ಲಿಂಗಸಗೂರು: ಹಾಡುಹಗಲೆ ಇಸ್ಪೀಟ್ ಜೂಜಾಟ ಬಲುಜೋರು, ತಡೆಯುವವರಾರು?

Laxman Bariker
ಲಿಂಗಸಗೂರು: ಹಾಡುಹಗಲೆ ಇಸ್ಪೀಟ್ ಜೂಜಾಟ ಬಲುಜೋರು, ತಡೆಯುವವರಾರು?
WhatsApp Group Join Now
Telegram Group Join Now

ಲಿಂಗಸಗೂರು: ಹಾಡುಹಗಲೆ ಇಸ್ಪೀಟ್ ಜೂಜಾಟ ಬಲುಜೋರು, ತಡೆಯುವವರಾರು?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನಲ್ಲಿ ಇಸ್ಪೀಟ್ ಜೂಜಾಟ್ ವಿಪರೀತವಾಗಿದ್ದು ಇದರಿಂದ ಹಲವಾರು ಬಡಕುಟುಂಬಗಳು ಹಾಳಾಗುತಿದ್ದು ಇಸ್ಪೀಟ್ ಆಡಿಸುವವ ಗುಂಡಗಾಗುತ್ತಿದ್ದರೆ ಹಲವಾರು ಜನ ಜೂಜಾಟಕ್ಕೆ ಬಿದ್ದು ತೊಂದರೆ ಅನುಭವಿಸುತ್ತಿದ್ದಾರೆಂದು ಹೇಳಲಾಗುತಿದ್ದು ತಾಲೂಕಿನಲ್ಲಿ ಜೋರಾಗಿದ್ದು ತಡೆಯುವವರಾರು ಎನ್ನುವಂತಾಗಿರುವುದು ಶೋಚನೀಯವೇ ಸರಿ
ತಾಲೂಕಿನ ಹಲವಾರು ಭಾಗದಲ್ಲಿ ಇಸ್ಪೀಟ್ ಜೂಜಾಟ ಎಗ್ಗಿಲ್ಲದೆ ನಡೆಯುತ್ತಿವೆ ಎನ್ನುವ ಸುದ್ದಿಗಳು ಮೇಲಿಂದ ಮೇಲೆ ಕೇಳಿಬರುತಿದ್ದು ಅವುಗಳಿಗೆ ಕಡಿವಾಣ ಇಲ್ಲದಂತಾಗಿದೆ

ತಾಲೂಕಿನ ಛತ್ತರ ಗ್ರಾಮದ ಹೊರವಲಯದಲ್ಲಿ ಹಾಡುಹಗಲೇ ಯಾರ ಭಯವಿಲ್ಲದೆ ಲಕ್ಷಾಂತರ ರೂಪಾಯಿ ಹಣ ಜೂಜಿಗೆ ಹಾಕಿ ಇಸ್ಪೀಟ್ ಆಟ ಆಡುತ್ತಿರುವ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ಲೊಕೇಷನ್ ಸಹಿತ ಹರಿದಾಡುತ್ತಿದೆ ನಾಗಲಾಪುರ ಭಾಗದಲ್ಲಿ ಛತ್ತರ,ಗೊರೇಬಾಳ ಭಾಗದಲ್ಲಿ ಹೀಗೆ ನಾನಾ ಕಡೆಯಲ್ಲಿ ಹಾಡುಹಗಲೆ ಜೂಜಾಟ ನಡೆಯುತಿದ್ದು ಅಲ್ಲಿಗೆ ಜಿಲ್ಲೆ ಹಾಗೂ ಹೊರಜಿಲ್ಲೆಯಿಂದ ಆಟಗಾರರು ಬರುತ್ತಾರೆ ಎನ್ನಲಾಗುತ್ತಿದೆ
ಲಿಂಗಸಗೂರು ಪಟ್ಟಣದಲ್ಲಿಯು ಕ್ಲಬ್ ಹೆಸರಿನಲ್ಲಿಯೆ ಜೂಜಾಟ ಆಡಲಾಗುತ್ತಿದೆ ಎನ್ನಲಾಗುತ್ತಿದ್ದು ಕ್ಲಬ್ ನ ನಿಯಮಗಳನ್ನು ಗಾಳಿಗೆ ತೂರಿ ಇಲ್ಲಿ ಜೂಜಾಟ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ
ಜೂಜಾಟ ಆಡುವುದರಿಂದ ಹಲವಾರು ಜನ ಸಾಲದ ಶೂಲಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಾರೆ ಆದರೆ ಆಡಿಸುವ ಆಟಗಾರರು ಮಾತ್ರ ದುಂಡಗಾಗುತ್ತಿದ್ದಾರೆ ಎನ್ನಲಾಗುತ್ತಿದ್ದು ಇದನ್ನು ಮಟ್ಟಹಾಕುವವರಾರು ಎನ್ನುವಂತಾಗಿದೆ ಇನ್ನು ಮುಂದಾದರು ಕಡಿವಾಣ ಹಾಕಬಹುದೇ ಕಾದುನೋಡೋಣ?

WhatsApp Group Join Now
Telegram Group Join Now
Share This Article