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಆಸ್ಪತ್ರೆಯ ಸಿಬ್ಬಂದಿ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಗಂಭೀರ ಅನಾರೋಗ್ಯದ ರೋಗಿಗಳ ಜೀವಕ್ಕೆ ಅಪಾಯವನ್ನುಂಟುಮಾಡಿ ಹಿಂಸಾಚಾರ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಲು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಗೌರವ ಕಾರ್ಯದರ್ಶಿ ಡಾ.ರಂಗನಾಥ ನೇತೃತ್ವದಲ್ಲಿ ವೈದ್ಯರು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತ ಶಿಂಧೆ ಅವಿನಾಶ ಅವರಿಗೆ ಸಲ್ಲಿಸಿದರು.
ರಾಯಚೂರು ನಗರ ಮತ್ತು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವ ಕಾರಣ ಜಿಲ್ಲೆಯ ಹಾಗೂ ತಾಲೂಕಗಳಲ್ಲಿ ಎಲ್ಲಾ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ಸ್ವಯಂಪ್ರೇರಣೆಯಿಂದ ತುರ್ತು ಸೇವೆ ಹೊರತುಪಡಿಸಿ ದಿ೨೮ರಿಂದ ೨೯ರವರಗೆ ಎಲ್ಲಾ ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಹಾಗೂ ದಿ ೩೦ರಂದು ಬೆಳೆಗ್ಗೆ ೯.೦೦ರಿಂದ ಸೇವೆ ಪುನ ಆರಂಭವಾಗುವದು ಮತ್ತು ಕೆಲಸದ ಸ್ಥಳದಲ್ಲಿ ಎಲ್ಲಾ ಆರೋಗ್ಯ ವೃತ್ತಿಪರರಿಗೆ ಭದ್ರತೆ ಸುರಕ್ಷತೆ ಕಲ್ಪಿಸಬೇಕು ವಿಜಿಕೆ ಪಾಲಿಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್‌ನಲ್ಲಿ ಹಿಂಸಾಚಾರ ಮಾಡಿದ ಅಪರಾಧಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿರುವರು.
ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ವೈದ್ಯರಾದ ತಾಲೂಕು ಅಧ್ಯಕ್ಷ ಡಾ.ಲಕ್ಷö್ಮಪ್ಪ , ಡಾ .ಬಸಲಿಂಗಪ್ಪ, ಡಾ.ರುದ್ರಗೌಡ ಪಾಟೀಲ,ಡಾ.ರಾಚ್ಚಪ್ಪ ಬುದ್ದಿನ್ನಿ, ಡಾ,ಆನಂದ ಚೌದರಿ, ಡಾ.ವಿಜಯ ಕುಮಾರ ಹೆಸರೂರ, ಡಾ.ಡಿ.ಎಚ ಕಡದಳ್ಳಿ ಡಾ.ಗುರುರಾಜ ದೇಶಪಾಂಡೆ, ಡಾ.ವನಮಾಲಾ ಡಾ.ಖಾಜಾಮೊಹಿನುದ್ದಿನ ಹಾಗೂ ಇತರೆ ವೈದ್ಯರು ನರ್ಸಿಂಗ ವಿದ್ಯಾರ್ಥಿಗಳು ಸೇರಿದಂತೆ ಇದ್ದರು.